ಕಾಂಗ್ರೆಸನ್ನು ವಿಸರ್ಜನೆ ಮಾಡಿ ಸಿಜೆಪಿಯೊಂದಿಗೆ ವಿಲೀನ ಮಾಡಿದರೆ ಒಳ್ಳೆಯದು:ಬಸವರಾಜ ಬೊಮ್ಮಾಯಿ
ಹಾವೇರಿ, 17 ಅಕ್ಟೋಬರ್ (ಹಿ.ಸ.): ಕಾಂಗ್ರೆಸ್ ಮತ್ತು ಸಿಜೆಪಿ ಎರಡೂ ಒಂದೆ ಎನ್ನುತ್ತಾರೆ. ಕಾಂಗ್ರೆಸ್ ಆ ಮಟ್ಟಕ್ಕೆ ಇಳಿದಿದೆ. ಕಾಂಗ್ರೆಸನ್ನು ವಿಸರ್ಜನೆ ಮಾಡಿ ಸಿಜೆಪಿಯೊಳಗೆ ವಿಲೀನ ಮಾಡಿದರೆ ಒಳ್ಳೆಯದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ಹಾವೇರಿ ಜಿಲ್ಲೆಯ ಬ್
ಬೊಮ್ಮಾಯಿ


ಹಾವೇರಿ, 17 ಅಕ್ಟೋಬರ್ (ಹಿ.ಸ.):

ಕಾಂಗ್ರೆಸ್ ಮತ್ತು ಸಿಜೆಪಿ ಎರಡೂ ಒಂದೆ ಎನ್ನುತ್ತಾರೆ. ಕಾಂಗ್ರೆಸ್ ಆ ಮಟ್ಟಕ್ಕೆ ಇಳಿದಿದೆ. ಕಾಂಗ್ರೆಸನ್ನು ವಿಸರ್ಜನೆ ಮಾಡಿ ಸಿಜೆಪಿಯೊಳಗೆ ವಿಲೀನ ಮಾಡಿದರೆ ಒಳ್ಳೆಯದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ನಗರದ ಶ್ರೀ ಸಿದ್ದೇಶ್ವರ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿಯ ಪಶ್ಚಿಮ ಪದವೀಧರ ಮತಕ್ಷೇತ್ರದ ಅಭ್ಯರ್ಥಿಯಾದ ಎಸ್.ವಿ.ಸಂಕನೂರ ಪರ ಮತಯಾಚನೆಯನ್ನು ಮಾಡಿದರು. ಸಂಕನೂರು ಅವರು ಆದರ್ಶ ಶಿಕ್ಷಕರಾಗಿ ಮೂವತ್ತು ವರ್ಷ ಸೇವೆ ಮಾಡಿದ್ದಾರೆ. ಅದರ ಜೊತೆ ಪಿಯುಸಿ ಪ್ರಾಧ್ಯಾಪಕರ ಸಂಘ ಕಟ್ಟಿ ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಪದವಿಧರರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಸೈನ್ಸ್ ಟೀಚರ್ ಸಂಘ ಕಟ್ಟಿ ಉತ್ತಮ ಕೆಲಸ ಮಾಡಿದ್ದಾರೆ. ಇನ್ನೊಂದು ಕಾರಣ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅತ್ಯಂತ ಭ್ರಷ್ಟ, ನಿಷ್ಟ್ರಯೋಜಕ ಸರ್ಕಾರ ಇದೆ. ಬರಗಾಲ ಬಂದಿದೆ. ಈಗಲೇ ಕುಡಿಯುವ ನೀರಿನ ಸಮಸ್ಯೆ ಇದೆ. ಜನರ ಬದುಕು ಬಹಳ ಕಷ್ಟವಾಗಿದೆ ರೈತರು ಎರಡು ಬಾರಿ ಬಿತ್ತಿ ನಷ್ಟವಾಗಿದೆ. ಹಸಿ ಮತ್ತು ಒಣ ಬರಗಾಲ ಇದೆ. ಬರ ನಿರ್ವಹಿಸಲು ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ನಮ್ಮ ಅವಧಿಯಲ್ಲಿ ಆನೂರು ಉಡುಪನಳ್ಳಿ ಏತ ನೀರಾವರಿ ಯೋಜನೆಗೆ ಚಾಲನೆ ಕೊಟ್ಟಿದ್ದೇವು. ಇವರು ಅದನ್ನು ಪೂರ್ಣ ಮಾಡಿದ್ದರೆ ಎಷ್ಟೊ ಕೆರೆಗಳಿಗೆ ನೀರು ಹರಿಸಬಹುದಿತ್ತು. ದನಗಳಿಗೆ ಕುಡಿಯಲು ನೀರಿಲ್ಲ. ಯುವಕರಿಗೆ ಕೆಲಸ ಇಲ್ಲ. ಇಂತಹ ಪರಿಸ್ಥಿತಿ ಇದ್ದರೂ ಯಾವ ಮಂತ್ರಿಯೂ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿದರು.

*ಎರಡು ಪಟ್ಟು ಪರಿಹಾರ*

ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ಕೇಂದ್ರದ ಎರಡು ಪಟ್ಟು ಪರಿಹಾರ ನೀಡಿದ್ದೇವು. ಒಣ ಬೇಸಾಯಕ್ಕೆ 6500 ರೂ. ಪರಿಹಾರ ನೀಡಿತ್ತು. ನಾವು 13 ಸಾವಿರ ನೀಡಿದೆವು. ನೀರಾವರಿಗೆ 25 ಸಾವಿರ, ತೋಟಗಾರಿಕೆಗೆ 28 ಸಾವಿರ ರೂ. ಪರಿಹಾರ ನೀಡಿದವು. ಸುಮರು 7 ಲಕ್ಷ ರೈತರಿಗೆ 17 ಕೋಟಿ ರೂ.ಗಳನ್ನು ಒಂದೇ ತಿಂಗಳಲ್ಲಿ ಬಿಡುಗಡೆ ಮಾಡಿದ್ದೇವು. ಈಗಿನ ಸರ್ಕಾರ ಒಂದು ಕುಟುಂಬಕ್ಕೆ 2500 ರೂ. ಕೊಡುವುದಾಗಿ ಹೇಳಿತ್ತು ಇನ್ನೂ ಬಂದಿಲ್ಲ ಎಂದರು.

*ಅರಾಜಕತೆ ಸೃಷ್ಟಿ*

ಕಬ್ಬಿನ ದರ ಕಾರ್ಖಾನೆಗಳು ಮತ್ತು ರಾಜ್ಯ ಸರ್ಕಾರ ನಿಗದಿ ಮಾಡಬೇಕು. ಸಕ್ಕರೆ ದರವನ್ನು ಕೇಂದ್ರ ಸರ್ಕಾರ ನಿಗದಿ ಮಾಡಬೇಕು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಚಿವ ಶಿವರಾಜ್ ಸಿಂಗ್ ನೇತೃತ್ವದಲ್ಲಿ ಸಮಿತಿ ಮಾಡಿದೆ. ರಾಜ್ಯ ಸರ್ಕಾರ ತನ್ನ ಕರ್ತವ್ಯ ಮರೆತಿದೆ. ರೈತರ ಪಾಲಿಗೆ ಇದ್ದೂ ಸತ್ತಂತಾಗಿದೆ. ಇಲ್ಲಿ ಆಡಳಿತ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಆರಾಜಕತೆ ಸೃಷ್ಟಿಸುತ್ತಿದ್ದಾರೆ. ಅಲ್ಲೊಬ್ಬ ದೀಡ್ ಪಂಡಿತ್ ನಾಯಕ ಇದ್ದಾನೆ. ಅಪರಾಧಿಯಾಗಿರುವವರು ಸುಪ್ರೀಂ ಕೋರ್ಟ್‌ಗೆ ಹೋಗಿ ಮನವಿ ಕೊಡುತ್ತಾರೆ. ಇದನ್ನೇ ಅರಾಜಕತೆ ಎನ್ನುತ್ತಾರೆ. ಕಾಂಗ್ರೆಸ್ ಮತ್ತು ಸಿಜೆಪಿ ಎರಡೂ ಒಂದೆ ಎನ್ನುತ್ತಾರೆ. ಕಾಂಗ್ರೆಸ್ ಆ ಮಟ್ಟಕ್ಕೆ ಇಳಿದಿದೆ. ಕಾಂಗ್ರೆಸನ್ನು ವಿಸರ್ಜನೆ ಮಾಡಿ ಸಿಜೆಪಿಯೊಳಗೆ ವಿಲೀನ ಮಾಡಿದರೆ ಒಳ್ಳೆಯದು ಎಂದು ಹೇಳಿದರು.

ಇವರಿಗೆ ವಿದೇಶದಿಂದ ಹಣ ಬರುತ್ತದೆ. ವಿದೇಶದಿಂದ ಹಣ ಪಡೆದು ದೇಶದಲ್ಲಿ ಆರಾಜಕತೆ ಸೃಷ್ಟಿಸುವ ದುಷ್ಟ ಶಕ್ತಿಗಳಿಗೆ ತಕ್ಕ ಪಾಠ ಕಲಿಸಬೇಕು. ದೇಶದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಅಭಿ ವೃದ್ಧಿ ದೃಷಿಯಿಂದ ಇಡೀ ವಿಶ್ವದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. 2047 ಕ್ಕೆ ನಂಬರ್ ಒನ್ ಸ್ಥಾನದಲ್ಲಿರಲಿದೆ ಎಂದು ಹೇಳಿದೆ. ಅದಕ್ಕೆ ಎನ್‌ಸಿಪಿ ಸಂಸದೆ ಸುಪ್ರೀಯಾ ಸುಳೆ 2047 ನಾವ್ಯಾರು ಇರುವುದಿಲ್ಲ ಎಂದು ಹೇಳಿದರು. ಅದಕ್ಕೆ ನಾವ್ಯಾರು ಇರದಿದ್ದರೂ ಈ ದೇಶ ಇರುತ್ತದೆ. ನಮ್ಮ ಮುಂದಿನ ಪೀಳಿಗೆಗೆ ಈ ದೇಶ ಇರುತ್ತದೆ. ಅದಕ್ಕಾಗಿ ನರೇಂದ್ರ ಮೋದಿಯವರು ವಿಕಸಿತ ಭಾರತ ಎಂದು ಹೇಳಿದ್ದಾರೆ. ಅಂದರೆ ಅತ್ಯಂತ ಕೆಳ ಸ್ತರದಿಂದ ಹಿಡಿದು ಒಳ್ಳೆಯ ಆಹಾರ, ಆರೋಗ್ಯ, ಕುಡಿಯುವ ನೀರು, ಕೈಗೆ ಕೆಲಸ, ಮನೆ, ಗೌರವಯುತ ಸ್ವಾಭಿಮಾನದ ಬದುಕು ಎಲ್ಲದಕ್ಕೂ ಆರ್ಥಿಕ ಮೂಲ ಸೌಲಭ್ಯ ಹಾಗೂ ಸಾಮಾಜಿಕ ಮೂಲ ಸೌಲಭ್ಯ ಒದಗಿಸುವುದು ಮೋದಿಯವರ ಗುರಿಯಾಗಿದೆ. 25 ಕೋಟಿ ಜನರನ್ನು ಬಡತನದಿಂದ ತೆಗೆದು ಹಾಕಿರುವ ನಾಯಕ ನರೇಂದ್ರ ಮೋದಿಯವರು, ಕಾಂಗ್ರೆಸ್ ನವರು ಗರೀಬಿ ಹಠಾವೊ ಅಂತ 60 ವರ್ಷ ಆಳಿದರು. ದೇಶದಲ್ಲಿ ದಾರಿದ್ಮ, ಇರಬೇಕು. ಅವರ ಹೆಸರಿನಲ್ಲಿ ಅವರು ರಾಜಕಾರಣ ಮಾಡುತ್ತಾರೆ. ಜನಸಂಖ್ಯೆ ಈ ದೇಶಕ್ಕೆ ಭಾರ ಅಂದಿದ್ದರು. ಮೋದಿಯವರು ಜನಸಂಖ್ಯೆಯನ್ನೇ ಆಸ್ತಿಯನ್ನಾಗಿ ಮಾಡಿದರು. ಮೋದಿಯವರು ಯುವಕರಿಗೆ ಕೌಶಲ್ಯ ತರಬೇತಿ ನೀಡಿ 3 ಕೋಟಿ ಜನರಿಗೆ ಉದ್ಯೋಗ ಒದಗಿಸಿದ್ದಾರೆ. ಮುಂದಿನ ವರ್ಷದಲ್ಲಿ ಮತ್ತೆ 3 ಕೋಟಿ ಜನರಿಗೆ ಉದ್ಯೋಗ ಒದಗಿಸುತ್ತಾರೆ. ಮುದ್ರಾ ಯೋಜನೆ ಅಡಿಯಲ್ಲಿ 6 ಕೋಟಿ ಜನರಿಗೆ ಉದ್ಯೋಗ ಕೈಗೊಳ್ಳಲು ಸಹಾಯ ಮಾಡಿದ್ದಾರೆ ಎಂದು ಹೇಳಿದರು.

*ಎಲ್ಲ ಬೆಲೆ ಹೆಚ್ಚಳ*

ರಾಜ್ಯ ಸರ್ಕಾರದ ಸಾಧನೆ ಏನಂದರೆ ಫ್ರೀ ಬಸ್ ಆದರೆ, ಡಿಸೇಲ್ ಇಲ್ಲದೇ ನಿಲ್ಲುತ್ತಿವೆ. ಉಚಿತ ಅಕ್ಕಿಯನ್ನು ಪ್ರಧಾನ ಮಂತ್ರಿಯವರು ನೀಡುತ್ತಾರೆ. ಅದನ್ನು ಈ ಸರ್ಕಾರ ತಮ್ಮದೆಂದು ಹೇಳುತ್ತಾರೆ. ಈಗ ಬಸ್ ದರ ಹೆಚ್ಚಳ ಹಾಲಿನ ದರ, ನೀರಿನ ದರ, ಸ್ಟ್ಯಾಂಪ್ ಡ್ಯೂಟಿ, ಮದ್ಯದ ದರ ಏರಿಕೆ ಉಸಿರಾಡುವ ಗಾಳಿಯೊಂದನ್ನು ಬಿಟ್ಟರೆ ಎಲ್ಲದಕ್ಕೂ ತೆರಿಗೆ ಬೆಂಗಳೂರಿನಲ್ಲಿ ಕಸದ ಮೇಲೆ ತೆರಿಗೆ ಗಾಡಿ ಪಾರ್ಕ್ ಮಾಡಿದರೂ ಅದಕ್ಕೂ ತೆರಿಗೆ ಕಟ್ಟಬೇಕು. ನಮ್ಮ ಮನೆ ಕಸ ಹಾಕಿದರೂ ತೆರಿಗೆ ಕಟ್ಟಬೇಕು. ಪ್ರತಿ ವರ್ಷ ಮೂರು ವರ್ಷದಲ್ಲಿ 40 ರಿಂದ 50 ಸಾವಿರ ಕೋಟಿ ರೂ. ಹೆಚ್ಚುವರಿ ತೆರಿಗೆ ಹಾಕಿದ್ದಾರೆ. ಆದರೂ ರಾಜ್ಯದ ಖಜಾನೆ ಖಾಲಿಯಾಗಿದೆ. ಆದ್ದರಿಂದ ಈ ಚುನಾವಣೆ ಬಹಳ ಮಹತ್ವದ್ದಿದೆ. ಎಲ್ಲರ ಭವಿಷ್ಯ ಬರೆಯುವ ಚುನಾವಣೆ. ನಾಲ್ಕು ಕಡೆ ನಡೆಯುವ ಈ ಚುನಾವಣೆ 16 ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ನಾಲ್ಕೂ ಕಡೆ ಬಿಜೆಪಿ ಜಯ ಗಳಿಸಿದರೆ 2028 ಕ್ಕೆ ಈ ಸರ್ಕಾರ ಕಿತ್ತೊಗೆದು ಜನಪರವಾಗಿರುವ ಬಿಜೆಪಿ ಸರ್ಕಾರ ಬರುತ್ತದೆ. 2029 ಕ್ಕೆ ಮತ್ತೆ ಮೋದಿಯವರ ನೇತೃತ್ವದಲ್ಲಿ ಸರ್ಕಾರ ಬರುತ್ತದೆ. ಆಗ 2047 ಕ್ಕೆ ವಿಕಸಿತ ಭಾರತದ ಕನಸು ನನಸಾಗುತ್ತದೆ. ನಮ್ಮ ಮಕ್ಕಳ ಭವಿಷ್ಯ ಹಾಗೂ ದೇಶದ ಭವಿಷ್ಯಕ್ಕಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande