ಮಕ್ಕಳ ಧ್ವನಿಗೂ ಗ್ರಾಮಾಭಿವೃದ್ಧಿಯಲ್ಲಿ ಆದ್ಯತೆ ನೀಡಿ: ಸಚಿವ ಈಶ್ವರ ಖಂಡ್ರೆ
ಬೆಂಗಳೂರು, 13 ನವೆಂಬರ್ (ಹಿ.ಸ.): ಮಕ್ಕಳು ಕೇವಲ ಭವಿಷ್ಯದ ಪ್ರಜೆಗಳಲ್ಲ, ಇಂದಿನ ನಾಗರಿಕರೂ ಆಗಿದ್ದಾರೆ. ಗ್ರಾಮದ ಹಿರಿಯರ ಅಭಿಪ್ರಾಯದಷ್ಟೇ ಮಕ್ಕಳ ಧ್ವನಿಗೂ ಮನ್ನಣೆ ನೀಡಿ, ಅವರ ಬೇಡಿಕೆಗಳನ್ನು ಗ್ರಾಮಾಭಿವೃದ್ಧಿ ಯೋಜನೆಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ
ವಿಶೇಷ ಮಕ್ಕಳ ಗ್ರಾಮಸಭೆ


ಬೆಂಗಳೂರು, 13 ನವೆಂಬರ್ (ಹಿ.ಸ.):

ಮಕ್ಕಳು ಕೇವಲ ಭವಿಷ್ಯದ ಪ್ರಜೆಗಳಲ್ಲ, ಇಂದಿನ ನಾಗರಿಕರೂ ಆಗಿದ್ದಾರೆ. ಗ್ರಾಮದ ಹಿರಿಯರ ಅಭಿಪ್ರಾಯದಷ್ಟೇ ಮಕ್ಕಳ ಧ್ವನಿಗೂ ಮನ್ನಣೆ ನೀಡಿ, ಅವರ ಬೇಡಿಕೆಗಳನ್ನು ಗ್ರಾಮಾಭಿವೃದ್ಧಿ ಯೋಜನೆಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರಿನ ಜಕ್ಕೂರಿನ ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ವಿಶೇಷ ಮಕ್ಕಳ ಗ್ರಾಮಸಭೆಗೆ ಅವರು ಚಾಲನೆ ನೀಡಿದರು.

ರಾಜ್ಯದ 5,927 ಗ್ರಾಮ ಪಂಚಾಯಿತಿಗಳಲ್ಲಿ ನವೆಂಬರ್ 13ರಿಂದ ಜನವರಿ 24ರವರೆಗೆ 10 ವಾರಗಳ ಕಾಲ ಮಕ್ಕಳ ಗ್ರಾಮಸಭೆ ನಡೆಯಲಿದೆ. ಈ ಸಭೆಗಳ ಮೂಲಕ ಮಕ್ಕಳ ಹಕ್ಕುಗಳು, ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಪರಿಸರ ಸಂರಕ್ಷಣೆ, ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಮೂಡಿಸಲಾಗುತ್ತದೆ.

ಶಾಲೆಗಳಲ್ಲಿನ ಶೌಚಾಲಯ, ಕುಡಿಯುವ ನೀರು, ಆಟದ ಮೈದಾನ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಮಕ್ಕಳು ಮುಕ್ತವಾಗಿ ಪ್ರಸ್ತಾಪಿಸಲು ಅವಕಾಶ ಕಲ್ಪಿಸಬೇಕು. ಅವರ ಬೇಡಿಕೆಗಳನ್ನು ಗ್ರಾಮ ಪಂಚಾಯಿತಿಗಳ ಕ್ರಿಯಾ ಯೋಜನೆಯಲ್ಲಿ ಸೇರಿಸಿ ಪರಿಹರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಜಕ್ಕೂರಿನ ಮಾದರಿ ಪಾರಂಪರಿಕ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮೀಣ ಜೀವನಶೈಲಿ, ಕೃಷಿ, ವಿವಿಧ ವೃತ್ತಿಗಳು ಮತ್ತು ಸಂಸ್ಕೃತಿಯ ಪರಿಚಯ ಮಾಡಿಕೊಟ್ಟರು. ಮಕ್ಕಳ ಗ್ರಾಮಸಭೆಯ ಅಣಕು ಪ್ರದರ್ಶನ ವೀಕ್ಷಿಸಿದರು. ಪರಿಸರ ಸಂರಕ್ಷಣೆ, ನೀರಿನ ಮಿತಬಳಕೆ, ಏಕಬಳಕೆ ಪ್ಲಾಸ್ಟಿಕ್ ತ್ಯಜಿಸುವುದು ಹಾಗೂ ಮರಗಳನ್ನು ಬೆಳೆಸುವ ಮಹತ್ವದ ಬಗ್ಗೆಯೂ ಮಕ್ಕಳಿಗೆ ತಿಳಿಸಿದರು.

ಮಕ್ಕಳಲ್ಲಿ ನಾಯಕತ್ವ, ಸೃಜನಶೀಲತೆ, ಸಾಮಾಜಿಕ ಜವಾಬ್ದಾರಿ ಮತ್ತು ಪ್ರಶ್ನಿಸುವ ಮನೋಭಾವ ಬೆಳೆಸುವುದು ಅಗತ್ಯ. ಮಕ್ಕಳ ಧ್ವನಿಗೆ ವೇದಿಕೆ ಕಲ್ಪಿಸುವ ಗ್ರಾಮಸಭೆಗಳು ಸಮಾನತೆಯ ಮತ್ತು ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕೆ ಮಹತ್ವದ ಹೆಜ್ಜೆಯಾಗಿವೆ ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande