
ನವದೆಹಲಿ, 27 ನವೆಂಬರ್ (ಹಿ.ಸ.):
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಶುಕ್ರವಾರ ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ಮಾಜಿ ಕೇಂದ್ರ ಸಚಿವ ಸೈಯದ್ ಶಾಹನವಾಜ್ ಹುಸೇನ್ ಅವರ ದೆಹಲಿಯ ನಿವಾಸಕ್ಕೆ ಭೇಟಿ ನೀಡಿ, ಅವರ ಪುತ್ರ ಅರ್ಬಾಜ್ ಹುಸೇನ್ ಮತ್ತು ಸೊಸೆ ಅಫ್ಶಾ ಅವರಿಗೆ ಆಶೀರ್ವಾದ ಮಾಡಿದರು.
ಈ ಭೇಟಿಯ ಛಾಯಾಚಿತ್ರಗಳನ್ನು ಶಾಹನವಾಜ್ ಹುಸೇನ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಗೌರವಾನ್ವಿತ ಮೋಹನ್ ಭಾಗವತ್ ಅವರು ಇಂದು ನಮ್ಮ ದೆಹಲಿಯ ನಿವಾಸಕ್ಕೆ ಆಗಮಿಸಿ ಪುತ್ರ ಅರ್ಬಾಜ್ ಮತ್ತು ಸೊಸೆ ಅಫ್ಶಾ ಅವರಿಗೆ ಆಶೀರ್ವಾದ ನೀಡಿದರು ಎಂದು ಅವರು ಬರೆದುಕೊಂಡಿದ್ದಾರೆ.
ಮೋಹನ್ ಭಾಗವತ್ ಅವರ ಪ್ರೀತಿ ಮತ್ತು ಆಶೀರ್ವಾದ ತಮ್ಮ ಇಡೀ ಕುಟುಂಬಕ್ಕೆ ಅಮೂಲ್ಯವಾದುದು. ಈ ಭೇಟಿಗಾಗಿ ಕುಟುಂಬದ ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುವುದಾಗಿ ಶಾಹನವಾಜ್ ಹುಸೇನ್ ತಿಳಿಸಿದ್ದಾರೆ.
ಅವರು ಹಂಚಿಕೊಂಡಿರುವ ನಾಲ್ಕು ಛಾಯಾಚಿತ್ರಗಳಲ್ಲಿ ಮೋಹನ್ ಭಾಗವತ್ ಅವರು ಕುಟುಂಬದ ಸದಸ್ಯರೊಂದಿಗೆ ಕಾಣಿಸಿಕೊಂಡಿದ್ದಾರೆ. ನವದಂಪತಿಗೆ ಹೂಗುಚ್ಛ ಮತ್ತು ಉಡುಗೊರೆಗಳನ್ನು ನೀಡಿ ಆಶೀರ್ವದಿಸುತ್ತಿರುವ ದೃಶ್ಯಗಳೂ ಇವೆ.
ಶಾಹನವಾಜ್ ಹುಸೇನ್ ಅವರ ಪುತ್ರ ಅರ್ಬಾಜ್ ಅವರು ಅಕ್ಟೋಬರ್‌ನಲ್ಲಿ ಅಫ್ಶಾ ಅಕ್ರಮ್ ಖಾನ್ ಅವರನ್ನು ವಿವಾಹವಾಗಿದ್ದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.