ಪ್ರಲ್ಹಾದ್ ಜೋಶಿ ನೇತೃತ್ವದ ಸಭೆ ಯಶಸ್ವಿ: ಕಬ್ಬು ಬೆಳೆಗಾರರ ಹೋರಾಟ ತಾತ್ಕಾಲಿಕ ಸ್ಥಗಿತ
ಹುಬ್ಬಳ್ಳಿ, 19 ಅಕ್ಟೋಬರ್ (ಹಿ.ಸ.): ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಕಬ್ಬು ಬೆಳೆಗಾರರೊಂದಿಗೆ ಭಾನುವಾರ ಮಧ್ಯರಾತ್ರಿ ನಡೆದ ಮಹತ್ವದ ಸಭೆ ಯಶಸ್ವಿಯಾಗಿದ್ದು, ರೈತರು ತಾತ್ಕಾಲಿಕವಾಗಿ ಹೋರಾಟವನ್ನು ಸ್ಥಗಿತಗೊಳಿಸಲು ಒಪ್ಪಿದ್ದಾರೆ. ರೈತ ಮುಖಂಡ ಹಾಗೂ ಹೋರಾಟದ ನೇತೃತ್ವ
ರೈತ ಮುಖಂಡರ ಜೊತೆ ಪ್ರಹ್ಲಾದ ಜೋಶಿ ಸಭೆ


ಹುಬ್ಬಳ್ಳಿ, 19 ಅಕ್ಟೋಬರ್ (ಹಿ.ಸ.):

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಕಬ್ಬು ಬೆಳೆಗಾರರೊಂದಿಗೆ ಭಾನುವಾರ ಮಧ್ಯರಾತ್ರಿ ನಡೆದ ಮಹತ್ವದ ಸಭೆ ಯಶಸ್ವಿಯಾಗಿದ್ದು, ರೈತರು ತಾತ್ಕಾಲಿಕವಾಗಿ ಹೋರಾಟವನ್ನು ಸ್ಥಗಿತಗೊಳಿಸಲು ಒಪ್ಪಿದ್ದಾರೆ.

ರೈತ ಮುಖಂಡ ಹಾಗೂ ಹೋರಾಟದ ನೇತೃತ್ವ ವಹಿಸಿರುವ ಚೂನಪ್ಪ ಪೂಜಾರಿ, ಶಶಿಕಾಂತ್ ಗುರೂಜಿ ಸೇರಿದಂತೆ ಎಂಟು ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಸಂಸದ ಜಗದೀಶ್ ಶೆಟ್ಟರ್, ಶಾಸಕ ಮಹೇಶ್ ಟೆಂಗಿನಕಾಯಿ, ಸಿ.ಸಿ. ಪಾಟೀಲ್, ಧಾರವಾಡ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯ ಆರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರೈತ ಮುಖಂಡರ ಆರೋಗ್ಯ ವಿಚಾರಿಸಿ, ಅವರ ಬೇಡಿಕೆಗಳನ್ನು ಆಲಿಸಿದರು. ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ವಾಣಿಜ್ಯ ಸಕ್ಕರೆ ಮಾರಾಟ ಹಾಗೂ ಎಥೆನಾಲ್ ದರವನ್ನು ಪ್ರತಿ ಲೀಟರ್‌ಗೆ ₹100ಕ್ಕೆ ನಿಗದಿಪಡಿಸುವಂತೆ ರೈತರು ಒತ್ತಾಯಿಸಿದರು.

ರೈತರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ಈ ಕುರಿತು ಸಮಿತಿ ರಚನೆ, ಸಮೀಕ್ಷೆ ಹಾಗೂ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ವರದಿ ಪಡೆದು ನಿರ್ಧಾರ ಕೈಗೊಳ್ಳಬೇಕಿರುವುದರಿಂದ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

ಕೇಂದ್ರ ಸಚಿವರ ಮನವಿಗೆ ಮಾನವೀಯ ದೃಷ್ಟಿಯಿಂದ ಸ್ಪಂದಿಸಿದ ರೈತ ಮುಖಂಡರು, ತಾತ್ಕಾಲಿಕವಾಗಿ ಹೋರಾಟವನ್ನು ಸ್ಥಗಿತಗೊಳಿಸಲು ಒಪ್ಪಿಗೆ ಸೂಚಿಸಿದರು. ಆದರೆ, ನಿಗದಿತ ಅವಧಿಯಲ್ಲಿ ಬೇಡಿಕೆಗಳು ಈಡೇರದಿದ್ದರೆ ಮತ್ತೆ ಹೋರಾಟ ಆರಂಭಿಸುವುದಾಗಿ ಹೋರಾಟದ ನೇತೃತ್ವ ವಹಿಸಿರುವ ಚೂನಪ್ಪ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande