
ಬಳ್ಳಾರಿ, 22 ಅಕ್ಟೋಬರ್ (ಹಿ.ಸ.)
ಬಳ್ಳಾರಿ ಜಿಲ್ಲಾ ಅಥ್ಲೆಟಿಕ್ಸ್ ಸಂಘವು 14 ವರ್ಷದೊಳಗಿನ ಮತ್ತು 16 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಜಿಲ್ಲಾ ಮಟ್ಟದ ಆಯ್ಕೆ ಟ್ರಯಲ್ಸ್ ಅನ್ನು ಅಕ್ಟೋಬರ್ 25 ಭಾನುವಾರ ಬೆಳಿಗ್ಗೆ 9:00 ಗಂಟೆಗೆ ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದೆ.
ಬಳ್ಳಾರಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ನ ಡಾ. ಎಸ್. ರವಿಶಂಕರ್ ಅವರು ಸುದ್ದಿಗಾರರಿಗೆ ಗುರುವಾರ ಮಾಹಿತಿ ನೀಡಿದ್ದು, ಹೈದರಾಬಾದ್ನ ವೋಕ್ಸೆನ್ ವಿಶ್ವವಿದ್ಯಾಲಯದಲ್ಲಿ ನವೆಂಬರ್ 14 ರಿಂದ 16 ರವರೆಗೆ ನಡೆಯಲಿರುವ 20ನೇ ರಾಷ್ಟ್ರೀಯ ಅಂತರ ಜಿಲ್ಲಾ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸಲು ಈ ಆಯ್ಕೆ ನಡೆಯಲಿದೆ ಎಂದರು.
ಆಯ್ಕೆಯಲ್ಲಿ 13 ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ರಾಷ್ಟ್ರಮಟ್ಟಕ್ಕೆ ಕಳುಹಿಸಲಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಬಳ್ಳಾರಿ ಜಿಲ್ಲೆ ಅಥ್ಲೆಟಿಕ್ ಅಸೋಸಿಯೇಷನ್ ಪ್ರಾಯೋಜಕತ್ವ ಪಡೆಯಲಿದೆ.
14 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರು ಆಯ್ಕೆ ಟ್ರಯಲ್ಸ್ನಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ. ಭಾಗವಹಿಸುವವರು ಸ್ಟ್ರಿಂಟಿಂಗ್, ಲಾಂಗ್ ಜಂಪ್, ಹೈ ಜಂಪ್, 600 ಮೀಟರ್ ಓಟ ಮತ್ತು ಬ್ಯಾಕ್ ಥ್ರೋಗಳ ಟ್ರಯಥ್ಲಾನ್ ಗುಂಪುಗಳಲ್ಲಿ ಸ್ಪರ್ಧಿಸಲು ಅವಕಾಶ.
16 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರು ವೈಯಕ್ತಿಕ ಸ್ಪರ್ಧೆಗಳು 60 ಮೀಟರ್ ಸ್ಟ್ರಿಂಟ್, 600 ಮೀಟರ್ ಓಟ, ಲಾಂಗ್ ಜಂಪ್, ಶಾಟ್ ಪುಟ್ ಮತ್ತು ಜಾವೆಲಿನ್ ಥ್ರೋನಲ್ಲಿ
ಸ್ಪರ್ಧಿಸಲು ಅವಕಾಶ.
14 ವರ್ಷದೊಳಗಿನವರ ವಿಭಾಗಕ್ಕೆ 17-112012 ರಿಂದ 16-11-2014 ರ ನಡುವೆ ಜನಿಸಿದವರು. 16 ವರ್ಷದೊಳಗಿನ ವಿಭಾಗಕ್ಕೆ 17-11-2010 ರಿಂದ 16-11-2012 ರ ನಡುವೆ ಜನಿಸಿದವರು ಸ್ಪರ್ಧೆಗೆ ಅರ್ಹರು.
ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರು `ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ'ದ ಯುಐಡಿ ಸಂಖ್ಯೆಯನ್ನು ಹೊಂದಿರುವುದು ಕಡ್ಢಾಯ. ಯುಐಡಿ ಇಲ್ಲದವರು `ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ'ದ ಎಎಫ್ಐ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ.
ಜಿಲ್ಲಾ ಆಯ್ಕೆ ಟ್ರಯಲ್ಸ್ - 20 ನೇ ರಾಷ್ಟ್ರೀಯ ಅಂತರ-ಜಿಲ್ಲಾ ಜೂನಿಯರ್ ಅಥ್ಲೆಟಿಕ್ಸ್ ಮೀಟ್ ದಿನಾಂಕ: ಭಾನುವಾರ, 25 ಅಕ್ಟೋಬರ್ 2026. ಸ್ಥಳ: ಜಿಲ್ಲಾ ಕ್ರೀಡಾಂಗಣ, ಬಳ್ಳಾರಿ. ನೋಂದಣಿ: ಬೆಳಿಗ್ಗೆ 7:30 ರಿಂದ ಬೆಳಿಗ್ಗೆ 8:30 ರವರೆಗೆ. ಸ್ಪರ್ಧೆಗಳು ಬೆಳಿಗ್ಗೆ 9:00 ರಿಂದ ಪ್ರಾರಂಭ.
ವಿವರಗಳಿಗಾಗಿ, ಮೊಬೈಲ್ ಸಂಖ್ಯೆ : 9742913101 / 9187208791 ಗೆ ಸಂಪರ್ಕ ಮಾಡಲು ಮನವಿ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್