ಕಾನ್ಷಿರಾಮ್ ಪರಿನಿರ್ವಾಣ ದಿನ ಅ.೯ ರಂದು ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಕೋಲಾರ, 07 ಅಕ್ಟೋಬರ್ (ಹಿ.ಸ) : ಭಾರತದ ಸಾಮಾಜಿಕ ವಿಜ್ಞಾನಿ, ರಾಜನೀತಿತಜ್ಞ ದಾದಾ ಸಾಹೇಬ್ ಕಾನ್ಞೀರಾಂರವರ ೨೦ನೇ ಪರಿ ನಿರ್ವಾಣದ ನೆನಪಿನಾರ್ಥ ಅಕ್ಟೋಬರ್ ೯ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಎಸ್ಸೆನ್ನಾರ್ ಜಿಲ್ಲಾಸ್ಪತ್ರೆ ಒಳ ರೋಗಿಗಳಿಗೆ ಬೆಳಿಗ್ಗೆ ಹಣ್ಣು-ಹಂಪಲು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗ
ಕಾನ್ಷಿರಾಮ್ ಪರಿನಿರ್ವಾಣ ದಿನ ಅ.೯ ರಂದು ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ


ಕೋಲಾರ, 07 ಅಕ್ಟೋಬರ್ (ಹಿ.ಸ) : ಭಾರತದ ಸಾಮಾಜಿಕ ವಿಜ್ಞಾನಿ, ರಾಜನೀತಿತಜ್ಞ ದಾದಾ ಸಾಹೇಬ್ ಕಾನ್ಞೀರಾಂರವರ ೨೦ನೇ ಪರಿ ನಿರ್ವಾಣದ ನೆನಪಿನಾರ್ಥ ಅಕ್ಟೋಬರ್ ೯ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಎಸ್ಸೆನ್ನಾರ್ ಜಿಲ್ಲಾಸ್ಪತ್ರೆ ಒಳ ರೋಗಿಗಳಿಗೆ ಬೆಳಿಗ್ಗೆ ಹಣ್ಣು-ಹಂಪಲು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ದಾದಾ ಸಾಹೇಬ್ ಕಾನ್ಷೀರಾಂ ಫೌಂಡೇಶನ್ ಅಧ್ಯಕ್ಷ ಕೆ.ಸಿ.ರಾಜಣ್ಣ ನೇತೃತ್ವದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎ.ಅಜಯ್ ಕುಮಾರ್ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande