
ಬೆಂಗಳೂರು, 27 ಅಕ್ಟೋಬರ್ (ಹಿ.ಸ.):
ತುಮಕೂರು ಜಿಲ್ಲೆಯ ತಿಪಟೂರು ಮತ್ತು ಹೊನ್ನವಳ್ಳಿ ರಸ್ತೆ ರೈಲು ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 88ರಲ್ಲಿ ಕಾಂಪೋಸಿಟ್ ಗರ್ಡರ್ ಅಳವಡಿಕೆ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮತ್ತು 28ರಂದು ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಕೆಲವು ಪ್ಯಾಸೆಂಜರ್ ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು, ಜನಶತಾಬ್ದಿ ಎಕ್ಸ್ಪ್ರೆಸ್ ಸೇರಿದಂತೆ ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಅಲ್ಲದೆ, ಮೂರು ಎಕ್ಸ್ಪ್ರೆಸ್ ರೈಲುಗಳ ನಿರ್ಗಮನ ಸಮಯವನ್ನೂ ಮರುನಿಗದಿಪಡಿಸಲಾಗಿದೆ.
ಕಾಮಗಾರಿಗಾಗಿ ರೈಲು ಮಾರ್ಗದಲ್ಲಿ ಸಂಚಾರ ಹಾಗೂ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗುತ್ತಿರುವುದರಿಂದ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಅ. 27ರಂದು ರದ್ದಾಗುವ ರೈಲುಗಳು
- 56224: ಅರಸೀಕೆರೆ–ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್- 56229: ಕೆಎಸ್ಆರ್ ಬೆಂಗಳೂರು–ಚನ್ನಪಟ್ಟಣ ಪ್ಯಾಸೆಂಜರ್- 56230: ಚನ್ನಪಟ್ಟಣ–ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್- 56223: ಕೆಎಸ್ಆರ್ ಬೆಂಗಳೂರು–ಅರಸೀಕೆರೆ ಪ್ಯಾಸೆಂಜರ್
ಅ. 28ರಂದು ರದ್ದಾಗುವ ರೈಲುಗಳು
- 66505: ಯಲಹಂಕ–ಅರಸೀಕೆರೆ ಮೆಮು- 66506: ಅರಸೀಕೆರೆ–ಯಲಹಂಕ ಮೆಮು
ಅ. 27ರಂದು ಮಾರ್ಗ ಬದಲಾವಣೆಯಾಗುವ ರೈಲುಗಳು
12090: ಶಿವಮೊಗ್ಗ ಟೌನ್–ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್ಪ್ರೆಸ್ ಅರಸೀಕೆರೆ, ಹಾಸನ, ನೆಲಮಂಗಲ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ನೀಡುವುದಿಲ್ಲ.
56519: ಕೆಎಸ್ಆರ್ ಬೆಂಗಳೂರು–ಹೊಸಪೇಟೆ ಪ್ಯಾಸೆಂಜರ್ ಅಕ್ಟೋಬರ್ 27 ಮತ್ತು 28ರಂದು ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ದೊಡ್ಡಬೆಲೆ, ಕ್ಯಾತ್ಸಂದ್ರ, ತುಮಕೂರು, ಗುಬ್ಬಿ, ಅಮಸಂದ್ರ ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
11006: ಪುದುಚೇರಿ–ದಾದರ್ ಎಕ್ಸ್ಪ್ರೆಸ್ ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ಅ. 28ರಂದು ಮಾರ್ಗ ಬದಲಾವಣೆಯಾಗುವ ರೈಲು
12079: ಕೆಎಸ್ಆರ್ ಬೆಂಗಳೂರು–ಹುಬ್ಬಳ್ಳಿ ಜನಶತಾಬ್ದಿ ಎಕ್ಸ್ಪ್ರೆಸ್ ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಕೂಡ ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ನೀಡುವುದಿಲ್ಲ.
ಮೂರು ಎಕ್ಸ್ಪ್ರೆಸ್ ರೈಲುಗಳ ನಿರ್ಗಮನ ಸಮಯ ಬದಲಾವಣೆ
- 17310: ವಾಸ್ಕೋ ಡ ಗಾಮಾ–ಯಶವಂತಪುರ ಎಕ್ಸ್ಪ್ರೆಸ್: ಅಕ್ಟೋಬರ್ 27ರಂದು ನಿರ್ಗಮನ ಸಮಯವನ್ನು 120 ನಿಮಿಷ ಮುಂದೂಡಲಾಗಿದೆ.
- 20652: ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್: ಅಕ್ಟೋಬರ್ 28ರಂದು ನಿರ್ಗಮನ ಸಮಯವನ್ನು 140 ನಿಮಿಷ ಮುಂದೂಡಲಾಗಿದೆ.
- 16239: ಚಿಕ್ಕಮಗಳೂರು–ಯಶವಂತಪುರ ಎಕ್ಸ್ಪ್ರೆಸ್: ಅಕ್ಟೋಬರ್ 28ರಂದು ನಿರ್ಗಮನ ಸಮಯವನ್ನು 60 ನಿಮಿಷ ಮುಂದೂಡಲಾಗಿದೆ.
ರೈಲು ಸಂಚಾರದಲ್ಲಿ ಬದಲಾವಣೆಗಳಿರುವುದರಿಂದ ಪ್ರಯಾಣಿಕರು ಪ್ರಯಾಣ ಆರಂಭಿಸುವ ಮೊದಲು ತಮ್ಮ ರೈಲಿನ ಸಂಖ್ಯೆ, ಸಂಚರಿಸುವ ದಿನಾಂಕ, ಪರ್ಯಾಯ ಮಾರ್ಗ ಹಾಗೂ ನಿಲುಗಡೆಗಳ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R