
ನವದೆಹಲಿ, 28 ನವೆಂಬರ್ (ಹಿ.ಸ.):
ತಮಿಳುನಾಡಿನ ತಿರುಪರಂಕುಂದ್ರಂ ದೀಪಸ್ತಂಭದಲ್ಲಿ ಇಂದು ದೀಪ ಬೆಳಗಿಸುವಂತೆ ಉಚ್ಚತಮ ನ್ಯಾಯಾಲಯ ನೀಡಿರುವ ಆದೇಶ ಸನಾತನ ಧರ್ಮದ ವಿಜಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೆ ಹಂಚಿಕೊಂಡಿರುವ ಅವರು, ಹಿಂದೂಗಳ ಮತ್ತು ಸನಾತನ ಧರ್ಮದ ಪಾಲಿಗೆ ಇದೊಂದು ಮಹತ್ವದ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.
ತಿರುಪರಂಕುಂದ್ರಂ ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಉಚ್ಚತಮ ನ್ಯಾಯಾಲಯ ನೀಡಿರುವ ನಿರ್ದೇಶನವು ಹಿಂದೂಗಳ ಧಾರ್ಮಿಕ ನಂಬಿಕೆ ಹಾಗೂ ಸನಾತನ ಧರ್ಮಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರವಾಗಿದೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.