ಕಾಣೆಯಾದ ಕುರೇಕುಪ್ಪ ವ್ಯಕ್ತಿಯ ಪತ್ತೆಗೆ ಮನವಿ
ತೋರಣಗಲ್ಲು, 08 ಅಕ್ಟೋಬರ್ (ಹಿ.ಸ.) ಕುರೇಕುಪ್ಪ ಗ್ರಾಮದ ನಿವಾಸಿಯಾದ ಬಸವರಾಜ ಗಡದವರ (30) ಆಗಸ್ಟ್ 20 ರಂದು ಮನೆಯಿಂದ ನಾಪತ್ತೆಯಾಗಿರುವ ಕುರಿತು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ. ಚಹರೆ ಗುರುತು: ಎತ್ತರ 5.7 ಅ
ಕಾಣೆಯಾದ  ಕುರೇಕುಪ್ಪ ವ್ಯಕ್ತಿಯ ಪತ್ತೆಗೆ ಮನವಿ


ತೋರಣಗಲ್ಲು, 08 ಅಕ್ಟೋಬರ್ (ಹಿ.ಸ.)

ಕುರೇಕುಪ್ಪ ಗ್ರಾಮದ ನಿವಾಸಿಯಾದ ಬಸವರಾಜ ಗಡದವರ (30) ಆಗಸ್ಟ್ 20 ರಂದು ಮನೆಯಿಂದ ನಾಪತ್ತೆಯಾಗಿರುವ ಕುರಿತು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ.

ಚಹರೆ ಗುರುತು:

ಎತ್ತರ 5.7 ಅಡಿ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಬಲಗೈಯಲ್ಲಿ ಜೋತಿ ಎಂಬ ಹೆಸರಿನ ಅಚ್ಚೆಹಾಕಿಸಿಕೊಂಡಿರುತ್ತಾನೆ. ಮನೆಯಿಂದ ಹೊರಡುವಾಗ ಬಿಳಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಾನೆ.

ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ಲಭ್ಯ ಆದಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯ ದೂ.08395-250100, ಮೊ.9480803062, ಅಥವಾ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande