ರೈತರ ಸಹಕಾರವೇ ಸಕ್ಕರೆ ಕಾರ್ಖಾನೆಯ ನಿಜವಾದ ಶಕ್ತಿ: ಎಸ್.ಆರ್. ಪಾಟೀಲ
ಬಾಗಲಕೋಟೆ, 08 ನವೆಂಬರ್ (ಹಿ.ಸ.) ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಯ ನಡುವಿನ ಬಾಂಧವ್ಯ ಅತ್ಯಂತ ಮಹತ್ವದ್ದಾಗಿದೆ. ರೈತರ ಪರಿಶ್ರಮದಿಂದಲೇ ಸಕ್ಕರೆ ಕಾರ್ಖಾನೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ. ರೈತರು ಉತ್ತಮ ಗುಣಮಟ್ಟದ ಕಬ್ಬು ಬೆಳೆದು ಸಕಾಲದಲ್ಲಿ ಕಾರ್ಖಾನೆಗೆ ಪೂರೈಸಿದರೆ ಕಬ್ಬು
S r patil


ಬಾಗಲಕೋಟೆ, 08 ನವೆಂಬರ್ (ಹಿ.ಸ.)

ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಯ ನಡುವಿನ ಬಾಂಧವ್ಯ ಅತ್ಯಂತ ಮಹತ್ವದ್ದಾಗಿದೆ. ರೈತರ ಪರಿಶ್ರಮದಿಂದಲೇ ಸಕ್ಕರೆ ಕಾರ್ಖಾನೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ. ರೈತರು ಉತ್ತಮ ಗುಣಮಟ್ಟದ ಕಬ್ಬು ಬೆಳೆದು ಸಕಾಲದಲ್ಲಿ ಕಾರ್ಖಾನೆಗೆ ಪೂರೈಸಿದರೆ ಕಬ್ಬು ನುರಿಸುವ ಹಂಗಾಮು ಸುಗಮವಾಗಿ ನಡೆಯಲು ಅನುಕೂಲವಾಗುತ್ತದೆ ಎಂದು ಎಸ್.ಆರ್. ಪಾಟೀಲ ಹೇಳಿದರು.

ರೈತರ ಶ್ರಮ, ನಿಷ್ಠೆ ಮತ್ತು ಸಹಕಾರವೇ ಕಾರ್ಖಾನೆಯ ನಿಜವಾದ ಶಕ್ತಿಯಾಗಿದೆ. ಕಾರ್ಖಾನೆಯ ಬೆಳವಣಿಗೆಯಲ್ಲಿ ರೈತರ ಪಾತ್ರ ಪ್ರಮುಖವಾಗಿದ್ದು, ರೈತರು ಹಾಗೂ ಆಡಳಿತ ಮಂಡಳಿ ಪರಸ್ಪರ ಸಹಕಾರ ಮತ್ತು ವಿಶ್ವಾಸದಿಂದ ಮುನ್ನಡೆಯಬೇಕು. ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ 2026–27ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ರೈತರು, ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆಯ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande