ಬಳ್ಳಾರಿ: ಜಪ್ತಿ ಮಾಡಲಾದ 1,265 ಕ್ವಿಂಟಾಲ್ ಪಡಿತರ ಅಕ್ಕಿ ನವೆಂಬರ್ 6 ರಂದು ಹರಾಜು
ಬಳ್ಳಾರಿ, 17 ಅಕ್ಟೋಬರ್ (ಹಿ.ಸ.) ಅಗತ್ಯ ವಸ್ತುಗಳ ಕಾಯ್ದೆ (ಇಸಿ ಕಾಯ್ದೆ-1955) ಅಡಿಯಲ್ಲಿ ಬಳ್ಳಾರಿ ಅನೌಪಚಾರಿಕ ಪಡಿತರ ಪ್ರದೇಶದಲ್ಲಿ ಜಪ್ತಿ ಮಾಡಲಾದ ಒಟ್ಟು 1,265.60 ಕ್ವಿಂಟಾಲ್ ಅಕ್ಕಿಯನ್ನು ನವೆಂಬರ್ 6 ರಂದು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಅನೌಪಚಾರಿಕ ಪಡಿತರ ಪ್ರದೇಶದ ಆಹ
ಬಳ್ಳಾರಿ: ಜಪ್ತಿ ಮಾಡಲಾದ 1,265 ಕ್ವಿಂಟಾಲ್ ಪಡಿತರ ಅಕ್ಕಿ ನವೆಂಬರ್ 6 ರಂದು ಹರಾಜು


ಬಳ್ಳಾರಿ, 17 ಅಕ್ಟೋಬರ್ (ಹಿ.ಸ.)

ಅಗತ್ಯ ವಸ್ತುಗಳ ಕಾಯ್ದೆ (ಇಸಿ ಕಾಯ್ದೆ-1955) ಅಡಿಯಲ್ಲಿ ಬಳ್ಳಾರಿ ಅನೌಪಚಾರಿಕ ಪಡಿತರ ಪ್ರದೇಶದಲ್ಲಿ ಜಪ್ತಿ ಮಾಡಲಾದ ಒಟ್ಟು 1,265.60 ಕ್ವಿಂಟಾಲ್ ಅಕ್ಕಿಯನ್ನು ನವೆಂಬರ್ 6 ರಂದು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಅನೌಪಚಾರಿಕ ಪಡಿತರ ಪ್ರದೇಶದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹರಾಜು ಪ್ರಕ್ರಿಯೆಯು ನವೆಂಬರ್ 6 ರಂದು ಬೆಳಿಗ್ಗೆ 11:30 ಗಂಟೆಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಎಪಿಎಂಸಿ ನಗರ ಗೋದಾಮು, ಬಳ್ಳಾರಿ ಇಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವತಿಯಿಂದ ಈ ಹರಾಜು ಪ್ರಕ್ರಿಯೆ ನಡೆಯಲಿದೆ.

ಹರಾಜಿನ ವಿವರ:

*ಅಕ್ಕಿಯ ವಿವರ:*

2025-26ನೇ ಸಾಲಿನ 19 ಪ್ರಕರಣಗಳಲ್ಲಿ ಜಪ್ತಿ ಮಾಡಲಾದ 980.90 ಕ್ವಿಂಟಾಲ್ ಅಕ್ಕಿ. 2021-24ರ ಸಾಲಿನ 6 ಪ್ರಕರಣಗಳಲ್ಲಿ ಜಪ್ತಿ ಮಾಡಲಾದ 284.70 ಕ್ವಿಂಟಾಲ್ ಅಕ್ಕಿ.

ಪ್ರಸ್ತುತ ಈ ಅಕ್ಕಿಯನ್ನು ನಗರದ ಎಪಿಎಂಸಿ ಆವರಣದಲ್ಲಿರುವ ಕೆ.ಎಫ್.ಸಿ.ಎಸ್.ಸಿ ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದು, ಎರಡೂ ದಾಸ್ತಾನುಗಳನ್ನು ‘ಹೇಗಿದೆಯೋ ಹಾಗೆ' ಎಂಬ ಆಧಾರದ ಮೇಲೆ ಪ್ರತ್ಯೇಕವಾಗಿ ಬಹಿರಂಗ ಹರಾಜು ಹಾಕಲಾಗುವುದು. ಆಸಕ್ತ ಬಿಡ್ಡುದಾರರು ನಿಗದಿತ ಷರತ್ತುಗಳೊಂದಿಗೆ ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande