ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್ ಹನುಮಂತಪ್ಪಗೆ ನ್ಯಾಯಾಂಗ ಬಂಧನ
ಬಳ್ಳಾರಿ, 07 ಅಕ್ಟೋಬರ್ (ಹಿ.ಸ.) ಲೇಔಟ್ ಸ್ಕೆಚ್ ನೀಡಲು 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, 18 ಸಾವಿರ ರೂಪಾಯಿ ನಗದು ಹಣವನ್ನು ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿಯೇ ಸ್ವೀಕರಿಸುತ್ತಿದ್ದ ಸರ್ವೇಯರ್ ಲೋಕಾಯುಕ್ತದ ಬಲೆಗೆ ಸಿಕ್ಕಿಬಿದ್ದು, ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಸರ್ವೇಯರ್ ಹನುಮಂ
ಲೇಔಟ್ ಸ್ಕೆಚ್ : ಲಂಚ ಸ್ವೀಕರಿಸುತ್ತಿದ್ದ ಸರ್ವೇಯರ್ ಹನುಮಂತಪ್ಪ ಲೋಕಾಯುಕ್ತ ಬಲೆಗೆ


ಬಳ್ಳಾರಿ, 07 ಅಕ್ಟೋಬರ್ (ಹಿ.ಸ.)

ಲೇಔಟ್ ಸ್ಕೆಚ್ ನೀಡಲು 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, 18 ಸಾವಿರ ರೂಪಾಯಿ ನಗದು ಹಣವನ್ನು ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿಯೇ ಸ್ವೀಕರಿಸುತ್ತಿದ್ದ ಸರ್ವೇಯರ್ ಲೋಕಾಯುಕ್ತದ ಬಲೆಗೆ ಸಿಕ್ಕಿಬಿದ್ದು, ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.

ಸರ್ವೇಯರ್ ಹನುಮಂತಪ್ಪ ಅವರು ಲೋಕಾಯುಕ್ತರ ದಾಳಿಯಲ್ಲಿ ಸಿಕ್ಕಿಕೊಂಡಿರುವವರು.

ಲೇಔಟ್ ಮಾಲೀಕ ಹವಂಭಾವಿ ವೀರೇಶ್ ಅವರು ಈ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಮಂಗಳವಾರ ಕಚೇರಿ ಕೆಲಸದ ಸಮಯದ ನಂತರ, ಸರ್ವೇಯರ್ ಕಚೇರಿಯಲ್ಲಿ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರು ದಾಳಿ ನಡೆಸಿ, ಆರೋಪಿಯನ್ನು ಹಣದ ಸಮೇತ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರಿ ಅವರ ನೇತೃತ್ವದಲ್ಲಿ ಈ ದಾಳಿ ನಡೆಯಿತು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande