
ಕೋಲಾರ, 15 ನವೆಂಬರ್ (ಹಿ.ಸ.)
ಮಹಿಳೆಯರ ಆರ್ಥಿಕ ಸೇರ್ಪಡೆ ಹಾಗೂ ಸಬಲೀಕರಣಕ್ಕಾಗಿ ಎಲ್.ಎನ್.ಎನ್.ಟಿ. ಸಾಮಾಜಿಕ ಹೊಣೆಗಾರಿಕೆಯ ಯೋಜನೆಯಲ್ಲಿ ಮಹಿಳೆಯರಿಗೆ ಡಿಜಿಟಲ್ ವೇದಿಕೆಗಳ ಉಪಯೋಗದ ಬಗ್ಗೆ ಅರಿವು ಮತ್ತು ತರಬೇತಿ ನೀಡಲಾಗುತ್ತಿದೆ. ಅಲ್ಲದೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಆರ್ಥಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಕ್ಸಿಸ್ ಲೈವ್ಲಿ ಹುಡ್ ಮಿಷನ್ ಸಂಸ್ಥೆಯ ಯಶೋಧ ಹೇಳಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಆಕ್ಸೀಸ್ ಆಕ್ಸಿಸ್ ಲೈವ್ಲಿ ಹುಡ್ ಮಿಷನ್ ಸಂಸ್ಥೆಯಿ0ದ ಹಮ್ಮಿಕೊಂಡಿದ್ದ `ಡಿಜಿಟಲ್ ಸಖಿ' ಮೊಬೈಲ್ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮೊಬೈಲ್ ಇಂದು ದಿನನಿತ್ಯದ ಬಳಕೆಯ ಅಮೂಲ್ಯ ಉಪಕರಣವಾಗಿಬಿಟ್ಟಿದ್ದು, ಜನಜೀವನದಲ್ಲಿ ಬೆರೆತುಹೋಗಿದೆ, ಮೊಬೈಲ್ ಇಲ್ಲದೇ ಜೀವನವೇ ಇಲ್ಲ ಎಂಬ ಭಾವನೆ ಅನೇಕರಲ್ಲಿ ಬಲಗೊಂಡಿದೆ ಎಂದು ತಿಳಿಸಿದರು.
ಮೊಬೈಲ್ನಿಂದ ಅನೇಕ ಅತ್ಯುತ್ತಮ ಮಾಹಿತಿಯನ್ನು ಪಡೆಯಬಹುದು ಹಾಗೆಯೇ ದಾರಿ ತಪ್ಪಲು ಅವಕಾಶಗಳಿವೆ ಎಂದು ಎಚ್ಚರಿಸಿದ ಅವರು, ವಿದ್ಯಾರ್ಥಿ ಸಮುದಾಯ ಇಂದು ಮೊಬೈಲ್ ಬಳಸುವಲ್ಲಿ ತಲ್ಲೀನರಾಗಿ ತಮ್ಮ ಶೈಕ್ಷಣಿಕ ಜೀವನಕ್ಕೆ ಕುತ್ತು ತಂದುಕೊಳ್ಳುತ್ತಿರುವುದು ಅಘಾತಕಾರಿ ಎಂದರು.
ಆಕ್ಸೀಸ್ ಆಕ್ಸಿಸ್ ಲೈವ್ಲಿ ಹುಡ್ ಮಿಷನ್ ಪ್ರತಿಮಾ ಮಾತನಾಡಿ, ಮಕ್ಕಳು ಮೊಬೈಲ್ ಅಗತ್ಯಕ್ಕಿಂತ ಹೆಚ್ಚು ಬಳಸದಿರಿ ಎಂದು ಸಲಹೆ ನೀಡಿದ ಅವರು, ಮೊಬೈಲ್ ಅತಿಯಾಗಿ ನೋಡುವುದರಿಂದ ಕಣ್ಣಿನ ತೊಂದರೆಯಾಗುತ್ತದೆ, ನಿದ್ರಾಹೀನತೆ ಹೆಚ್ಚಿ ಆರೋಗ್ಯದ ಮೇಲು ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.
ಸಂಸ್ಥೆಯ ಕಲ್ಪನಾ ಮಾತನಾಡಿ, ವಿದ್ಯಾರ್ಥಿಗಳು ಓದುವುದಕ್ಕೆ ಆದ್ಯತೆ ನೀಡಿ, ನಿಮ್ಮ ಈ ವಯಸ್ಸಿನಲ್ಲಿ ಮೊಬೈಲ್ ಬಳಕೆ ನಿಮ್ಮನ್ನು ದಾರಿತಪ್ಪಿಸುತ್ತದೆ, ನಿಮ್ಮ ಗುರಿ ಕಲಿಕೆಯತ್ತ ಇರಲಿ, ಚೆನ್ನಾಗಿ ಓದಿ ಸಾಧಕರಾಗಿ ಹೊರಹೊಮ್ಮಿದ ನಂತರ ನೀವು ಮೊಬೈಲ್ ಬಳಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ತಾಹೇರಾ ನುಸ್ರತ್ ವಹಿಸಿದ್ದು, ವಿದ್ಯಾರ್ಥಿಗಳಿಗೆ ಮೊಬೈಲ್ ನೀಡಬಾರದು ಎಂದು ಪೋಷಕರಿಗೆ ಅನೇಕ ಬಾರಿ ಸಭೆಗಳನ್ನು ನಡೆಸಿ ಮಾರ್ಗದರ್ಶನ ನೀಡಲಾಗಿದೆ ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್