ಸೋನಿಯಾ ಗಾಂಧಿ ಆತ್ಮಕಥೆ ಓದಲು ಕಾತರ: ಸಚಿವ ಟಿ. ರಘುಮೂರ್ತಿ
ಬೆಂಗಳೂರು, 10 ನವೆಂಬರ್ (ಹಿ.ಸ.): ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಕಥನ ''ಬಿಲಾಂಗಿಂಗ್: ಎ ಜರ್ನಿ ಆಫ್ ಲವ್'' ಕೃತಿಯ ಪ್ರತಿ ಕೈಗೆ ಸಿಕ್ಕಿದ್ದು, ಪುಸ್ತಕ ಓದಲು ಆರಂಭಿಸಿದ್ದೇನೆ. ಸಾಧ್ಯವಾದಷ್ಟು ಬೇಗ ಸಂಪೂರ್ಣವಾಗಿ ಓದಿ ಮುಗಿಸಲು ಕಾತರನಾಗಿದ್ದೇನೆ ಎಂದು ಪರಿಶಿಷ
ಸಚಿವ ಟಿ. ರಘುಮೂರ್ತಿ


ಬೆಂಗಳೂರು, 10 ನವೆಂಬರ್ (ಹಿ.ಸ.):

ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಕಥನ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಕೃತಿಯ ಪ್ರತಿ ಕೈಗೆ ಸಿಕ್ಕಿದ್ದು, ಪುಸ್ತಕ ಓದಲು ಆರಂಭಿಸಿದ್ದೇನೆ. ಸಾಧ್ಯವಾದಷ್ಟು ಬೇಗ ಸಂಪೂರ್ಣವಾಗಿ ಓದಿ ಮುಗಿಸಲು ಕಾತರನಾಗಿದ್ದೇನೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಟಿ. ರಘುಮೂರ್ತಿ ತಿಳಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಸಂಬಂಧಗಳ ಭಾವನೆ ಹಾಗೂ ಸಾರ್ವಜನಿಕ ಸೇವೆಯ ಅನುಭವಗಳು ಮಿಳಿತಗೊಂಡಿರುವ ಜೀವನಕಥೆ ಇದಾಗಿದೆ. ಪುಸ್ತಕದ ಒಂದೆರಡು ಪುಟಗಳನ್ನು ಓದುತ್ತಿದ್ದಂತೆಯೇ ಅದರ ವಿಶೇಷತೆ ಮತ್ತು ಆಳವಾದ ಒಳನೋಟಗಳು ಅರಿವಿಗೆ ಬಂದಿವೆ ಎಂದು ಹೇಳಿದ್ದಾರೆ.

ದೇಶದ ಪ್ರತಿಷ್ಠಿತ ಗಾಂಧಿ ಕುಟುಂಬದೊಂದಿಗೆ ತಮಗಾದ ನಂಟು, ಪತಿ ರಾಜೀವ್ ಗಾಂಧಿ ಅವರೊಂದಿಗಿನ ಒಡನಾಟ ಹಾಗೂ ನಂತರದ ಜೀವನದ ಪ್ರತಿಯೊಂದು ಹಂತಗಳ ಕುರಿತು ಸೋನಿಯಾ ಗಾಂಧಿ ಅವರು ಕೃತಿಯಲ್ಲಿ ವಿವರಿಸಿದ್ದಾರೆ. ಅತ್ಯಂತ ಆತ್ಮೀಯವಾಗಿ ನಿರೂಪಿಸಿರುವ ಈ ಪುಸ್ತಕವನ್ನು ಪ್ರತಿಯೊಬ್ಬರೂ ಓದಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ 'ಜರ್ನಿ ಆಫ್ ಲವ್' ಅನುಭವಿಸುವ ಮೂಲಕ ಜೀವನದ ಮೌಲ್ಯಗಳನ್ನು ಮತ್ತಷ್ಟು ಅರಿತುಕೊಳ್ಳಬಹುದು. ಎಲ್ಲರೂ ಈ ಕೃತಿಯನ್ನು ಓದಿ ವಿಶೇಷ ಅನುಭವ ಪಡೆಯಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ಸಚಿವ ಟಿ. ರಘುಮೂರ್ತಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande