ಕೋಲಾರ ಜಿಲ್ಲಾ ಬಿಜೆಪಿಯಿಂದ ಜನಜಾತಿಯ ಗೌರವ ದಿವಸ್ ಆಚರಣೆ
ಕೋಲಾರ ಜಿಲ್ಲಾ ಬಿಜೆಪಿಯಿಂದ ಜನಜಾತಿಯ ಗೌರವ ದಿವಸ್ ಆಚರಣೆ
ಕೋಲಾರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬಿರ್ಸಾ ಮುಂಡಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.


ಕೋಲಾರ, 15 ನವೆಂಬರ್ (ಹಿ.ಸ.)

ಸ್ವಾತಂತ್ರ ಹೋರಾಟಗಾರ ಹಾಗೂ ಬುಡಕಟ್ಟು ಸಮುದಾಯದ ಆರಾಧ್ಯ ದೈವ ಬಿರ್ಸಾ ಮುಂಡಾ ಅವರ ೧೫೧ನೇ ಜನ್ಮಜಯಂತಿಯನ್ನು `ಜನಜಾತಿಯ ಗೌರವ ದಿವಸ್, ಕೇಂದ್ರದ ನರೇಂದ್ರಮೋದಿ ಸರ್ಕಾರ ಘೋಷಣೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎಂ. ತಿಮ್ಮರಾಯಪ್ಪ ಅವರ ನೇತೃತ್ವದಲ್ಲಿ `ಜನಜಾತಿಯ ಗೌರವ ದಿವಸ್' ಅಂಗವಾಗಿ ಬಿರ್ಸಾ ಮುಂಡಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಬಿರ್ಸಾ ಮುಂಡಾ ಅವರು ದೇಶದ ಸ್ವಾತಂತ್ರö್ಯಕ್ಕಾಗಿ ಹಾಗೂ ಸಮುದಾಯದ ಹಕ್ಕುಗಳಿಗೆ ನಡೆಸಿದ ಹೋರಾಟ ನಮಗೆ ಸ್ಪೂರ್ತಿಯಾಗಿದೆ, ಅವರನ್ನು ಸ್ಮರಿಸಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿದೆ ಎಂದು ಮೋದಿಯವರನ್ನು ಅಭಿನಂದಿಸಿದರು.

ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹೆಚ್.ಎಂ.ತಿಮ್ಮರಾಯಪ್ಪ ಮಾತನಾಡಿ ಬಿರ್ಸಾ ಮುಂಡಾ ಅವರು ೧೮೭೫ರಿಂದ ೧೯೦೦ರವರೆಗೆ ಕೇವಲ ೨೫ ವರ್ಷಗಳ ಕಾಲ ಬದುಕಿದ್ದರೂ, ತಮ್ಮ ೧೬ನೇ ವಯಸ್ಸಿನಿಂದಲೇ ಆದಿವಾಸಿ ಹಾಗೂ ಬುಡಕಟ್ಟು ಸಮುದಾಯಗಳ ಹಕ್ಕುಗಳಿಗಾಗಿ ಹೋರಾಟ ಆರಂಭಿಸಿದ್ದರು. ಬ್ರಿಟಿಷರ ದಬ್ಬಾಳಿಕೆ, ಜಮೀನ್ದಾರರ ಶೋಷಣೆ, ಕಠಿಣ ಶಿಕ್ಷೆ ಹಾಗೂ ಅನ್ಯಾಯದ ತೆರಿಗೆ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿ, ಸ್ವಾತಂತ್ರ÷್ಯ ಮತ್ತು ಸಮುದಾಯದ ಹಕ್ಕುಗಳಿಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾನ್ ದೇಶಪ್ರೇಮಿಯಾಗಿದ್ದಾರೆ ಎಂದು ಸ್ಮರಿಸಿದರು.

ಬಿರ್ಸಾ ಮುಂಡಾ ಅವರ ಹೋರಾಟ ಮತ್ತು ದೇಶಪ್ರೇಮವನ್ನು ಗೌರವಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ೨೦೨೧ರ ನವೆಂಬರ್ ೧೫ರಂದು ಅವರ ಜನ್ಮದಿನವನ್ನು ಜನಜಾತಿಯ ಗೌರವ ದಿವಸ್ ಎಂದು ಘೋಷಿಸಿದ್ದಾರೆ. ಈ ಮೂಲಕ ದೇಶದ ವಿವಿಧ ಬುಡಕಟ್ಟು ಸಮುದಾಯಗಳ ಇತಿಹಾಸ, ಸಂಸ್ಕöÈತಿ ಮತ್ತು ಕೊಡುಗೆಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.

ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಏಕಲವ್ಯ ಮಾದರಿ ವಸತಿ ಶಾಲೆಗಳ ಸ್ಥಾಪನೆ, ಬುಡಕಟ್ಟು ಜನರ ಕಲೆ, ಜಾನಪದ ಹಾಗೂ ಸಾಂಸ್ಕತಿಕ ಪರಂಪರೆಯ ಸಂರಕ್ಷಣೆಗೆ ವಿಶೇಷ ವಸ್ತುಸಂಗ್ರಹಾಲಯಗಳ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಾಲ್ಮೀಕಿ, ಬಿರ್ಸಾ ಮುಂಡಾ ಸೇರಿದಂತೆ ಸಮಾಜದ ಅಭಿವೃದ್ಧಿ ಹಾಗೂ ಸ್ವಾತಂತ್ರ÷್ಯಕ್ಕಾಗಿ ಶ್ರಮಿಸಿದ ಮಹನೀಯರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.

ಮೋದಿ ಸರ್ಕಾರ ಪರಿಶಿಷ್ಟರು,ಶೋಷಿತರ ಧ್ವನಿಯಾಗಿದೆ, ಸಮಾಜದಲ್ಲಿ ಹಿಂದುಳಿದವರಿಗೆ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇಡೀ ದೇಶದಲ್ಲಿ ಯಾವುದೇ ಒಂದು ಕುಟುಂಬ ಕುಡಿಯುವ ನೀರಿಗಾಗಿ ಪರಿತಪಿಸಬಾರದು ಎಂದು ತಿಳಿದು ಜನಜೀವನ್ ಮಿಷನ್ ಮೂಲಕ ಪ್ರತಿ ಮನೆಗೂ ಉಚಿತವಾಗಿ ನಳ ಒದಗಿಸುವ ಕೆಲಸ ಮಾಡಿದ್ದು, ಕೋಲಾರ ಜಿಲ್ಲೆಗೆ ಮಾತ್ರವೇ ೧೮೦೦ ಕೋಟಿ ರೂ ನೀಡಿದೆ. ಪ್ರತಿ ಬಡವನ ಮನೆಗೂ ಕೊಳಾಯಿ ಮೂಲಕ ನೀರು ಹರಿಸುವ ಸಂಕಲ್ಪ ಕೇವಲ ಮೋದಿಯವರಂತಹ ನಾಯಕರಿಂದ ಮಾತ್ರವೇ ಸಾಧ್ಯವಾಗಿದೆ, ಈ ದೇಶವನ್ನು ೬೦ ವರ್ಷ ಆಳಿದವರಿಗೆ ಈ ಆಲೋಚನೆಯೂ ಬರಲಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಎಸ್ಟಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಹನುಮಂತಪ್ಪ, ಗುರುರಾಜು, ಶ್ರೀನಿವಾಸಪುರ ಎಸ್ಟಿ ಮೋರ್ಚಾ ಅಧ್ಯಕ್ಷ ಅಂಬರೀಶ್, ಕಾರ್ಯಾಲಯ ಕಾರ್ಯದರ್ಶಿ ರಾಜೇಶ್ ಸಿಂಗ್, ಪಕ್ಷದ ಹಿರಿಯ ಮುಖಂಡರಾದ ರತ್ನಮ್ಮ, ಜಯನಗರ ಶ್ರೀಧರ್, ಆಟೋ ಮಂಜುನಾಥ್, ವೆಂಕಟಾಚಲಪತಿ, ರವಿಕುಮಾರ್, ಶ್ರೀನಿವಾಸ್, ವಿನೋದ್ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande