
ಬಳ್ಳಾರಿ, 13 ನವೆಂಬರ್ (ಹಿ.ಸ.)
ಅಂಚೆ ಇಲಾಖೆಯು ತನ್ನ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಹೊಸ ಇನ್ಶೂರೆನ್ಸ್ ಮ್ಯಾನೇಜ್ ಮೆಂಟ್ ಸೊಲ್ಯೂಷನ್ ವ್ಯವಸ್ಥೆಗೆ ಬದಲಾಗುತ್ತಿದ್ದು, ಇದರ ಹಿನ್ನೆಲೆಯಲ್ಲಿ ಅಂಚೆ ಜೀವ ವಿಮೆ ಮತ್ತು ಗ್ರಾಮೀಣ ಅಂಚೆ ಜೀವ ವಿಮೆ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ.
ನವೆಂಬರ್ 16 ರಿಂದ 24 ರವರೆಗೆ ಅಂಚೆ ಕಚೇರಿಗಳು, ಗ್ರಾಹಕ ಸೇವಾ ಕೇಂದ್ರಗಳು ಹಾಗೂ ಆನ್ ಲೈನ್ ಮಾಧ್ಯಮಗಳ ಮೂಲಕ ಪಿಎಲ್ಐ/ಆರ್ಪಿಎಲ್ಐ ಸೇವೆಗಳು ಲಭ್ಯವಿರುವುದಿಲ್ಲ.
ಗ್ರಾಹಕರು ತಮ್ಮ ಬಾಕಿ ಇರುವ ಅಥವಾ ಪಾವತಿಸಬೇಕಾದ ನವೀಕರಣ ಪ್ರೀಮಿಯಂಗಳನ್ನು ನವೆಂಬರ್ 15 ರ ರಾತ್ರಿ 11.59ರೊಳಗೆ ಕಡ್ಡಾಯವಾಗಿ ಪಾವತಿಸುವಂತೆ ಕೋರಲಾಗಿದೆ. ಬಾಕಿ ಇರುವ ಪಿಎಲ್ಐ/ಆರ್ಪಿಎಲ್ಐ ವಹಿವಾಟುಗಳು ಮತ್ತು ಇತರ ಸೇವಾ ವಿನಂತಿಗಳನ್ನು ಕೂಡ ನಿರ್ದಿಷ್ಟ ದಿನಾಂಕದೊಳಗೆ ಪೂರ್ಣಗೊಳಿಸಬೇಕು.
ಬಾಕಿ ದಾಖಲೆಗಳು ಅಥವಾ ಇತರ ಅವಶ್ಯಕತೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಪಿಎಲ್ಐ/ಆರ್ಪಿಎಲ್ಐ ಪ್ರತಿನಿಧಿಗಳು (ಸೇಲ್ಸ್ ಫೆÇೀರ್ಸ್) ಅಥವಾ ಸಿಪಿಸಿ ಅನ್ನು ಸಂಪರ್ಕಿಸಬಹುದಾಗಿದೆ.
ಹೊಸ ಇನ್ಶೂರೆನ್ಸ್ ಮ್ಯಾನೇಜ್ ಮೆಂಟ್ ಸೊಲ್ಯೂಷನ್ ವ್ಯವಸ್ಥೆಯು ನವೆಂಬರ್ 25 ರಂದು ದೇಶಾದ್ಯಂತ ಜಾರಿಗೆ ಬರಲಿದೆ. ವ್ಯವಸ್ಥೆ ಮರುಸ್ಥಾಪನೆಯಾದ ಕೂಡಲೇ ಪಿಎಲ್ಐ/ಆರ್ಪಿಎಲ್ಐ ಸೇವೆಗಳು ಮತ್ತೆ ಪುನರಾರಂಭಗೊಳ್ಳಲಿವೆ.
ಈ ಸೇವಾ ವ್ಯತ್ಯಯದ ಅವಧಿಯಲ್ಲಿ ವಹಿವಾಟುಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ ಗ್ರಾಹಕರು, ಸಿಸ್ಟಮ್ ಪುನರಾರಂಭಗೊಂಡ ನಂತರ ಅನ್ವಯವಾಗುವಂತೆ ತಮ್ಮ ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್