ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ: ಬಸವರಾಜ ಬೊಮ್ಮಾಯಿ
ಹಾವೇರಿ, 04 ಅಕ್ಟೋಬರ್ (ಹಿ.ಸ.): ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ ಧ್ವನಿಯಲ್ಲಿ ಅಂಬಿಗರ ಚೌಡಯ್ಯನವರ ಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಮುನ್ನಡೆದರೆ ಸಮಾಜಕ್ಕೆ ಒಳ್ಳೆಯ ಭವಿಷ್ಯ ಇದೆ. ಸಮಾಜಕ್ಕೆ ಮೀಸಲಾತಿ ಕೊಡಿಸುವ ವಿಚಾರ
ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ


ಹಾವೇರಿ, 04 ಅಕ್ಟೋಬರ್ (ಹಿ.ಸ.):

ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ ಧ್ವನಿಯಲ್ಲಿ ಅಂಬಿಗರ ಚೌಡಯ್ಯನವರ ಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಮುನ್ನಡೆದರೆ ಸಮಾಜಕ್ಕೆ ಒಳ್ಳೆಯ ಭವಿಷ್ಯ ಇದೆ. ಸಮಾಜಕ್ಕೆ ಮೀಸಲಾತಿ ಕೊಡಿಸುವ ವಿಚಾರದಲ್ಲಿ ನಾನೂ ನಿಮ್ಮ ಜೊತೆಗಿರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಹಾವೇರಿಯ ವಿನಾಯಕ ನಗರದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಹಾವೇರಿ ತಾಲೂಕ ಗಂಗಾಮತ ಸಮಾಜದ ನೌಕರರ ಸಂಘದ ವತಿಯಿಂದ ಏರ್ಪಡಿಸಿದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅಂಬಿಗರ ಚೌಡಯ್ಯ ಬಸವಾದಿ ಶರಣರಲ್ಲಿ ಬಹಳ ಪ್ರಮುಖವಾಗಿರುವವರು ಅವರು ಜೀವನದ ಬದುಕಿನ ಅತ್ಯಂತ ಕಟು ಸತ್ಯಗಳನ್ನು ನಿಷ್ಠುರವಾಗಿ ನೇರವಾಗಿ ವಚನಗಳ ರೂಪದಲ್ಲಿ ಹೇಳಿರುವ ಮಹಾ ವಚನಗಾರ. ಅಂಬಿಗರ ಸಮಾಜ ಭಾರತದ ದೇಶದ ಉದ್ದಗಲಕ್ಕೂ ಹರಡಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಈ ಸಮಾಜ ಇದೆ. ಪ್ರತಿಯೊಂದು ರಾಜ್ಯದಲ್ಲಿ ಈ ಸಮಾಜ ಒಂದೊಂದು ಹೆಸರಿನಲ್ಲಿ ಗುರುತಿಸಿಕೊಂಡಿದೆ. ಈ ಸಮಾಜ 37 ನಾಮಾಂಕಿತದಿಂದ ಗುರುತಿಸಲಾಗಿದೆ. ಅಂಬಿಗರು, ಗಂಗಾಮತಸ್ತರು, ಉಪ್ಪಾಳರು ಅಂತ ಕರೆಯುತ್ತಾರೆ. ಅವರೆಲ್ಲನ್ನೂ ಒಂದುಗೂಡಿಸಿ, ವೃತ್ತಿ ಒಂದೇ ಆರ್ಥಿಕ ಸಾಮಾಜಿಕ ಸ್ಥಿತಿಗತಿ ಒಂದೇ ಇದೆ. ಹೀಗಾಗಿ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ ಧ್ವನಿಯಲ್ಲಿ ಪರಮಪೂಜ್ಯರ ನೇತೃತ್ತದಲ್ಲಿ ಮುನ್ನಡೆದರೆ ಸಮಾಜಕ್ಕೆ ಒಳ್ಳೆಯ ಭವಿಷ್ಯ ಇದೆ. ಈಗಾಗಲೇ ಕೆಲವು ನಾಮಾಂಖಿತ ಜಾತಿಗಳಿಗೆ ಮೀಸಲಾತಿ ಸಿಕ್ಕಿದೆ. ಉಳಿದವರು ಹಿಂದುಳಿದ ವರ್ಗದಲ್ಲಿ ಇದ್ದೀರಾ, ರಾಜ್ಯ ಸರ್ಕಾರ ಕುಲಶಾಸ್ತ್ರ ಅಧ್ಯಯನ ನಡೆಸಿದೆ. ಆ ಅಧ್ಯಯನದ ವರದಿ ಬಂದ ನಂತರ ಮತ್ತೆ ಪಕ್ರಿಯೆ ನಡೆಯುತ್ತದೆ. ಆಗ ನಾನು ನಿಮ್ಮ ಜೊತೆ ನಿಲ್ಲುತ್ತೇನೆ ಎಂದು ಹೇಳಿದರು.

*ಅನುದಾನದ ಭರವಸೆ*

ತಾವು ವಿದ್ಯಾರ್ಥಿಗಳಿಗೆ ವಸತಿ ನಿಲಯ ಮಾಡಲು ಅನುದಾನ ನೀಡುವಂತೆ ಮನವಿ ಮಾಡಿದ್ದೀರಿ ನಾನು ಅನುದಾನ ನೀಡುತ್ತೇನೆ. ಈ ಸಮಾಜದ ಜೊತೆಗೆ ಅತ್ಯಂತ ಅನ್ನೋನ್ಯವಾಗಿರುವ ಸಂಬಂಧ ಇದೆ. ಸುಮಾರು

ಮೂದು ವರ್ಷಗಳಿಂದ ಇದೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ 1 ಕೋಟಿ ರೂ. ಅನುದಾನ ಕೊಡಿಸಿದ್ದ. ಆದಾದ ಮೇಲೆ ಮತ್ತೊಮ್ಮೆ ನಮ್ಮ ಅಧಿಕಾರ ಬಂದ ಮೇಲೆ 5 ಕೋಟಿ ಕೊಟ್ಟಿದ್ದೇವೆ. ಸ್ಥಳೀಯ ಶಾಸಕರ ಅನುದಾನದಲ್ಲಿ 3 ಕೋಟಿ ಸೇರಿ ಒಟ್ಟು 8 ಕೋಟಿ ರೂ. ಕೊಟ್ಟಿದ್ದೇವೆ. ಉಳಿದ ಕೆಲಸವನ್ನು ಪೂರ್ಣ ಮಾಡಿದರೆ ಇಡೀ ರಾಜ್ಯದಿಂದ ಜನರು ಬರುತ್ತಾರೆ. ಅವರಿಗೆ ಅಲ್ಲಿ ಇರಲು ಅನುಕೂಲವಾಗಬೇಕು. ನಿಮ್ಮ ಸಾಮಾಜಿಕ ಹಕ್ಕುಗಳ ರಕ್ಷಣೆಗೆ ನಿಮ್ಮ ಜೊತೆಗೆ ಇರುತ್ತೇನೆ ಎಂದು ಹೇಳಿದರು.

ಅಂಬಿಗರ ಚೌಡಯ್ಯನವರ ಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳ ಆಶೀರ್ವಾದ ಇಡೀ ಸಮಾಜಕ್ಕೆ ಇದೆ. ಕಳೆದ ಐದು ವರ್ಷದಲ್ಲಿ ಈ ಸಮಾಜವನ್ನು ಎದ್ದು ನಿಲ್ಲುವಂತೆ ಕಟ್ಟುವ ಕೆಲಸವನ್ನು ಗುರುಗಳು ಮಾಡಿದಾರೆ. ಕಾಯಕವೇ ಕೈಲಾಸ ಎನ್ನುವ ಸಮಾಜ ಇದು. ಕೆಲವು ಕಡೆ ಈ ಸಮಾಜ ಇನ್ನೂ ಬಹಳ ದುಸ್ಥಿತಿಯಲ್ಲಿದೆ. ಕಲಬುರ್ಗಿ ಭಾಗದಲ್ಲಿ ವಿಠಲ ಹೆರೂರ್ ಅವರು ಬಹಳ ಹೋರಾಟ ಮಾಡಿದ್ದಾರೆ. ಯಾರೂ ಇಲ್ಲದಿರುವಾಗ ಇಡಿ ರಾಜ್ಯ ಸುತ್ತಿ ಸಮಾಜ ಕಟ್ಟಿದ್ದಾರೆ. ವಿಧಾನಪರಿಷತ್ ಸದಸ್ಯರಾಗಿದ್ದಾಗಲೂ ಈ ಸಮಾಜದ ಪರವಾಗಿ ಧ್ವನಿ ಎತ್ತಿದ್ದಾರೆ. ಅವರ ಹೋರಾಟಕ್ಕೆ ಸಾರ್ಥಕತೆ ಬರಬೇಕೆಂದರೆ ಒಕ್ಕಟಾಗಿ ಗುರುಗಳ ಜೊತೆಗೆ ನಿಂತರೆ ಎಲ್ಲ ಸರ್ಕಾರಗಳು ನಿಮ್ಮ ಮಾತು ಕೇಳುತ್ತವೆ. ನಾನು ನಿಮ್ಮ ಜೊತೆಗೆ ಇರುತ್ತೇನೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಅಂಬಿಗರ ಚೌಡಯ್ಯನವರ ಪೀಠ, ನರಸೀಪುರ ಶ್ರೀಗಳು ಸಾನಿಧ್ಯ ವಹಿಸಿದ್ದರು. ಸಚಿವರಾದ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ, ಕೆ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಕೊಟ್ರೇಶಪ್ಪ ಬಸೇಗಣ್ಣಿ, ಗಂಗಾಮತ ಸಮಾಜ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಹೆಚ್.ಎಂ.ದಂಡಿನ, ಗಂಗಾಮತ ಸಮಾಜದ ಹಾವೇರಿ ಜಿಲ್ಲಾ ಅಧ್ಯಕ್ಷರಾದ ಪರಶುರಾಮ ಸೊನ್ನದ, ತಾಲೂಕು ಅಧ್ಯಕ್ಷರಾದ ಬಸವರಾಜ ಕಳಸೂರ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande