
ಬಳ್ಳಾರಿ, 31 ಅಕ್ಟೋಬರ್ (ಹಿ.ಸ.)
ಬಳ್ಳಾರಿ ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಒನ್ ಸೇವಾ ಕೇಂದ್ರಗಳಿಗೆ ನೂತನವಾಗಿ ಫ್ರಾಂಚೈಸಿಗಳನ್ನು ನೇಮಕ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 142 ಗ್ರಾಮ ಒನ್ ಕೇಂದ್ರಗಳು ಮಂಜೂರಾಗಿದ್ದು, ಪ್ರಸ್ತುತ ಸಾರ್ವಜನಿಕರಿಗೆ ಸೇವೆ ನೀಡುತ್ತಿವೆ. ಇದೀಗ ಬಳ್ಳಾರಿ ಹಾಗೂ ಸಂಡೂರು ತಾಲೂಕುಗಳ ಒಟ್ಟು 6 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಕೇಂದ್ರಗಳಿಗೆ ಮರು-ಅಧಿಸೂಚನೆ ಹೊರಡಿಸಲಾಗಿದೆ.
*ಖಾಲಿ ಇರುವ ಗ್ರಾಮ ಪಂಚಾಯತಿ ಕೇಂದ್ರಗಳ ವಿವರ:*
ಬಳ್ಳಾರಿ ತಾಲೂಕು: ಬಸರಕೋಡು (ಗ್ರೇಡ್ 1), ಅಮರಾಪುರ (ಗ್ರೇಡ್ 1).
ಸಂಡೂರು ತಾಲೂಕು: ಕಾಳಿಂಗೇರಿ (ಗ್ರೇಡ್ 2), ದರೋಜಿ (ಗ್ರೇಡ್ 1), ಸೋವೇನಹಳ್ಳಿ (ಗ್ರೇಡ್ 2), ದೇವಗಿರಿ (ಗ್ರೇಡ್ 2).
ಆಸಕ್ತ ನಾಗರಿಕರು ಸರ್ಕಾರದ ಸೇವಾ ಸಿಂಧು ವೆಬ್ ಸೈಟ್ ಪೋರ್ಟಲ್ ಲಿಂಕ್ (https://sevasindhuservices.karnataka.gov.in/directApply.do?serviceId=2631) ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ನವೆಂಬರ್ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬ0ಧಪಟ್ಟ ತಾಲೂಕಿನ ತಹಶೀಲ್ದಾರ್ ಕಾರ್ಯಾಲಯ ಅಥವಾ ಅಧಿಕೃತ ವೆಬ್ ಸೈಟ್ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್