ತುಂಗಭದ್ರ : ಬೆಳೆಗಳಿಗೆ ನೀರು ನೀಡಲು ತುಂಗಭದ್ರ ರೈತ ಸಂಘ ಆಗ್ರಹ
ಬಳ್ಳಾರಿ, 08 ಅಕ್ಟೋಬರ್ (ಹಿ.ಸ.) ತುಂಗಭದ್ರ ಜಲಾಶಯದಲ್ಲಿ ಪ್ರಸ್ತುತ 68 ಟಿಎಂಸಿ ನೀರು ಲಭ್ಯವಿದ್ದು ಬಲದಂಡೆ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಬೆಳೆಗಳ ಸಂರಕ್ಷಣೆಗಾಗಿ ನೀರು ಪೂರೈಸಲು ನೀರಾವರಿ ನಿರ್ವಹಣಾ ಸಭೆಯನ್ನು ತ್ವರಿತವಾಗಿ ಕರೆಯಬೇಕು ಎಂದು ತುಂಗಭದ್ರ ರೈತ ಸಂಘ ಆಗ್ರಹಿಸಿದೆ. ತುಂಗಭದ್ರ ರೈತ
ತುಂಗಭದ್ರ : ಬೆಳೆದುನಿಂತಿರುವ ಬೆಳೆಗಳಿಗೆ ನೀರು ನೀಡಲು ತುಂಗಭದ್ರ ರೈತ ಸಂಘ


ತುಂಗಭದ್ರ : ಬೆಳೆದುನಿಂತಿರುವ ಬೆಳೆಗಳಿಗೆ ನೀರು ನೀಡಲು ತುಂಗಭದ್ರ ರೈತ ಸಂಘ


ತುಂಗಭದ್ರ : ಬೆಳೆದುನಿಂತಿರುವ ಬೆಳೆಗಳಿಗೆ ನೀರು ನೀಡಲು ತುಂಗಭದ್ರ ರೈತ ಸಂಘ


ತುಂಗಭದ್ರ : ಬೆಳೆದುನಿಂತಿರುವ ಬೆಳೆಗಳಿಗೆ ನೀರು ನೀಡಲು ತುಂಗಭದ್ರ ರೈತ ಸಂಘ


provide water to standing crops


ಬಳ್ಳಾರಿ, 08 ಅಕ್ಟೋಬರ್ (ಹಿ.ಸ.)

ತುಂಗಭದ್ರ ಜಲಾಶಯದಲ್ಲಿ ಪ್ರಸ್ತುತ 68 ಟಿಎಂಸಿ ನೀರು ಲಭ್ಯವಿದ್ದು ಬಲದಂಡೆ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಬೆಳೆಗಳ ಸಂರಕ್ಷಣೆಗಾಗಿ ನೀರು ಪೂರೈಸಲು ನೀರಾವರಿ ನಿರ್ವಹಣಾ ಸಭೆಯನ್ನು ತ್ವರಿತವಾಗಿ ಕರೆಯಬೇಕು ಎಂದು ತುಂಗಭದ್ರ ರೈತ ಸಂಘ ಆಗ್ರಹಿಸಿದೆ.

ತುಂಗಭದ್ರ ರೈತ ಸಂಘದ ಅಧ್ಯಕ್ಷ ಡಾ. ಪುರುಷೋತ್ತಮಗೌಡ ದರೂರು ಅವರು ಸುದ್ದಿಗಾರರ ಜೊತೆಯಲ್ಲಿ ಗುರುವಾರ ಮಾತನಾಡಿ, ಬೆಳೆಗಳ ಸಂರಕ್ಷಣೆಗಾಗಿ ಕೈಗಾರಿಕೆಗಳಿಗೆ ಪೂರೈಸುತ್ತಿರುವ ನೀರಿನ ಪ್ರಮಾಣದಲ್ಲಿ ಕಡಿತ ಮಾಡಿ ಕೃಷಿಗೆ ನೀರನ್ನು ಪೂರೈಸಿ ರೈತರನ್ನು ಕಾಪಾಡಬೇಕು ಹಾಗೂ ದೇಶದ ಆಹಾರ ಭದ್ರತೆಯನ್ನು ಸಂರಕ್ಷಿಸಬೇಕು ಎಂದು ಅವರು ಕೋರಿದ್ದಾರೆ.

ತುಂಗಭದ್ರ ಜಲಾಶಯದಲ್ಲಿ ಪ್ರಸ್ತುತ 64 ಟಿಎಂಸಿ ನೀರಿದೆ. ಇರದಲ್ಲಿ 10 ಟಿಎಂಸಿ ನೀರು ಕುಡಿಯುವ ನೀರಿಗಾಗಿ, 6 ಟಿಎಂಸಿ ನೀರು ಆವಿಗಾಗಿ ಹಾಗೂ 2 ಟಿಎಂಸಿ ನೀರು ಡೆಡ್ ಸ್ಟೋರೇಜ್ಗೆ ಮೀಸಲಿಟ್ಟರೂ, 45 ಟಿಎಂಸಿ ನೀರು ಕೃಷಿಗೆ ಲಭ್ಯವಾಗಲಿದೆ. ನವೆಂಬರ್ 30ರವರೆಗೆ ಪ್ರತಿದಿನ 9,500 ಕ್ಯುಸೆಕ್ಸ್ ಪ್ರಮಾಣದಲ್ಲಿ ನೀರು ಪೂರೈಕೆ ಮಾಡಿದರೂ ಅಂದಾಜು 40 ಟಿಎಂಸಿ ಪ್ರಮಾಣದಲ್ಲಿ ನೀರು ಬಳಕೆಯಾಗಲಿದೆ. ಡಿಸೆಂಬರ್ನಲ್ಲಿ ಇನ್ನೂ 1 ಟಿಎಂಸಿ ನೀರನ್ನು ಎಚ್ಎಲ್ಸಿ ಕಾಲುವೆಗೆ ಬಿಡುಗಡೆ ಮಾಡಿದರೆ ಮೆಣಸಿನಕಾಯಿ, ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಸಂಪೂರ್ಣವಾಗಿ ಉಳಿಸಬಹುದು ಎಂದು ಅವರು ವಿವರಿಸಿದರು.

ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಕಾಲುವೆಗಳಿಗೆ ನೀರು ಹಂಚಿಕೆ ಕುರಿತು ಸೆಪ್ಟೆಂಬರ್ 11ರಂದು ನಡೆದ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನವನ್ನು ಉಲ್ಲೇಖಿಸಿದ ಅವರು, ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರ ಹಿತದೃಷ್ಟಿಯಿಂದ ಎಚ್ಎಲ್ಸಿ ಮತ್ತು ಎಲ್ಎಲ್ಸಿ ಕಾಲುವೆಗಳಿಗೆ ಸಮರ್ಪಕವಾಗಿ ನೀರು ನೀಡಬೇಕು ಎಂದು ಆಗ್ರಹಿಸಿದರು.

ಬಳ್ಳಾರಿ ಗ್ರಾಮೀಣ, ಕಂಪ್ಲಿ, ಸಿರುಗುಪ್ಪ, ಸಂಡೂರು ಹಾಗೂ ಬಳ್ಳಾರಿ ನಗರ ಶಾಸಕರು ಈ ಕುರಿತು ರೈತರ ಪರವಾಗಿ ಮುತುವರ್ಜಿವಹಿಸಿ ತುಂಗಭದ್ರ ಜಲಾಶಯಕ್ಕೆ ಭೇಟಿ ನೀಡಿ, ಬೆಳೆದು ನಿಂತಿರುವ ಬೆಳೆಗಳ ಸಂರಕ್ಷಣೆಗೆ ಆದ್ಯತೆ ನೀಡಿ ರೈತರ ಪರವಾಗಿ ಸೂಕ್ತ ನಿರ್ಣಯವನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿ ಕೃಷಿಯನ್ನು ಶಾಶ್ವತವಾಗಿ ಕೈಬಿಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕೊರ್ಲಗುಂದಿ ತಿಮ್ಮಾರೆಡ್ಡಿ, ರಾಮಕೃಷ್ಣ, ಜಾಲಿಹಾಳ್ ಶ್ರೀಧರಗೌಡ, ಶಿವಯ್ಯ, ರುದ್ರಯ್ಯ, ಶ್ರೀನಿವಾಸ, ಶ್ರೀಧರಗಡ್ಡೆ ವೀರನಗೌಡ, ಸೋಮಸಮುದ್ರ ಲಿಂಗಾರೆಡ್ಡಿ, ದರೂರು ಸಾಗರಗೌಡ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande