ವಾರ್ಡ್ ಒನ್ ಅಭಿಯಾನ: 526 ಸಮಸ್ಯೆಗಳ ಪೈಕಿ 400ಕ್ಕೆ ಪರಿಹಾರ
ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ವಾರ್ಡ್ ಒನ್ ಅಭಿಯಾನದಡಿ ಎರಡು ವಾರಗಳಲ್ಲಿ ಗುರುತಿಸಲಾದ 526 ಸಮಸ್ಯೆಗಳ ಪೈಕಿ 400 ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ. ಸ್ವಚ್ಛತೆ, ರಸ್ತೆ ಗುಂಡಿ ದುರಸ್ತಿ, ಒತ್ತುವರಿ ತೆರವು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಆದ್ಯತ
bengaluru-ward-one-campaign-400-out-of-526-issues-resolved


ಬೆಂಗಳೂರು, 13 ನವೆಂಬರ್ (ಹಿ.ಸ.):

ನಗರದ ನಾಗರಿಕ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ 'ವಾರ್ಡ್ ಒನ್' ಅಭಿಯಾನದಡಿ ಎರಡನೇ ವಾರದಲ್ಲಿ ಗುರುತಿಸಲಾದ 526 ಸಮಸ್ಯೆಗಳ ಪೈಕಿ 400 ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗಿದೆ.

ಈ ಮೂಲಕ ಶೇ.76ರಷ್ಟು ಸಮಸ್ಯೆಗಳನ್ನು ಬಗೆಹರಿಸಿದಂತಾಗಿದೆ ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.

ನಗರದ 11 ವಾರ್ಡ್ಗಳ ವ್ಯಾಪ್ತಿಯಲ್ಲಿ ಒಟ್ಟು 28.64 ಕಿ.ಮೀ. ಉದ್ದದ ರಸ್ತೆಗಳಲ್ಲಿ ಅಭಿಯಾನ ಕೈಗೊಳ್ಳಲಾಗಿದ್ದು, ಸ್ವಚ್ಛತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.

ಪಾಲಿಕೆಯ ನೇರ ವ್ಯಾಪ್ತಿಗೆ ಸಂಬಂಧಿಸಿದ 462 ಸಮಸ್ಯೆಗಳ ಪೈಕಿ 374 ಸಮಸ್ಯೆಗಳನ್ನು (ಶೇ.81) ಪರಿಹರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಭಿಯಾನದಡಿ ಗುರುತಿಸಲಾದ 80 ಟನ್ ನಿರ್ಮಾಣ ಮತ್ತು ಕಟ್ಟಡಗಳ ಅವಶೇಷಗಳ ಪೈಕಿ 75.09 ಟನ್ ತೆರವುಗೊಳಿಸಲಾಗಿದೆ. 45 ಕಸದ ಕಪ್ಪು ಚುಕ್ಕೆಗಳ ಪೈಕಿ 41 ಸ್ಥಳಗಳನ್ನು ಸ್ವಚ್ಛಗೊಳಿಸಲಾಗಿದೆ.

ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ಗಳ ತೆರವು ಕಾರ್ಯದಲ್ಲಿ 110ರ ಪೈಕಿ 96 ತೆರವುಗೊಳಿಸಲಾಗಿದೆ. ಪಾದಚಾರಿ ಮಾರ್ಗಗಳಲ್ಲಿದ್ದ 70 ಒತ್ತುವರಿಗಳ ಪೈಕಿ 61 ತೆರವು ಮಾಡಲಾಗಿದೆ.

ರಸ್ತೆಗಳಲ್ಲಿನ 96 ಗುಂಡಿಗಳ ಪೈಕಿ 80 ಗುಂಡಿಗಳನ್ನು ಮುಚ್ಚಲಾಗಿದ್ದು, 26 ಮರಗಳ ಪೈಕಿ 21 ಮರಗಳ ಅಪಾಯಕಾರಿ ಕೊಂಬೆಗಳನ್ನು ಕತ್ತರಿಸಲಾಗಿದೆ.

ಒಟ್ಟು 4.18 ಕಿ.ಮೀ. ಪಾದಚಾರಿ ಮಾರ್ಗ ದುರಸ್ತಿ ಗುರಿಯಲ್ಲಿ 2.98 ಕಿ.ಮೀ. ಕಾಮಗಾರಿ ಪೂರ್ಣಗೊಳಿಸಲಾಗಿದೆ. 88 ಚರಂಡಿ ಸ್ಲ್ಯಾಬ್ಗಳ ಪೈಕಿ 60 ಅಳವಡಿಸಲಾಗಿದೆ.

ಇನ್ನು ರಸ್ತೆ ಬದಿಯ ಚರಂಡಿಗಳ 3.8 ಕಿ.ಮೀ. ಹೂಳೆತ್ತುವ ಗುರಿಯಲ್ಲಿ 2.5 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ರಾಜಕಾಲುವೆಗಳ 1.19 ಕಿ.ಮೀ. ಹೂಳೆತ್ತುವ ಗುರಿಯಲ್ಲಿ 0.75 ಕಿ.ಮೀ. ಕಾಮಗಾರಿ ಕೈಗೊಳ್ಳಲಾಗಿದೆ. 24 ಜಂಕ್ಷನ್ಗಳ ಪೈಕಿ 13 ಜಂಕ್ಷನ್ಗಳನ್ನು ಸ್ವಚ್ಛಗೊಳಿಸಿ ಸುಧಾರಿಸಲಾಗಿದೆ.

ಇತರೆ ಇಲಾಖೆಗಳ ಸಮನ್ವಯದಲ್ಲೂ ಕಾರ್ಯಾಚರಣೆ

ಬೆಸ್ಕಾಂಗೆ ಸಂಬಂಧಿಸಿದ 13 ಸಮಸ್ಯೆಗಳ ಪೈಕಿ 7 ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ವ್ಯಾಪ್ತಿಯ 48 ಕಾಮಗಾರಿಗಳ ಪೈಕಿ 19 ಪೂರ್ಣಗೊಂಡಿವೆ.

ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್ಸಿಎಲ್) ವ್ಯಾಪ್ತಿಯ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಸಂಚಾರ ಪೊಲೀಸರಿಗೆ ಸಂಬಂಧಿಸಿದ ಮೂರು ಫಲಕಗಳ ಸ್ಥಳಾಂತರ ಕಾರ್ಯ ಪ್ರಗತಿಯಲ್ಲಿದೆ.

ಬಾಕಿ ಉಳಿದಿರುವ ಕಾಮಗಾರಿಗಳನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಆಯುಕ್ತ ಕೆ.ಎನ್. ರಮೇಶ್ ಸೂಚಿಸಿದ್ದಾರೆ.

ಸ್ವಚ್ಛಗೊಳಿಸಿರುವ ಕಸದ ಸ್ಥಳಗಳಲ್ಲಿ ಮತ್ತೆ ಕಸ ಸುರಿಯದಂತೆ ನಿಗಾ ವಹಿಸಬೇಕು. ಕಾಮಗಾರಿಗಳ ಪಾರದರ್ಶಕತೆ ಹಾಗೂ ಪ್ರಗತಿ ಪರಿಶೀಲನೆಗಾಗಿ ಜಿಯೋ ಟ್ಯಾಗ್ ಮಾಡಿದ ಛಾಯಾಚಿತ್ರಗಳ ದಾಖಲಾತಿಯನ್ನು ಮುಂದುವರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ನಗರದ ಸ್ವಚ್ಛತೆ, ಸುಗಮ ಸಂಚಾರ ಹಾಗೂ ಸಾರ್ವಜನಿಕರಿಗೆ ಉತ್ತಮ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ವಾರ್ಡ್ ಒನ್ ಅಭಿಯಾನ ಮುಂದುವರಿದಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande