ಕರ್ನಾಟಕ ಟಿಪ್ಪು ಸೆಕ್ಯುಲಾರ್ ಸೇನಾ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಕರ್ನಾಟಕ ಟಿಪ್ಪು ಸೆಕ್ಯುಲಾರ್ ಸೇನಾ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಕರ್ನಾಟಕ ಟಿಪ್ಪು ಸೆಕ್ಯುಲಾರ್ ಸೇನಾ ಡಿಸಿ ಕಚೇರಿ ಮುಂದೆ ಪ್ರತಿಭಟನೆ


ಕೋಲಾರ, ೧೭ ಅಕ್ಟೋಬರ್ (ಹಿ.ಸ) : ನಗರದ ಅಮ್ಮವಾರಿಪೇಟೆಯ ಟಿಪ್ಪು ಸುಲ್ತಾನ್ ರಸ್ತೆಗೆ ಅಂಬೇಡ್ಕರ್, ಜಗಜೀವನ್ ರಾಮ್ ಹಾಗೂ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಗಳುಳ್ಳ ಸ್ವಾಗತ ಕಮಾನು ನಿರ್ಮಿಸಬೇಕು, ನಗರದ ವಿವಿಧ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿಸಿ ಮೇಲ್ದರ್ಜೆಗೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಟಿಪ್ಪು ಸೆಕ್ಯುಲಾರ್ ಸೇನಾ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಕರ್ನಾಟಕ ಟಿಪ್ಪು ಸೆಕ್ಯುಲಾರ್ ಸೇನಾ ಸಂಸ್ಥಾಪಕ ಟೈಗರ್ ಸೈಯದ್ ಆಸಿಫ್ವುಲ್ಲಾ ಮಾತನಾಡಿ ನಗರದ ಬಂಬೂ ಬಜಾರ್ ರಸ್ತೆಗೆ ನಗರಸಭೆ ವತಿಯಿಂದ ಟಿಪ್ಪು ಸುಲ್ತಾನ್ ರಸ್ತೆಯೆಂದು ನಾಮಕರಣ ಮಾಡಲಾಗಿದೆ. ಈ ರಸ್ತೆಗೆ ಅಂಬೇಡ್ಕರ್, ಜಗಜೀವನ್ ರಾಮ್ ಹಾಗೂ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಗಳುಳ್ಳ ಸ್ವಾಗತ ಕಮಾನು ನಿರ್ಮಿಸಬೇಕು. ಚರಂಡಿ, ಒಳಚರಂಡಿ ವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ತೇರಹಳ್ಳಿ ಬೆಟ್ಟದ ರಸ್ತೆಯನ್ನು ಅಗಲೀಕರಣ ಮಾಡಬೇಕು. ಬೂದಿಕೋಟೆಯಲ್ಲಿ ಟಿಪ್ಪು ಸುಲ್ತಾನ್ ಅವರ ತಂದೆ ಹೈದರಾಲಿ ಅವರ ಹುಟ್ಟಿದ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕು. ಔಷಧೀಯ ಅಂಗಡಿಗಳಲ್ಲಿ ನಶೆ ಹೊಂದಿರುವ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು ಅದಕ್ಕೆ ಕಡಿವಾಣ ಹಾಕಬೇಕು. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಗರಸಭೆ ಅಧಿಕಾರಿಗಳ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಸುತ್ತಮುತ್ತಲಿನ ಗ್ರಾಮಗಳನ್ನು ಒಟ್ಟಿಗೆ ಕೊಡಿಸಿಕೊಂಡು ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಪರಿವರ್ತನೆ ಕೈಗೊಳ್ಳಬೇಕು. ಇದರಿಂದ ಸರ್ಕಾರಕ್ಕೆ ಆದಾಯ ಬರುವ ಜೊತೆಗೆ ಅಭಿವೃದ್ಧಿ ಪಡಿಸಿದಂತೆ ಹಾಗೂ ನಗರದ ಅಂದವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಟಿಪ್ಪು ಸೆಕ್ಯುಲಾರ್ ಸೇನಾಯ ಸಲಹೆಗಾರ ಮೆಹಬೂಬ್, ತಾಲೂಕು ಅಧ್ಯಕ್ಷ ಸಲ್ಮಾನ್, ಮಹಿಳಾ ಅಧ್ಯಕ್ಷಕಿ ಸುಲ್ತಾನ್, ಶಬ್ರೀನ್, ಪಾತಿಮಾ, ಜಮೀಲ್, ಅಮ್ಜದ್, ಹಾದೀಲ್, ಮುಸ್ಕಾನ್, ಶುಹೇಬ್, ಅಸತ್ ಉಲ್ಲಾ ಮತ್ತಿತರರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande