ಆರ್ವೈಎಂಇಸಿ : ನಾಲ್ವರಿಗೆ ಡಾಕ್ಟರೇಟ್ ಪದವಿ
ಬಳ್ಳಾರಿ, 17 ಅಕ್ಟೋಬರ್ (ಹಿ.ಸ.) ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ನಾಲ್ವರು ಅಧ್ಯಾಪಕರುಗಳಿಗೆ ವಿವಿಧ ವಿಶ್ವವಿದ್ಯಾಲಯಗಳು ಡಾಕ್ಟರೇಟ್ ಪದವಿಯನ್ನು ಘೋಷಣೆ ಮಾಡಿವೆ. ಡಾ ಲಕ್ಷ್ಮಣ ನಾಯಕ್ ಟಿ.ಕೆ. ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾ
ಆರ್ವೈಎಂಇಸಿ : ನಾಲ್ವರಿಗೆ ಡಾಕ್ಟರೇಟ್ ಪದವಿ


ಆರ್ವೈಎಂಇಸಿ : ನಾಲ್ವರಿಗೆ ಡಾಕ್ಟರೇಟ್ ಪದವಿ


ಆರ್ವೈಎಂಇಸಿ : ನಾಲ್ವರಿಗೆ ಡಾಕ್ಟರೇಟ್ ಪದವಿ


ಆರ್ವೈಎಂಇಸಿ : ನಾಲ್ವರಿಗೆ ಡಾಕ್ಟರೇಟ್ ಪದವಿ


ಬಳ್ಳಾರಿ, 17 ಅಕ್ಟೋಬರ್ (ಹಿ.ಸ.)

ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ನಾಲ್ವರು ಅಧ್ಯಾಪಕರುಗಳಿಗೆ ವಿವಿಧ ವಿಶ್ವವಿದ್ಯಾಲಯಗಳು ಡಾಕ್ಟರೇಟ್ ಪದವಿಯನ್ನು ಘೋಷಣೆ ಮಾಡಿವೆ.

ಡಾ ಲಕ್ಷ್ಮಣ ನಾಯಕ್ ಟಿ.ಕೆ. ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ವಿಶಾಲಗೌಡ ಪಾಟೀಲ ಎಸ್. ಮತ್ತು ಡಾ. ಜೈರಾಜ ಆರ್. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ `ಅನಾಲಿಸಿಸ್ ಆಫ್ ಕಾಂಪೋಸಿಟ್ ಬಾಂಡೆಡ್ ಜಾಯಿಂಟ್ಸ್ ಮೇಡ್ ಆಫ್ ಸಿಂಗಲ್ ಆಂಡ್ ಡ್ಯುಯಲ್ ಅಡ್ಹೆಸಿವ್ಸ್’ ವಿಷಯದ ಪ್ರಬಂಧಕ್ಕೆ ಡಾಕ್ಟರೇಟ್ ಘೋಷಣೆ ಮಾಡಿದೆ.

ಡಾ. ಬರ್ಗಿ ವೀರೇಶಗೌಡ ಅವರು ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ವಿಭಾಗದಲ್ಲಿ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಗಿರೀಶ ಎಚ್ ಮಾರ್ಗದರ್ಶನದಲ್ಲಿ `ಎ ನಾವೆಲ್ ಅಪೆÇ್ರೀಚ್ ಫಾರ್ ದ ರೋಬಸ್ಟ್ ರೆಕಗ್ನಿಷನ್ ಆಫ್ ಪರ್ಸನ್ ಯೂಸಿಂಗ್ ದ ಗೇಟ್ ಫೀಚರ್ಸ್ ಅಂಡರ್ ಮಲ್ಟಿವ್ಯೂ ಎನ್ವಿರಾನ್ಮೆಂಟ್ಸ್’ ವಿಷಯದ ಕುರಿತು ಮಂಡಿಸಿದ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿಎಚ್ಡಿಯನ್ನು ಘೋಷಣೆ ಮಾಡಿದೆ.

ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ವಿಭಾಗದ ಡಾ. ಶೀಲಾ ಬಿ.ಪಿ. ಅವರು ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಗಿರೀಶ ಎಚ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ `ಆನ್ ಎಕ್ಸ್ಪ್ಲೇನಬಲ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಫ್ರೇಮ್ವರ್ಕ್ ಫಾರ್ ಡೀಪ್ ಲನಿರ್ಂಗ್ ಬೇಸ್ಡ್ ಕ್ಲಾಸಿಫಿಕೇಶನ್ ಟು ಜನರೇಟ್ ಟೆಕ್ಸ್ಚುವಲ್ ಎಕ್ಸ್ಪ್ಲನೇಷನ್ಸ್ ಆನ್ ಪ್ರಿಡಿಕ್ಟೆಡ್ ಇಮೇಜಸ್’ ವಿಷಯದ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಘೋಷಣೆ ಮಾಡಿದೆ.

ಡಾ. ಹಿರೇಮಠ ವಿ.ಎಂ.ಆರ್. ಅವರು ಮ್ಯಾನೇಜ್ಮೆಂಟ್ ಸ್ಟಡೀಸ್ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕರಾದ ಡಾ. ಗಣೇಶ್ ಎಚ್.ಆರ್. ಅವರ ಮಾರ್ಗದರ್ಶನದಲ್ಲಿ `ಎಕ್ಸ್ಪ್ಲೋರಿಂಗ್ ದ ಕೀ ಆಂಟಿಸಿಡೆಂಟ್ಸ್ ಆಫ್ ಬರ್ನ್ಔಟ್ ವಿಮೆನ್ ಪೊಲೀಸ್ : ಆನ್ ಇಂಟಪ್ರ್ರಿಟಿವ್ ಸ್ಟ್ರಕ್ಚರಲ್ ಮಾಡೆಲಿಂಗ್ ಅಪೆÇ್ರೀಚ್’ ವಿಷಯದ ಕುರಿತು ಮಂಡಿಸಿದ ಪ್ರಬಂಧಕ್ಕೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ಘೋಷಣೆ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande