ಪಿಂಜಾರ್–ನದಾಫ್ ಸಮಾಜದ ಪ್ರತಿನಿಧಿಯಾಗಿ ನನ್ನನ್ನು ಭಾವಿಸಿ: ಶಾಸಕ ನಾರಾ ಭರತರೆಡ್ಡಿ
ಬಳ್ಳಾರಿ, 09 ನವೆಂಬರ್ (ಹಿ.ಸ.) ನಿಮ್ಮ ಸಮಾಜವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಇಲ್ಲ ಎಂದು ಕೊರಗಬೇಡಿ. ನಾನೇ ನಿಮ್ಮ ಸಮಾಜದ ಪ್ರತಿನಿಧಿ ಎಂದು ಭಾವಿಸಿ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರು ಪಿಂಜಾರ್–ನದಾಫ್ ಸಮಾಜದವರಿಗೆ ಭರವಸೆ ನೀಡಿದರು. ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ನಡೆ
`ನಾನೇ ನಿಮ್ಮ ಪ್ರತಿನಿಧಿ' ಶಾಸಕ ನಾರಾ ಭರತರೆಡ್ಡಿ


`ನಾನೇ ನಿಮ್ಮ ಪ್ರತಿನಿಧಿ' ಶಾಸಕ ನಾರಾ ಭರತರೆಡ್ಡಿ


ಬಳ್ಳಾರಿ, 09 ನವೆಂಬರ್ (ಹಿ.ಸ.)

ನಿಮ್ಮ ಸಮಾಜವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಇಲ್ಲ ಎಂದು ಕೊರಗಬೇಡಿ. ನಾನೇ ನಿಮ್ಮ ಸಮಾಜದ ಪ್ರತಿನಿಧಿ ಎಂದು ಭಾವಿಸಿ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರು ಪಿಂಜಾರ್–ನದಾಫ್ ಸಮಾಜದವರಿಗೆ ಭರವಸೆ ನೀಡಿದರು.

ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಪಿಂಜಾರ್–ನದಾಫ್ ಸಂಘದ 34ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪಿಂಜಾರ್–ನದಾಫ್ ಸಮಾಜದೊಂದಿಗೆ ತಮ್ಮ ಸ್ನೇಹ, ಬಾಂಧವ್ಯ ಮತ್ತು ಸಹೋದರತ್ವ ಉತ್ತಮವಾಗಿದೆ. ಈ ಸಮಾಜದ ಹಿರಿಯರಾದ ದಿವಂಗತ ಹಿರೇಹಾಳ್ ಇಬ್ರಾಹಿಂಸಾಬ್ ಅವರು ತಮ್ಮನ್ನು ಮೊಮ್ಮಗ ಎಂದೇ ಕರೆಯುತ್ತಿದ್ದರು. ತಮ್ಮ ರಾಜಕೀಯ ಭವಿಷ್ಯಕ್ಕೆ ಆಶೀರ್ವಾದ ಮಾಡಿದ್ದರು. ಅವರು ನುಡಿದ ಭವಿಷ್ಯದಂತೆ ಇಂದು ಶಾಸಕನಾಗಿ ನಿಮ್ಮ ಮುಂದೆ ನಿಂತಿದ್ದೇನೆ ಎಂದು ಸ್ಮರಿಸಿದರು.

ನಾನು ನಿಮ್ಮ ಸಮಾಜದ ಮೊಮ್ಮಗನಿದ್ದಂತೆ. ಪ್ರಸ್ತುತ ಕರ್ನಾಟಕದಲ್ಲಿ ಪಿಂಜಾರ್–ನದಾಫ್ ಸಮಾಜವನ್ನು ಪ್ರತಿನಿಧಿಸುವ ಶಾಸಕರು ಅಥವಾ ಸಂಸದರು ಇಲ್ಲ. ಹೀಗಾಗಿ ನನ್ನನ್ನೇ ನಿಮ್ಮ ಸಮಾಜದ ಶಾಸಕ ಎಂದು ಭಾವಿಸಿ ಎಂದು ಮನವಿ ಮಾಡಿದರು.

ಸಮಾಜದ ಹಿರಿಯರನ್ನು ಸ್ಮರಿಸಿದ ಅವರು, ಸಂಘದ ಚಟುವಟಿಕೆಗಳಿಗೆ 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಶಾಸಕಿ ಅನ್ನಪೂರ್ಣಾ ತುಕಾರಾಂ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ನಗರದ ಖಾಜಿ ಗುಲಾಂ ಮೊಹಮ್ಮದ್ ಸಿದ್ದಿಕಿ, ಪಿಂಜಾರ್–ನದಾಫ್ ಸಮಾಜದ ರಾಜ್ಯ ಮುಖಂಡ ಜಲೀಲಸಾಬ್, ವಿಭಾಗ ಅಧ್ಯಕ್ಷ ಶಾಸಾಬ್, ಜಿಲ್ಲಾಧ್ಯಕ್ಷ ಮೌಲಾಲಿ, ನಗರಾಧ್ಯಕ್ಷ ನಬಿಸಾಬ್, ಮೇಯರ್ ಗಾದೆಪ್ಪ, ಅಲ್ಲಂ ಪ್ರಶಾಂತ್, ಹುಮಾಯೂನ್ ಖಾನ್, ವೆಂಕಟೇಶ್ ಪ್ರಸಾದ್, ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande