ಪಟಾಕಿ ಖರೀದಿಗೆ ಹಣ ವ್ಯಯಿಸದೆ ಪೌರಕಾರ್ಮಿಕರಿಗೆ ದೀಪಾವಳಿ ಉಡುಗೊರೆ ನೀಡಿದ ವಿದ್ಯಾರ್ಥಿಗಳು
ಬಳ್ಳಾರಿ, 09 ನವೆಂಬರ್ (ಹಿ.ಸ.) ಸಂಡೂರು ಪಟ್ಟಣದ ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಮೂಲಕ ಅರ್ಥಪೂರ್ಣವಾಗಿ ದೀಪಾವಳಿ ಆಚರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಪಟಾಕಿ ಸಿಡಿಸುವುದರಿಂದ ವಾಯು ಮತ್ತು ಶಬ್ದ ಮಾಲಿನ್ಯ ಉಂಟಾಗಿ ಪರಿಸರದ ಮೇಲೆ ದುಷ್ಪರಿಣಾಮ
ಪೌರಕಾರ್ಮಿಕರಿಗೆ ಸಿಹಿ, ಬಟ್ಟೆಗಳನ್ನು ಕೊಡುಗೆ ನೀಡಿದ ವಿದ್ಯಾರ್ಥಿಗಳು


ಪೌರಕಾರ್ಮಿಕರಿಗೆ ಸಿಹಿ, ಬಟ್ಟೆಗಳನ್ನು ಕೊಡುಗೆ ನೀಡಿದ ವಿದ್ಯಾರ್ಥಿಗಳು


ಪೌರಕಾರ್ಮಿಕರಿಗೆ ಸಿಹಿ, ಬಟ್ಟೆಗಳನ್ನು ಕೊಡುಗೆ ನೀಡಿದ ವಿದ್ಯಾರ್ಥಿಗಳು


ಪೌರಕಾರ್ಮಿಕರಿಗೆ ಸಿಹಿ, ಬಟ್ಟೆಗಳನ್ನು ಕೊಡುಗೆ ನೀಡಿದ ವಿದ್ಯಾರ್ಥಿಗಳು


ಬಳ್ಳಾರಿ, 09 ನವೆಂಬರ್ (ಹಿ.ಸ.)

ಸಂಡೂರು ಪಟ್ಟಣದ ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಮೂಲಕ ಅರ್ಥಪೂರ್ಣವಾಗಿ ದೀಪಾವಳಿ ಆಚರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಪಟಾಕಿ ಸಿಡಿಸುವುದರಿಂದ ವಾಯು ಮತ್ತು ಶಬ್ದ ಮಾಲಿನ್ಯ ಉಂಟಾಗಿ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಅರಿವಿನಿಂದ ವಿದ್ಯಾರ್ಥಿಗಳು ಪಟಾಕಿ ಖರೀದಿಗೆ ವ್ಯಯಿಸುತ್ತಿದ್ದ ಹಣವನ್ನು ಸ್ವಯಂಪ್ರೇರಣೆಯಿಂದ ಸಂಗ್ರಹಿಸಿದ್ದಾರೆ. ಈ ಹಣದಲ್ಲಿ ಹೊಸ ಬಟ್ಟೆ, ಹಣ್ಣು ಹಾಗೂ ಸಿಹಿತಿಂಡಿಗಳನ್ನು ಖರೀದಿಸಿ ಸಂಡೂರು ಪುರಸಭೆಯ ನೂರಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ವಿತರಿಸಿದ್ದಾರೆ. ಆ ಮೂಲಕ ಪೌರಕಾರ್ಮಿಕರ ಬದುಕಿನಲ್ಲಿಯೂ ದೀಪಾವಳಿಯ ಬೆಳಕು ಮೂಡಿಸಿದ್ದಾರೆ.

ಸಂಸ್ಥೆಯ ಕಾರ್ಯದರ್ಶಿ ಚಿದಂಬರ ಎಸ್. ನಾನಾವಟೆ ಮಾತನಾಡಿ, ಪ್ರತಿದಿನ ಬೆಳಗಿನಿಂದ ಸಂಜೆಯವರೆಗೆ ಪಟ್ಟಣದ ಸ್ವಚ್ಛತೆಗಾಗಿ ಶ್ರಮಿಸುವ ಪೌರಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಸಂಡೂರನ್ನು ಸ್ವಚ್ಛ ಹಾಗೂ ಸುಂದರ ಪಟ್ಟಣವನ್ನಾಗಿ ರೂಪಿಸುವಲ್ಲಿ ಅವರ ಸೇವೆ ಅನನ್ಯ. ಸಮಾಜದ ಆರೋಗ್ಯ ಮತ್ತು ಸ್ವಚ್ಛ ಪರಿಸರದ ಹಿಂದೆ ಪೌರಕಾರ್ಮಿಕರ ಪರಿಶ್ರಮವಿದೆ. ಅವರ ಸೇವೆ ಅಭಿನಂದನಾರ್ಹವಾದುದು ಎಂದರು.

ಪರಿಸರ ಎಂಜಿನಿಯರ್ ಅನ್ನಪೂರ್ಣ ಡಿ. ಮಾತನಾಡಿ, ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಮೂಲಕ ಜ್ಞಾನ ನೀಡಲಾಗುತ್ತದೆ. ಆದರೆ, ಶ್ರೀಶೈಲೇಶ್ವರ ವಿದ್ಯಾ ಕೇಂದ್ರವು ಪಠ್ಯಜ್ಞಾನದ ಜತೆಗೆ ಪರಿಸರ ಸಂರಕ್ಷಣೆ, ನೈತಿಕತೆ, ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಪೌರಕಾರ್ಮಿಕರ ಸೇವೆಯನ್ನು ಗುರುತಿಸಿ ದೀಪಾವಳಿ ಸಂದರ್ಭದಲ್ಲಿ ವಿದ್ಯಾರ್ಥಿಗಳು ತೋರಿದ ಪ್ರೀತಿ, ಗೌರವ ಮತ್ತು ಮಾನವೀಯ ಕಾಳಜಿಗೆ ಹೃತ್ಪೂರ್ವಕ ಅಭಿನಂದನೆಗಳು. ವಿದ್ಯಾರ್ಥಿಗಳು ತಮ್ಮ ಹಬ್ಬದ ಸಂತೋಷವನ್ನು ನಮ್ಮೊಂದಿಗೂ ಹಂಚಿಕೊಂಡು ಆತ್ಮೀಯತೆ ಮತ್ತು ಸಂತಸ ಹೆಚ್ಚಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಂಡೂರು ಪುರಸಭೆಯ ನೂರಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಹೊಸ ಬಟ್ಟೆ, ಹಣ್ಣು ಹಾಗೂ ಸಿಹಿತಿಂಡಿಗಳ ಪೊಟ್ಟಣಗಳನ್ನು ವಿತರಿಸಲಾಯಿತು. ಕಚೇರಿ ಮುಖ್ಯಸ್ಥ ಶರಣಬಸಪ್ಪ ಎಂ.ಜಿ., ಗುರುಬಸವರಾಜ, ಸತೀಶ, ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande