ಚಾಲಕನಿಗೆ ತಲೆ ಸುತ್ತು : ದ್ವಿಚಕ್ರ ವಾಹನಗಳ ಮೇಲೆ ಹರಿದ ಬಸ್
ಬಳ್ಳಾರಿ, 17 ನವೆಂಬರ್ (ಹಿ.ಸ.) ಈಶಾನ್ಯ ಸಾರಿಗೆ ಸಂಸ್ಥೆಯ ನಗರ ಸಾರಿಗೆಯ ಬಸ್ನ ಚಾಲಕನಿಗೆ ತಲೆ ಸುತ್ತು ಬಂದ ಕಾರಣ ವಾಹನವನ್ನು ನಿಯಂತ್ರಿಸಲಾಗದೇ ರಸ್ತೆ ಬದಿಯಲ್ಲಿದ್ದ ದ್ವಿಚಕ್ರ ವಾಹನಗಳ ಮೇಲೆ ಬಳ್ಳಾರಿ ವಿಭಾಗದ ಮೂರನೇ ಡಿಪೋ ಬಸ್ ಹರಿದ ಕಾರಣ ಕೆಲ ದ್ವಿಚಕ್ರ ವಾಹನಗಳು ಮತ್ತು ಹೆಲ್ಮೆಟ್ಗಳು ಹಾಳಾಗಿರು
ಚಾಲಕನಿಗೆ ತಲೆ ಸುತ್ತು : ದ್ವಿಚಕ್ರ ವಾಹನಗಳ ಮೇಲೆ ಹರಿದ ಬಸ್


ಚಾಲಕನಿಗೆ ತಲೆ ಸುತ್ತು : ದ್ವಿಚಕ್ರ ವಾಹನಗಳ ಮೇಲೆ ಹರಿದ ಬಸ್


ಬಳ್ಳಾರಿ, 17 ನವೆಂಬರ್ (ಹಿ.ಸ.)

ಈಶಾನ್ಯ ಸಾರಿಗೆ ಸಂಸ್ಥೆಯ ನಗರ ಸಾರಿಗೆಯ ಬಸ್ನ ಚಾಲಕನಿಗೆ ತಲೆ ಸುತ್ತು ಬಂದ ಕಾರಣ ವಾಹನವನ್ನು ನಿಯಂತ್ರಿಸಲಾಗದೇ ರಸ್ತೆ ಬದಿಯಲ್ಲಿದ್ದ ದ್ವಿಚಕ್ರ ವಾಹನಗಳ ಮೇಲೆ ಬಳ್ಳಾರಿ ವಿಭಾಗದ ಮೂರನೇ ಡಿಪೋ ಬಸ್ ಹರಿದ ಕಾರಣ ಕೆಲ ದ್ವಿಚಕ್ರ ವಾಹನಗಳು ಮತ್ತು ಹೆಲ್ಮೆಟ್ಗಳು ಹಾಳಾಗಿರುವ ಘಟನೆ ಜನನಿಬಿಡ ಬಿಎಸ್ಎನ್ಎಲ್ ಪಕ್ಕದ ಶಾಪಿಂಗ್ ಕಾಂಪ್ಲೆಕ್ಸ್ನ ಮುಂದೆ ಮಂಗಳವಾರ ನಡೆದಿದೆ. ಅದೃಷ್ಟವಶಾತ್ ನಾಗರೀಕರಿಗೆ ಯಾವುದೇ ಅನಾಹುತವಾಗಿಲ್ಲ.

ಬಸವೇಶ್ವರ ನಗರ - ಓಪಿಡಿ ಮಧ್ಯೆ ಸಂಚರಿಸುತ್ತಿದ್ದ ನಗರ ಸಾರಿಗೆಯ ಚಾಲಕನಿಗೆ ಏಕಾಏಕಿ ತಲೆ ಸುತ್ತು ಬಂದಿದೆ. ನಿಧಾನಗತಿಯಲ್ಲಿದ್ದ ಬಸ್ ಏಕಾಏಕಿ ಜನನಿಬಿಡ ಕಾಂಪ್ಲೆಕ್ಸ್ಗೆ ನುಗ್ಗಿದೆ. ಆಗ, ಕಾಂಪ್ಲೆಕ್ಸ್ನ ಮುಂದೆ ನಿಂತಿದ್ದ 08 ದ್ವಿಚಕ್ರ ವಾಹನಗಳ ಮೇಲೆ ಹರಿದ ಕಾರಣ ವಾಹನಗಳು ಜಖಂ ಆಗಿದ್ದು, ಹೊಸ ಹೆಲ್ಮೆಟ್ಗಳು ಹಾಳಾಗಿವೆ.

ಈ ಘಟನೆಯ ನಂತರ ಸ್ಥಳದಲ್ಲಿ ಕೆಲ ಹೊತ್ತು ಸಂಚಾರ ವ್ಯವಸ್ಥೆಯಲ್ಲಿ ಅಸ್ತವ್ಯಸ್ತ ಉಂಟಾಗಿತ್ತು. ಆ ನಂತರ ಕ್ರೇನ್ ಮೂಲಕ ಬಸ್ ಮತ್ತು ದ್ವಿಚಕ್ರ ವಾಹನಗಳನ್ನು ಪ್ರತ್ಯೇಕಗೊಳಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಬಸ್ ಚಾಲಕನನ್ನು ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಕರೆದುಕೊಂಡು ಹೋಗಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande