ಪಿಂಚಣಿದಾರರಿಗೆ ಮನೆ ಬಾಗಿಲಲ್ಲೇ ಡಿಜಿಟಲ್ ಜೀವನ್ ಪ್ರಮಾಣ ಪತ್ರ ಸೇವೆ
ಧಾರವಾಡ, 13 ನವೆಂಬರ್ (ಹಿ.ಸ.): ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ಪಿಂಚಣಿದಾರರಿಗೆ ಮನೆ ಬಾಗಿಲಲ್ಲೇ ಡಿಜಿಟಲ್ ಜೀವನ್ ಪ್ರಮಾಣ ಪತ್ರ ಸಲ್ಲಿಸುವ ಸೇವೆ ಒದಗಿಸುತ್ತಿದೆ. ಕೇಂದ್ರ, ರಾಜ್ಯ ಸರ್ಕಾರಿ, ಸೈನಿಕ ಹಾಗೂ ಭವಿಷ್ಯ ನಿಧಿ ಪಿಂಚಣಿದಾರರು ಈ ಸೇವೆ ಪಡೆಯಬಹುದು. ಆಧಾರ್ ಸಂಖ್
ಪಿಂಚಣಿದಾರರಿಗೆ ಮನೆ ಬಾಗಿಲಲ್ಲೇ ಡಿಜಿಟಲ್ ಜೀವನ್ ಪ್ರಮಾಣ ಪತ್ರ ಸೇವೆ


ಧಾರವಾಡ, 13 ನವೆಂಬರ್ (ಹಿ.ಸ.):

ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ಪಿಂಚಣಿದಾರರಿಗೆ ಮನೆ ಬಾಗಿಲಲ್ಲೇ ಡಿಜಿಟಲ್ ಜೀವನ್ ಪ್ರಮಾಣ ಪತ್ರ ಸಲ್ಲಿಸುವ ಸೇವೆ ಒದಗಿಸುತ್ತಿದೆ.

ಕೇಂದ್ರ, ರಾಜ್ಯ ಸರ್ಕಾರಿ, ಸೈನಿಕ ಹಾಗೂ ಭವಿಷ್ಯ ನಿಧಿ ಪಿಂಚಣಿದಾರರು ಈ ಸೇವೆ ಪಡೆಯಬಹುದು. ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಂಚಣಿ ಪಾವತಿ ಆದೇಶ ಸಂಖ್ಯೆ ಹಾಗೂ ಪಿಂಚಣಿ ಖಾತೆ ವಿವರಗಳೊಂದಿಗೆ ಬಯೋಮೆಟ್ರಿಕ್ ಅಥವಾ ಮುಖ ಗುರುತಿಸುವಿಕೆ ಮೂಲಕ ಕೆಲವೇ ನಿಮಿಷಗಳಲ್ಲಿ ಪ್ರಮಾಣಪತ್ರ ಪಡೆಯಬಹುದು. ಇದಕ್ಕೆ 70 ರೂ. ಸೇವಾ ಶುಲ್ಕ ನಿಗದಿಪಡಿಸಲಾಗಿದೆ.

ಕರ್ನಾಟಕದ 9,700ಕ್ಕೂ ಹೆಚ್ಚು ಅಂಚೆ ಕಚೇರಿಗಳ ಮೂಲಕ 11,000ಕ್ಕೂ ಅಧಿಕ ಅಂಚೆ ಸಿಬ್ಬಂದಿ ಈ ಸೇವೆ ಒದಗಿಸುತ್ತಿದ್ದಾರೆ. 2026ರ ನವೆಂಬರ್ 1ರಿಂದ ಎಲ್ಲ ಅಂಚೆ ಕಚೇರಿಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಲಾಗಿದೆ. ಇಪಿಎಫ್‌ಒ ಮತ್ತು ದೂರಸಂಪರ್ಕ ಇಲಾಖೆಯ ಪಿಂಚಣಿದಾರರಿಗೆ ಈ ಸೇವೆ ಉಚಿತವಾಗಿದೆ.

ಪಿಂಚಣಿದಾರರು ವಾರ್ಷಿಕ ಜೀವನ್ ಪ್ರಮಾಣ ಪತ್ರ ಸಲ್ಲಿಸಲು ಅಂಚೆ ಸಿಬ್ಬಂದಿಯ ಮನೆ ಬಾಗಿಲ ಸೇವೆ ಸದುಪಯೋಗಪಡಿಸಿಕೊಳ್ಳುವಂತೆ ಧಾರವಾಡ ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande