ಬಳ್ಳಾರಿಯಲ್ಲಿ ನಮ್ಮ ಕರುನಾಡು ವೇದಿಕೆ ರಾಜ್ಯ ಮಟ್ಟದ ಸಂಘಟನೆಗೆ ಚಾಲನೆ
ಬಳ್ಳಾರಿ, 09 ನವೆಂಬರ್ (ಹಿ.ಸ.) ಬಳ್ಳಾರಿ ನಗರದಲ್ಲಿ ರಾಜ್ಯ ಮಟ್ಟದ ‘ನಮ್ಮ ಕರುನಾಡು ವೇದಿಕೆ’ ಅಸ್ತಿತ್ವಕ್ಕೆ ಬಂದಿದ್ದು, ಸೋಮವಾರ ಗಣ್ಯರು ಸಸಿಗೆ ನೀರುಣಿಸುವ ಮೂಲಕ ವೇದಿಕೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ, ಲಿಡ್ಕರ್ ಅಧ್ಯಕ್ಷ ಮುಂಡಗಿ ನಾಗರಾಜ್, ಯುವ ನಾಯಕ ಎನ
`ನಮ್ಮ ಕರುನಾಡು ವೇದಿಕೆ' ಉದ್ಘಾಟನೆ ಹಾಗೂ ಪದಗ್ರಹಣ


ಬಳ್ಳಾರಿ, 09 ನವೆಂಬರ್ (ಹಿ.ಸ.)

ಬಳ್ಳಾರಿ ನಗರದಲ್ಲಿ ರಾಜ್ಯ ಮಟ್ಟದ ‘ನಮ್ಮ ಕರುನಾಡು ವೇದಿಕೆ’ ಅಸ್ತಿತ್ವಕ್ಕೆ ಬಂದಿದ್ದು, ಸೋಮವಾರ ಗಣ್ಯರು ಸಸಿಗೆ ನೀರುಣಿಸುವ ಮೂಲಕ ವೇದಿಕೆಗೆ ಅಧಿಕೃತವಾಗಿ ಚಾಲನೆ ನೀಡಿದರು.

ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ, ಲಿಡ್ಕರ್ ಅಧ್ಯಕ್ಷ ಮುಂಡಗಿ ನಾಗರಾಜ್, ಯುವ ನಾಯಕ ಎನ್. ಸಂದೀಪ್, ಜಿ.ಕೆ. ಫೌಂಡೇಶನ್‌ನ ಜಿ.ಕೆ. ಸ್ವಾಮಿ, ಪಿ. ಜಗನ್ನಾಥ, ಗೋವಿಂದರಾಜುಲು, ಎಸ್. ಸುಂಕಣ್ಣ, ಜನತಾ ಬಜಾರ್ ನಿರ್ದೇಶಕ ಪ್ರದೀಪ್ ರೆಡ್ಡಿ, ವಿ.ಕೆ. ಬಸಪ್ಪ, ಜೋಳದ ತಿಮ್ಮಪ್ಪ, ಪಿ.ಜಿ. ವೆಂಕಟೇಶ್, ಹೊನ್ನಳ್ಳಿ ಶಿವಣ್ಣ, ಕಟ್ಟೆಪ್ಪ, ಪೆದ್ದಣ್ಣ ಹೊನ್ನಳ್ಳಿ, ಬತ್ರಿ ಮುರಳಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾಸ್ಟರ್ ಅಭಿಷೇಕ್ ಅವರ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು. ಬಳಿಕ ‘ನಮ್ಮ ಕರುನಾಡು ವೇದಿಕೆ’ಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾಗಿ ಕೋಟೆ ಪಂಪಾ, ರಾಜ್ಯ ಉಪಾಧ್ಯಕ್ಷರಾಗಿ ಎ.ಎಂ. ನರೇಂದ್ರ, ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಹೊನ್ನಳ್ಳಿ ಸೂರಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಜೆ. ವೀರಭದ್ರ (ಕುಡತಿನಿ) ಸೇರಿದಂತೆ ಪದಾಧಿಕಾರಿಗಳು ಪದಗ್ರಹಣ ಮಾಡಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಂಘಟಕರಾದ ರುದ್ರಮಣಿ, ದಿಲೀಪ್, ವಿಜಯಕುಮಾರ್, ಎಸ್. ಸುಂಕಣ್ಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande