ನ.21 ರಂದು ಬಳ್ಳಾರಿಯಲ್ಲಿ ತಿಂಗಳ ಸೊಬಗು ಕಾರ್ಯಕ್ರಮ
ಬಳ್ಳಾರಿ, 17 ನವೆಂಬರ್ (ಹಿ.ಸ.) ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸುವ ಹಾಗೂ ಸಾರ್ವಜನಿಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಾಂಸ್ಕೃತಿಕ ಸಮುಚ್ಚಯ ನಿರ್ವಹಣಾ ಸಮಿತಿ, ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 21 ರಂದು ಸಂಜೆ 6.30 ಗಂಟೆಗೆ ನಗರದ ಡಾ. ರಾಜ್
ನ.21 ರಂದು ಬಳ್ಳಾರಿಯಲ್ಲಿ ‘ತಿಂಗಳ ಸೊಬಗು'


ಬಳ್ಳಾರಿ, 17 ನವೆಂಬರ್ (ಹಿ.ಸ.)

ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸುವ ಹಾಗೂ ಸಾರ್ವಜನಿಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಾಂಸ್ಕೃತಿಕ ಸಮುಚ್ಚಯ ನಿರ್ವಹಣಾ ಸಮಿತಿ, ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 21 ರಂದು ಸಂಜೆ 6.30 ಗಂಟೆಗೆ ನಗರದ ಡಾ. ರಾಜ್ ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯದ ನಾಡೋಜ ಸುಭದ್ರಮ್ಮ ಮನ್ನೂರು ಬಯಲು ರಂಗಮಂದಿರದಲ್ಲಿ ‘ತಿಂಗಳ ಸೊಬಗು' ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ವಿವಿಧ ಆಕರ್ಷಕ ಕಲಾ ಪ್ರಕಾರಗಳು ಪ್ರದರ್ಶನಗೊಳ್ಳಲಿವೆ. ಹಾಸ್ಯ ಚಟಾಕಿಗಳು: ಬಳ್ಳಾರಿಯ ಖ್ಯಾತ ಹಾಸ್ಯ ಕಲಾವಿದ ಎ.ಎಂ.ಎರಿಸ್ವಾಮಿ ಅವರಿಂದ. ಸಮೂಹ ನೃತ್ಯ: ಬಳ್ಳಾರಿಯ ಲಕ್ಷಿ ಕಲಾ ಟ್ರಸ್ಟ್ (ರಿ) ತಂಡದಿ0ದ. ಬಯಲಾಟ: ಬಳ್ಳಾರಿ ತಾಲೂಕಿನ ಎಂ.ಗೋನಾಳ ವೀರಭದ್ರೇಶ್ವರ ಬಯಲಾಟ ಕಲಾವಿದರ ಸಂಘದಿAದ ‘ವೀರ ಅಭಿಮನ್ಯು ಕಾಳಗ’ ಸನ್ನಿವೇಶಗಳ ಪ್ರದರ್ಶನ. ಕಲಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೋರಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande