ಕೆಎಎಸ್ ಅಧಿಕಾರಿಗಳ ಸಂಘದ ನೂತನ ಅಧ್ಯಕ್ಷರಾಗಿ ಬಿ.ಶಿವಸ್ವಾಮಿ ಅವಿರೋಧ ಆಯ್ಕೆ
ಕರ್ನಾಟಕ ಆಡಳಿತ ಸೇವೆ (KAS) ಅಧಿಕಾರಿಗಳ ಸಂಘದ 2026-27 ಹಾಗೂ 2027-28ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಿ.ಶಿವಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎಲ್. ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
kas-officers-association


ಬೆಂಗಳೂರು, 15 ನವೆಂಬರ್ (ಹಿ.ಸ.):

ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘಕ್ಕೆ 2026-27 ಹಾಗೂ 2027-28ನೇ ಸಾಲಿನ ನೂತನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ನಗರದಲ್ಲಿ ಭಾನುವಾರ ಜರುಗಿದ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.

ನೂತನ ಅಧ್ಯಕ್ಷರಾಗಿ ಬಿ. ಶಿವಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎಲ್. ಶಿವಕುಮಾರ್ ಅವರು ಅವಿರೋಧವಾಗಿ ಚುನಾಯಿತರಾಗಿದ್ದಾರೆ ಎಂದು ಸಂಘದ ಅಧಿಕೃತ ಪ್ರಕಟಣೆ ತಿಳಿಸಿದೆ.

ನೂತನ ಪದಾಧಿಕಾರಿಗಳ ವಿವರ: ಸಂಘದ ಆಡಳಿತ ಮಂಡಳಿಗೆ ಆಯ್ಕೆಯಾದ ಪ್ರಮುಖ ಪದಾಧಿಕಾರಿಗಳ ಪಟ್ಟಿ ಈ ಕೆಳಗಿನಂತಿದೆ:

ಅಧ್ಯಕ್ಷರು: ಬಿ. ಶಿವಸ್ವಾಮಿ

ಉಪಾಧ್ಯಕ್ಷರು: ಡಾ. ಕೆ. ಚನ್ನಬಸಪ್ಪ (ಉಪಾಧ್ಯಕ್ಷ-01), ಡಾ. ಎಂ.ಎನ್. ರಾಜೇಂದ್ರ ಪ್ರಸಾದ್ (ಉಪಾಧ್ಯಕ್ಷ-02)

ಕಾರ್ಯದರ್ಶಿ: ಸಿ.ಎಲ್. ಶಿವಕುಮಾರ್

ಜಂಟಿ ಕಾರ್ಯದರ್ಶಿಗಳು: ಕೆ.ಎನ್. ಪ್ರವೀಣ್ (ಜಂಟಿ ಕಾರ್ಯದರ್ಶಿ-01), ಮಧುರಾಜ್ ಬಿ.ಕೆ. (ಜಂಟಿ ಕಾರ್ಯದರ್ಶಿ-02), ಬಿ.ಎನ್. ಸ್ವಾಮಿ (ಜಂಟಿ ಕಾರ್ಯದರ್ಶಿ-03)

ಖಜಾಂಚಿ: ಎಸ್.ಎಂ. ಆಶಾ ಪರ್ವೀನ್ಕಾರ್ಯಕಾರಿ ಸಮಿತಿಗೆ 30 ಸದಸ್ಯರ ಆಯ್ಕೆ:

ಇದೇ ವೇಳೆ ಸಂಘದ ಕಾರ್ಯಕಾರಿ ಸಮಿತಿಗೆ ಒಟ್ಟು 30 ಅಧಿಕಾರಿಗಳನ್ನು ಅವಿರೋಧವಾಗಿ ಆರಿಸಲಾಯಿತು. ಡಾ. ಎನ್. ಮಹೇಶ್ ಬಾಬು, ಡಾ. ರವಿ ಎಂ. ತಿರ್ಲಾಪೂರ, ಡಾ. ನಾಗೇಂದ್ರ ಎಫ್. ಹೊನ್ನಳ್ಳಿ, ಸಿ.ಎನ್. ಮಂಜುನಾಥ, ಎಂ.ಎಸ್.ಎನ್. ಬಾಬು, ಎಲಿಷ ಆಂಡ್ರಸ್, ಬಿ.ಎನ್. ವರಪ್ರಸಾದ್ ರೆಡ್ಡಿ, ಡಾ. ಆರತಿ ಆನಂದ್, ನಟರಾಜ್ ಜಿ.ಆರ್., ಶೈಲಜಾ ಪ್ರಿಯದರ್ಶಿನಿ ಎ.ಎಂ., ಬಸವರಾಜ್ ಆರ್. ಸೋಮಣ್ಣನವರ್, ಎಚ್.ಜಿ. ಚಂದ್ರಶೇಖರಯ್ಯ, ಡಾ. ಬಿ.ಆರ್. ಹರೀಶ್ ನಾಯ್ಕ, ಡಾ. ಕೆ. ದ್ರಾಕ್ಷಾಯಿಣಿ ಹಾಗೂ ರಮೇಶ್ ಪಿ. ಕೋನರೆಡ್ಡಿ ಸಮಿತಿಗೆ ಆಯ್ಕೆಯಾಗಿದ್ದಾರೆ.

ಇವರೊಂದಿಗೆ ಗಾಯತ್ರಿ ಎನ್. ನಾಯಕ್, ಅಭಿಜಿನ್ ಬಿ., ಡಾ. ಸಂತೋಷ್ ಬಿರಾದಾರ, ಬಿ.ಎಸ್. ರಾಜೀವ್, ಕಿಶಾನ್ ಕಲಾಲ್, ಗಣಪತಿ ಶಾಸ್ತ್ರಿ, ತೇಜಸ್ವಿನಿ ಬಿ., ಶೀತಲ್ ಟಿ.ಎಸ್., ಪರುಶುರಾಮ ಸತ್ತಿಗೇರಿ, ಡಾ. ಎಸ್.ವಿ. ಲೋಕೇಶ್, ಗಗನ ಸಿಂಧು ಎನ್., ಡಾ. ನಯನ ಎಂ., ಮಂಜುನಾಥ ಜೆ., ರಾಜಶೇಖರ ಮೂರ್ತಿ ಹಾಗೂ ಜಯಕುಮಾರ್ ಎಚ್.ಬಿ. ಅವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande