ಮಹಿಳೆಯರ ಹಕ್ಕುಗಳ ಮೊದಲ ಧ್ವನಿ ಡಾ. ಅಂಬೇಡ್ಕರ್: ವಸುಧ ಧಾರವಾರ್
ಬಳ್ಳಾರಿ, 13 ನವೆಂಬರ್ (ಹಿ.ಸ.) ಭಾರತದ ಇತಿಹಾಸದಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಸಬಲೀಕರಣದ ಕುರಿತು ಮೊಟ್ಟಮೊದಲ ಬಾರಿಗೆ ಗಟ್ಟಿ ಧ್ವನಿ ಎತ್ತಿದವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಎಂದು ಬಳ್ಳಾರಿ ನಗರದ ಕಂಬಳಿ ಬಜಾರ್ ನ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕರಾದ ವಸುಧ ಧಾರವಾರ್ ಅ
ಮಹಿಳೆಯರ ಹಕ್ಕುಗಳ ಮೊದಲ ಧ್ವನಿ ಡಾ. ಅಂಬೇಡ್ಕರ್: ವಸುಧ ಧಾರವಾರ್


ಮಹಿಳೆಯರ ಹಕ್ಕುಗಳ ಮೊದಲ ಧ್ವನಿ ಡಾ. ಅಂಬೇಡ್ಕರ್: ವಸುಧ ಧಾರವಾರ್


ಮಹಿಳೆಯರ ಹಕ್ಕುಗಳ ಮೊದಲ ಧ್ವನಿ ಡಾ. ಅಂಬೇಡ್ಕರ್: ವಸುಧ ಧಾರವಾರ್


ಮಹಿಳೆಯರ ಹಕ್ಕುಗಳ ಮೊದಲ ಧ್ವನಿ ಡಾ. ಅಂಬೇಡ್ಕರ್: ವಸುಧ ಧಾರವಾರ್


ಮಹಿಳೆಯರ ಹಕ್ಕುಗಳ ಮೊದಲ ಧ್ವನಿ ಡಾ. ಅಂಬೇಡ್ಕರ್: ವಸುಧ ಧಾರವಾರ್


ಮಹಿಳೆಯರ ಹಕ್ಕುಗಳ ಮೊದಲ ಧ್ವನಿ ಡಾ. ಅಂಬೇಡ್ಕರ್: ವಸುಧ ಧಾರವಾರ್


ಮಹಿಳೆಯರ ಹಕ್ಕುಗಳ ಮೊದಲ ಧ್ವನಿ ಡಾ. ಅಂಬೇಡ್ಕರ್: ವಸುಧ ಧಾರವಾರ್


ಮಹಿಳೆಯರ ಹಕ್ಕುಗಳ ಮೊದಲ ಧ್ವನಿ ಡಾ. ಅಂಬೇಡ್ಕರ್: ವಸುಧ ಧಾರವಾರ್


ಬಳ್ಳಾರಿ, 13 ನವೆಂಬರ್ (ಹಿ.ಸ.)

ಭಾರತದ ಇತಿಹಾಸದಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಸಬಲೀಕರಣದ ಕುರಿತು ಮೊಟ್ಟಮೊದಲ ಬಾರಿಗೆ ಗಟ್ಟಿ ಧ್ವನಿ ಎತ್ತಿದವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಎಂದು ಬಳ್ಳಾರಿ ನಗರದ ಕಂಬಳಿ ಬಜಾರ್ ನ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕರಾದ ವಸುಧ ಧಾರವಾರ್ ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ ಬದುಕು ಮತ್ತು ಸಾಧನೆಗಳ ಪರಿಚಯಕ್ಕಾಗಿ ನಗರದ ರೇಡಿಯೋ ಪಾರ್ಕ್ ನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಅಂಬೇಡ್ಕರ್ ಓದು’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಮಾಜವೊಂದರ ಪ್ರಗತಿಯನ್ನು ಆ ಸಮಾಜದಲ್ಲಿ ಮಹಿಳೆಯರು ಎಷ್ಟರಮಟ್ಟಿಗೆ ಪ್ರಗತಿ ಸಾಧಿಸಿದ್ದಾರೆ ಎಂಬುದರ ಮೇಲೆ ಅಳೆಯಬೇಕು ಎಂಬ ಅಂಬೇಡ್ಕರ್ ಅವರ ಮಾತು ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ. ಮಹಿಳಾ ಪರ ನಿಲುವಿಗಾಗಿ ತಮ್ಮ ಸಚಿವ ಸ್ಥಾನವನ್ನೇ ತ್ಯಾಗ ಮಾಡಿದ ಮಹಾನ್ ನಾಯಕ ಅಂಬೇಡ್ಕರ್ ಎಂದು ಅವರು ವಿವರಿಸಿದರು.

ಇಂದಿನ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆಯುತ್ತಿರುವುದರ ಹಿಂದೆ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಆಶಯಗಳಿವೆ. ಪ್ರತಿಯೊಬ್ಬ ಮಹಿಳೆಯೂ ಅವರ ವಿಚಾರಧಾರೆಗಳನ್ನು ಅರಿತು, ಸ್ವಾವಲಂಬಿಗಳಾಗಿ ಬದುಕುವ ಮೂಲಕ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕು ಎಂದು ಕರೆ ನೀಡಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಜ್ಞಾ ಕೆ.ವಿ. ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವದ ನೂರಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಒಳಗಾಗಿರುವ ಏಕೈಕ ವ್ಯಕ್ತಿ ಡಾ. ಅಂಬೇಡ್ಕರ್. ಉತ್ತಮ ಶಿಕ್ಷಣ, ಸಮರ್ಥ ಸಂಘಟನೆ ಹಾಗೂ ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.

ತೊಗಲುಗೊ0ಬೆ ಕಲಾವಿದರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹುಲಿಗೆಮ್ಮ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ತಂದೆಯ ಕಾಲದಿಂದಲೂ ಪರದೆ ಹಿಂದೆ ತೊಗಲುಗೊಂಬೆಯಾಡಿಸುತ್ತಾ ಬೆಳೆದವರು, ಅಕ್ಷರದ ಜ್ಞಾನವಿಲ್ಲ ಎಂದು ಕಂಠಪಾಠ ಮಾಡಿದ್ದ ಹಾಡುಗಳ ಮೂಲಕ ತಮ್ಮ ಕಲೆಯ ಪರಿಚಯ ಮಾಡಿಕೊಟ್ಟರು.

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಪುಸ್ತಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥ ಕೆ. ಮಲ್ಲಿಕಾರ್ಜುನ ಹಾಗೂ ಕನ್ನಡದ ವಿಭಾಗದ ಮುಖ್ಯಸ್ಥ ಡಾ. ಸಿ. ಕೊಟ್ರಪ್ಪ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande