ಬಳ್ಳಾರಿ: ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಕಟ್ಟಡ ಬೇಕಾಗಿದೆ
ಬಳ್ಳಾರಿ, 17 ಅಕ್ಟೋಬರ್ (ಹಿ.ಸ.) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಬಳ್ಳಾರಿ ತಾಲೂಕು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ (ಸುಧಾ ಕ್ರಾಸ್, ಬಳ್ಳಾರಿ - ಹೆಚ್.ಐ.ಸಂಖ್ಯೆ: 1661) ನಿರ್ವಹಣೆಗೆ ಸೂಕ್ತವಾದ ಖಾಸಗಿ ಕಟ್ಟಡ ಬೇಕಾಗಿದೆ. ಸರ್ಕ
ಬಳ್ಳಾರಿ: ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಕಟ್ಟಡ ಬೇಕಾಗಿದೆ


ಬಳ್ಳಾರಿ, 17 ಅಕ್ಟೋಬರ್ (ಹಿ.ಸ.)

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಬಳ್ಳಾರಿ ತಾಲೂಕು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ (ಸುಧಾ ಕ್ರಾಸ್, ಬಳ್ಳಾರಿ - ಹೆಚ್.ಐ.ಸಂಖ್ಯೆ: 1661) ನಿರ್ವಹಣೆಗೆ ಸೂಕ್ತವಾದ ಖಾಸಗಿ ಕಟ್ಟಡ ಬೇಕಾಗಿದೆ.

ಸರ್ಕಾರದ ಸುತ್ತೋಲೆಯಲ್ಲಿನ ಮಾರ್ಗಸೂಚಿಗಳು ಹಾಗೂ ಲೋಕೋಪಯೋಗಿ ಇಲಾಖೆ ನಿಗದಿಪಡಿಸುವ ಬಾಡಿಗೆ ದರಕ್ಕನುಗುಣವಾಗಿ ಕಟ್ಟಡವನ್ನು ಬಾಡಿಗೆ ನೀಡಲು ಆಸಕ್ತಿಯಿರುವ ಮಾಲೀಕರು ಹೆಚ್ಚಿನ ವಿವರಗಳಿಗಾಗಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.

*ಸ0ಪರ್ಕಿಸಬೇಕಾದ ವಿಳಾಸ:*

ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ,

1ನೇ ಮಹಡಿ, ಡಿಸ್ನಿ ಫಂಕ್ಷನ್ ಹಾಲ್ ಎದುರುಗಡೆ,

ಎಲ್.ಎಲ್.ಸಿ ಕಾಲೋನಿ, ಓ.ಪಿ. ಸರ್ಕಲ್ ಹತ್ತಿರ,

ಕಂಟೋನ್ಮೆAಟ್, ಬಳ್ಳಾರಿ 583104.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08392-294492 ನ್ನು ಸಂಪರ್ಕಿಸಬಹುದಾಗಿದೆ ಎಂದು ಬಳ್ಳಾರಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande