
ಬಳ್ಳಾರಿ, 08 ಅಕ್ಟೋಬರ್ (ಹಿ.ಸ.)
ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕರ ಸಂಘ, ಬಳ್ಳಾರಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘ ಹಾಗೂ ಬಳ್ಳಾರಿ ರೆಸಿಡೆನ್ಸಿಯಲ್ ಸ್ಕೂಲ್ ಮತ್ತು ಕಾಲೇಜ್ ಇವರ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ `ನಾರಿ ಶಕ್ತಿ -ಸೆಷನ್-01' ಅಡಿಯಲ್ಲಿ ಬಾಲಕಿಯರ ಕರಾಟೆ ಪಂದ್ಯಾವಳಿಯನ್ನು ನವೆಂಬರ್ 29ರ ಭಾನುವಾರ ಬಳ್ಳಾರಿಯಲ್ಲಿ ಆಯೋಜಿಸಲಾಗಿದೆ.
ಸ್ಪರ್ಧೆಗಳು ಅಲ್ಲೀಪುರದಲ್ಲಿ ಇರುವ ಬಳ್ಳಾರಿ ರೆಸಿಡೆನ್ಸಿಯಲ್ ಸ್ಕೂಲ್ ಮತ್ತು ಕಾಲೇಜ್ನ `ಕಲಾ ಕ್ಷೇತ್ರ ಸಭಾಂಗಣ'ದಲ್ಲಿ ನಡೆಯಲಿದ್ದು, ಆಸಕ್ತರು, ಕಟ್ಟೇಸ್ವಾಮಿ ಬಳ್ಳಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಕರಾಟೆ ಶಿಕ್ಷಕರ ಸಂಘ , ಮೊಬೈಲ್ : 97314 81118 ಗೆ ಸಂಪರ್ಕ ಮಾಡಿರಿ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್