ಭುಜಂಗನಗರ ಯುವತಿ ಕಾಣೆ: ಪತ್ತೆಗೆ ಮನವಿ
ಸಂಡೂರು, 08 ಅಕ್ಟೋಬರ್ (ಹಿ.ಸ.) ಸಂಡೂರು ತಾಲೂಕಿನ ಭುಜಂಗನಗರ ಗ್ರಾಮದ 4 ನೇ ವಾರ್ಡ್ ನ ನಿವಾಸಿಯಾದ ದೀಪಿಕಾ (18) ಅ.05 ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಪುನ: ಮನೆಗೆ ಬಾರದೇ ಕಾಣೆಯಾಗಿರುವ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರ
ಭುಜಂಗನಗರ ಯುವತಿ ಕಾಣೆ: ಪತ್ತೆಗೆ ಮನವಿ


ಸಂಡೂರು, 08 ಅಕ್ಟೋಬರ್ (ಹಿ.ಸ.)

ಸಂಡೂರು ತಾಲೂಕಿನ ಭುಜಂಗನಗರ ಗ್ರಾಮದ 4 ನೇ ವಾರ್ಡ್ ನ ನಿವಾಸಿಯಾದ ದೀಪಿಕಾ (18) ಅ.05 ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಪುನ: ಮನೆಗೆ ಬಾರದೇ ಕಾಣೆಯಾಗಿರುವ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಪ್ರಕಣೆಯಲ್ಲಿ ತಿಳಿಸಿದ್ದಾರೆ.

ಚಹರೆ ಗುರುತು: ಅಂದಾಜು 4.5 ಅಡಿ ಎತ್ತರ, ಕೋಲು ಮುಖ, ಬೆಳ್ಳನೆ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಸುಮಾರು ಎರಡು ಅಡಿ ಕಪ್ಪು ಕೂದಲು ಇವೆ. ಬಲಗಡೆ ದವಡೆ ಹತ್ತಿರ ಕಪ್ಪು ಮಚ್ಚೆ ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ಕಾಲೇಜ ಯೂನಿಫಾರ್ಮ ಸಿಮೆಂಟ್ ಬಣ್ಣದ ಟಾಪ್ ಹಾಗೂ ಕಡು ನೀಲಿ ಬಣ್ಣದ ಬಾಟಮ್ ಧರಿಸಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ.

ಯುವತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಸಂಡೂರು ವೃತ್ತ ಸಿ.ಪಿ.ಐ ದೂ.08395-260100, 9480803036 ಅಥವಾ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande