
ಬಳ್ಳಾರಿ, 13 ನವೆಂಬರ್ (ಹಿ.ಸ.)
ಜಿಲ್ಲೆಯಲ್ಲಿ 2026-27ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ’ಯಡಿ ಬೆಳೆ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರು ತಮ್ಮ ಹತ್ತಿರದ ಬ್ಯಾಂಕುಗಳು ಅಥವಾ ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ವಿಮೆ ನೋಂದಾಯಿಸಿಕೊಳ್ಳಬಹುದು.
*ವಿವಿಧ ಬೆಳೆಗಳಿಗೆ ನೋಂದಾಯಿಸಲು ಕೊನೆಯ ದಿನ:*
ಜೋಳ (ಮಳೆಯಾಶ್ರ್ರಿತ): ನವೆಂಬರ್ 16
ಈರುಳ್ಳಿ (ನೀರಾವರಿ): ನವೆಂಬರ್ 30
ಮುಸುಕಿನ ಜೋಳ (ನೀರಾವರಿ) ಹಾಗೂ ಜೋಳ (ನೀರಾವರಿ): ಡಿಸೆಂಬರ್ 15
ಕಡಲೆ (ನೀರಾವರಿ / ಮಳೆಯಾಶ್ರಿತ): ಡಿಸೆಂಬರ್ 31
ಭತ್ತ (ನೀರಾವರಿ), ನೆಲಕಡಲೆ/ಶೇಂಗಾ (ನೀರಾವರಿ) ಹಾಗೂ ಈರುಳ್ಳಿ (ನೀರಾವರಿ): ಫೆಬ್ರವರಿ 26, 2027
ಸ್ವಯಂ ದೃಢೀಕರಣ ಪತ್ರ ಕಡ್ಡಾಯ: ಬೆಳೆ ಸಾಲ ಪಡೆಯದ ರೈತರು, ತಾವು ಯಾವುದೇ ಬ್ಯಾಂಕಿನಲ್ಲಿ ಬೆಳೆ ಸಾಲ ಪಡೆದಿರುವುದಿಲ್ಲವೆಂದು ಸ್ವಯಂ ದೃಢೀಕರಣ ಪತ್ರವನ್ನು ವಿಮೆ ನೋಂದಣಿ ಸಮಯದಲ್ಲಿ ಕಡ್ಡಾಯವಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಸಂರಕ್ಷಣೆ ಪೋರ್ಟಲ್ ಲಿಂಕ್ (https://www.samrakshane.karnataka.gov.in) ಬಳಸಿ ಮಾಹಿತಿ ಪಡೆಯಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್