ಶ್ಯಾಮಜಿ ಕೃಷ್ಣ ವರ್ಮಾ ಜಯಂತಿ: ಪ್ರಧಾನಿ ಮೋದಿ ನಮನ
ನವದೆಹಲಿ, 04 ಅಕ್ಟೋಬರ್ (ಹಿ.ಸ.): ಮಹಾನ್ ಕ್ರಾಂತಿಕಾರಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಶ್ಯಾಮಜಿ ಕೃಷ್ಣ ವರ್ಮಾ ಅವರ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ಭಾರತದ ಪರಾಧೀನತೆಯ ಸಂಕೋಲೆಗಳನ್ನು
ಪ್ರಧಾನಿ ನರೇಂದ್ರ ಮೋದಿ ಸಂಗ್ರಹ ಚಿತ್ರ


ನವದೆಹಲಿ, 04 ಅಕ್ಟೋಬರ್ (ಹಿ.ಸ.):

ಮಹಾನ್ ಕ್ರಾಂತಿಕಾರಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಶ್ಯಾಮಜಿ ಕೃಷ್ಣ ವರ್ಮಾ ಅವರ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ಭಾರತದ ಪರಾಧೀನತೆಯ ಸಂಕೋಲೆಗಳನ್ನು ಮುರಿಯಲು ಶ್ಯಾಮಜಿ ಕೃಷ್ಣ ವರ್ಮಾ ತಮ್ಮ ಜೀವನವನ್ನೇ ಸಮರ್ಪಿಸಿದ್ದರು ಎಂದು ಸ್ಮರಿಸಿದ್ದಾರೆ.

ಮಾತೃಭೂಮಿಯ ಸ್ವಾಭಿಮಾನ ರಕ್ಷಣೆಗಾಗಿ ಅವರು ತೋರಿದ ಪರಾಕ್ರಮ ಮತ್ತು ಪುರುಷಾರ್ಥವನ್ನು ಕೃತಜ್ಞ ರಾಷ್ಟ್ರ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande