ಬಳ್ಳಾರಿ: ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಸ್ಪರ್ಧೆ: ನೋಂದಣಿಗೆ ಅ. 30 ಕೊನೆ
ಬಳ್ಳಾರಿ, 17 ಅಕ್ಟೋಬರ್ (ಹಿ.ಸ.) ರಾಜ್ಯ ಬಾಲಭವನ ಸೊಸೈಟಿ, ಬೆಂಗಳೂರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಳ್ಳಾರಿ ವತಿಯಿಂದ 2026-27ನೇ ಸಾಲಿನ ಜಿಲ್ಲಾ ಮಟ್ಟದ ‘ಮಕ್ಕಳ ದಿನಾಚರಣೆ’ ಅಂಗವಾಗಿ ಮಕ್ಕಳಲ್ಲಿರುವ ಸೃಜನಶೀಲ ಹಾಗೂ ಕ್ರಿಯಾತ್ಮಕ ಪ್ರತಿಭೆಗಳನ್ನು ಗುರುತಿಸಲು ವಿವಿಧ ಸ್ಪರ್ಧೆಗಳನ್
ಬಳ್ಳಾರಿ: ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಸ್ಪರ್ಧೆ: ನೋಂದಣಿಗೆ ಅ. 30 ಕೊನೆ


ಬಳ್ಳಾರಿ, 17 ಅಕ್ಟೋಬರ್ (ಹಿ.ಸ.)

ರಾಜ್ಯ ಬಾಲಭವನ ಸೊಸೈಟಿ, ಬೆಂಗಳೂರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಳ್ಳಾರಿ ವತಿಯಿಂದ 2026-27ನೇ ಸಾಲಿನ ಜಿಲ್ಲಾ ಮಟ್ಟದ ‘ಮಕ್ಕಳ ದಿನಾಚರಣೆ’ ಅಂಗವಾಗಿ ಮಕ್ಕಳಲ್ಲಿರುವ ಸೃಜನಶೀಲ ಹಾಗೂ ಕ್ರಿಯಾತ್ಮಕ ಪ್ರತಿಭೆಗಳನ್ನು ಗುರುತಿಸಲು ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಸ್ಪರ್ಧೆಗಳಲ್ಲಿ 9 ರಿಂದ 16 ವರ್ಷದೊಳಗಿನ ಆಸಕ್ತ ಮಕ್ಕಳು ಭಾಗವಹಿಸಬಹುದಾಗಿದ್ದು, ಸರ್ಕಾರಿ ಶಾಲೆಗಳ ಮಕ್ಕಳಿಗೆ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹಾಗೂ ಸುಧಾರಣಾ ಸಂಸ್ಥೆಗಳ ಬಾಲಕ/ಬಾಲಕಿಯರ ಬಾಲಮಂದಿರದ ಮಕ್ಕಳಿಗೆ ಆದ್ಯತೆ ನೀಡಲಾಗುವುದು.

*ಸ್ಪರ್ಧೆಗಳು:*

ಸೃಜನಶೀಲ ಕಲೆ: ಚಿತ್ರಕಲೆ, ಕರಕುಶಲ ಕಲೆ ಹಾಗೂ ಜೇಡಿಮಣ್ಣಿನ ಕಲೆ (ಮಕ್ಕಳು ಈ ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು).

ಸೃಜನಶೀಲ ಬರವಣಿಗೆ: ಕಥೆ, ಕವನ ಮತ್ತು ಪ್ರಬಂಧ ಬರೆಯುವುದು (ಈ ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು).

ಸೃಜನಶೀಲ ಪ್ರದರ್ಶನ ಕಲೆ: ಶಾಸ್ತಿಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಯೋಗನೃತ್ಯ, ಸುಗಮ ಸಂಗೀತ ಮತ್ತು ಏಕಪಾತ್ರಾಭಿನಯ (ಇವುಗಳಲ್ಲಿ ಯಾವುದಾದರೂ ಒಂದರಲ್ಲಿ ಮಾತ್ರ ಪ್ರದರ್ಶನ ನೀಡಲು ಅವಕಾಶ).

ವಿಜ್ಞಾನದಲ್ಲಿ ನೂತನ ಆವಿಷ್ಕಾರ: ವಿಜ್ಞಾನಕ್ಕೆ ಸಂಬ0ಧಿಸಿದ ಯಾವುದಾದರೂ ಒಂದು ವಿಷಯದ ಬಗ್ಗೆ ಮಾದರಿ ಪ್ರದರ್ಶನ ಹಾಗೂ ತೀರ್ಪುಗಾರರ ಪ್ರಶ್ನೆಗಳಿಗೆ ಉತ್ತರಿಸುವುದು.

ಅಂಗವಿಕಲ/ಬುಡಕಟ್ಟು ಪ್ರದೇಶದ ಮಕ್ಕಳಿಗೆ: ಮೇಲಿನ ಯಾವುದೇ ಒಂದು ಸ್ಪರ್ಧೆಯಲ್ಲಿ ಪ್ರತಿಭಾವಂತ ಮಕ್ಕಳು ಭಾಗವಹಿಸಬಹುದು.

ಆಸಕ್ತರು ತಮ್ಮ ಹೆಸರುಗಳನ್ನು ಅಕ್ಟೋಬರ್ 30ರಂದು ಸಂಜೆ 5 ಗಂಟೆಯೊಳಗೆ ಬಳ್ಳಾರಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿಸಿಕೊ0ಡ ಮಕ್ಕಳಿಗೆ ಮಾತ್ರ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿದ್ದು, ಮಕ್ಕಳ ದಿನಾಚರಣೆ ಹಾಗೂ ಸ್ಪರ್ಧೆಗಳು ನಡೆಯುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎಸ್.ಪಿ. ಸರ್ಕಲ್ ಹತ್ತಿರ, ಬಳ್ಳಾರಿ. ದೂರವಾಣಿ ಸಂಖ್ಯೆ: 08392-266219, 9741965198 ನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande