ನೀರು, ಮೇವಿಗೆ ಕೊರತೆಯಾಗದಂತೆ ಎಚ್ಚರ ವಹಿಸಲು : ಡಾ.ತ್ರಿಲೋಕ ಚಂದ್ರ ಕೆ.ವಿ ಸೂಚನೆ
ಬಳ್ಳಾರಿ, 17 ಅಕ್ಟೋಬರ್ (ಹಿ.ಸ.) ಕುಡಿಯುವ ನೀರು, ಮೇವು ಸೇರಿದಂತೆ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ನಿರಂತರ ನಿಗಾ ವಹಿಸಿ, ಜನ-ಜಾನುವಾರುಗಳಿಗೆ ಯಾವುದೇ ತೊಂದರೆಯಾಗದAತೆ ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ತ್ರಿಲೋಕ ಚಂದ್ರ ಕೆ.ವಿ ಅವರು ಹೇಳಿದರು. ನ
ನೀರು, ಮೇವಿಗೆ ಕೊರತೆಯಾಗದಂತೆ ಎಚ್ಚರ : ಡಾ.ತ್ರಿಲೋಕ ಚಂದ್ರ ಕೆ.ವಿ ಸೂಚನೆ


ನೀರು, ಮೇವಿಗೆ ಕೊರತೆಯಾಗದಂತೆ ಎಚ್ಚರ : ಡಾ.ತ್ರಿಲೋಕ ಚಂದ್ರ ಕೆ.ವಿ ಸೂಚನೆ


ನೀರು, ಮೇವಿಗೆ ಕೊರತೆಯಾಗದಂತೆ ಎಚ್ಚರ : ಡಾ.ತ್ರಿಲೋಕ ಚಂದ್ರ ಕೆ.ವಿ ಸೂಚನೆ


ನೀರು, ಮೇವಿಗೆ ಕೊರತೆಯಾಗದಂತೆ ಎಚ್ಚರ : ಡಾ.ತ್ರಿಲೋಕ ಚಂದ್ರ ಕೆ.ವಿ ಸೂಚನೆ


ಬಳ್ಳಾರಿ, 17 ಅಕ್ಟೋಬರ್ (ಹಿ.ಸ.)

ಕುಡಿಯುವ ನೀರು, ಮೇವು ಸೇರಿದಂತೆ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ನಿರಂತರ ನಿಗಾ ವಹಿಸಿ, ಜನ-ಜಾನುವಾರುಗಳಿಗೆ ಯಾವುದೇ ತೊಂದರೆಯಾಗದAತೆ ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ತ್ರಿಲೋಕ ಚಂದ್ರ ಕೆ.ವಿ ಅವರು ಹೇಳಿದರು.

ನಗರದ ನೂತನ ಜಿಲ್ಲಾಡಳಿತ ಭವನದ ವಿಡಿಯೋ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲೆಯ ‘ಬರ ಪರಿಸ್ಥಿತಿ ನಿರ್ವಹಣೆ’ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

*ಶೇ. 49 ರಷ್ಟು ಮಳೆ ಕೊರತೆ:*

ಬಳ್ಳಾರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಬರ ಪರಿಸ್ಥಿತಿ ತೀವ್ರಗೊಂಡಿದೆ. ನೈಋತ್ಯ ಮುಂಗಾರು ಅವಧಿಯಲ್ಲಿ (ಜೂನ್ 1 ರಿಂದ ಸೆಪ್ಟೆಂಬರ್ 30 ರವರೆಗೆ) ಜಿಲ್ಲೆಯಲ್ಲಿ ವಾಡಿಕೆಯಂತೆ 365.6 ಮಿ.ಮೀ. ಮಳೆಯಾಗಬೇಕಿತ್ತು, ಆದರೆ ಕೇವಲ 186.3 ಮಿ.ಮೀ. ಮಳೆಯಾಗಿದ್ದು, ಶೇಕಡಾ 49 ರಷ್ಟು ಕೊರತೆ ಕಂಡುಬ0ದಿದೆ. ಅದರಲ್ಲೂ ಸಂಡೂರು ತಾಲೂಕಿನಲ್ಲಿ ಶೇ. 68 ಹಾಗೂ ಕಂಪ್ಲಿ ತಾಲೂಕಿನಲ್ಲಿ ಶೇ. 65 ರಷ್ಟು ಗಣನೀಯ ಮಳೆ ಕೊರತೆ ದಾಖಲಾಗಿದೆ. ಪರಿಣಾಮವಾಗಿ ಅಂತರ್ಜಲ ಮಟ್ಟವು ತೀವ್ರವಾಗಿ ಕುಸಿದಿದ್ದು, ಸಂಡೂರಿನಲ್ಲಿ ಗರಿಷ್ಠ 8.26 ಮೀಟರ್ಗಳಷ್ಟು ಅಂತರ್ಜಲ ಕುಸಿತ ಕಂಡಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದರು.

*71,756 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ:*

ಜಿಲ್ಲೆಯಲ್ಲಿ ನಡೆಸಲಾದ ಕ್ಷೇತ್ರ ಪರಿಶೀಲನೆ ವರದಿಯ ಪ್ರಕಾರ ಶೇ. 96.87 ರಷ್ಟು ಪ್ಲಾಟ್ಗಳಲ್ಲಿ ಶೇಕಡಾ 50 ಕ್ಕಿಂತಲೂ ಹೆಚ್ಚಿನ ಬೆಳೆ ಹಾನಿಯಾಗಿದೆ. ಒಟ್ಟು 71,756.5 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಇದರಲ್ಲಿ 67,236.5 ಹೆಕ್ಟೇರ್ ಕೃಷಿ ಹಾಗೂ 4,520 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಸೇರಿವೆ. ಸಿರುಗುಪ್ಪ ತಾಲೂಕಿನಲ್ಲಿ ಗರಿಷ್ಠ 44,231.6 ಹೆಕ್ಟೇರ್ ಹಾಗೂ ಸಂಡೂರಿನಲ್ಲಿ 20,278 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕರೂ ಆಗಿರುವ ನಾಗೇಂದ್ರ ಪ್ರಸಾದ್.ಕೆ ಅವರು ಸಭೆಗೆ ಮಾಹಿತಿ ನೀಡಿದರು.

ಎನ್ಡಿಆರ್ಎಫ್ ನಿಯಮಾವಳಿಗಳ ಪ್ರಕಾರ ಅಂದಾಜು ರೂ. 79.91 ಕೋಟಿ ನೆರವು ಕೋರಲಾಗಿದ್ದು, ‘ಪರಿಹಾರ' ತಂತ್ರಾ0ಶದಲ್ಲಿ ರೈತರ ವಿವರಗಳನ್ನು ದಾಖಲಿಸುವ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ. ಬೆಳೆ ವಿಮೆ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 50,828 ರೈತರು ನೋಂದಾಯಿಸಿಕೊAಡಿದ್ದಾರೆ ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಒಟ್ಟು 1,874 ಬೋರ್ವೆಲ್ಗಳಿದ್ದು, ನೀರಿನ ಇಳುವರಿ ಕಡಿಮೆಯಾದ ಕಾರಣ ಪ್ರಸ್ತುತ 204 ಬೋರ್ವೆಲ್ಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಮಳೆಯಾದ ಬಳಿಕ ಇವು ಮರುಪೂರಣಗೊಳ್ಳುವ ನಿರೀಕ್ಷೆಯಿದೆ. ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸಲು ವಿಬಿ-ಜಿ ರಾಮ್ ಜಿ ಯೋಜನೆಯಡಿ 53,167 ಕುಟುಂಬಗಳಿಗೆ ಕೆಲಸ ನೀಡಲಾಗಿದ್ದು, 11.20 ಲಕ್ಷ ಮಾನವ ದಿನಗಳನ್ನು ಸೃಜಿಸಿ, ಕೂಲಿ ಪಾವತಿಗಾಗಿ ರೂ. 2,735.24 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಅವರು ಸಭೆಗೆ ತಿಳಿಸಿದರು.

ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜಾನುವಾರುಗಳಿಗೆ ಮುಂದಿನ 23 ವಾರಗಳಿಗೆ ಸಾಕಾಗುವಷ್ಟು (ಸುಮಾರು 2.20 ಲಕ್ಷ ಟನ್) ಮೇವು ಲಭ್ಯವಿದ್ದು, ಕೊರತೆ ನೀಗಿಸಲು ಈಗಾಗಲೇ ಜಿಲ್ಲೆಯಾದ್ಯಂತ 3,334 ಮೇವಿನ ಕಿರುಪೊಟ್ಟಣಗಳನ್ನು ರೈತರಿಗೆ ವಿತರಿಸಲಾಗಿದೆ ಎಂದು ಪಶು ಸಂಗೋಪನಾ ಇಲಾಖಾಧಿಕಾರಿಗಳು ಸಭೆಗೆ ತಿಳಿಸಿದರು.

*ನೀರು ನಿರ್ವಹಣಾ ಕಾರ್ಯತಂತ್ರ ಅನುಸರಿಸಿ:*

ನೀರಿನ ಕೊರತೆ ಕಂಡುಬ0ದಾಗ ಮೊದಲು ಹಳೆಯ ಕೊಳವೆಬಾವಿಗಳನ್ನು ಫ್ಲಶಿಂಗ್ ಮಾಡುವುದು, ಅದು ವಿಫಲವಾದರೆ ಖಾಸಗಿ ಬೋರ್ವೆಲ್ ಬಾಡಿಗೆಗೆ ಪಡೆಯುವುದು, ನಂತರ ಟ್ಯಾಂಕರ್ ಮೂಲಕ ಪೂರೈಸುವುದು ಮತ್ತು ಕೊನೆಯ ಆಯ್ಕೆಯಾಗಿ ಮಾತ್ರ ಹೊಸ ಬೋರ್ವೆಲ್ ಕೊರೆಯುವ ಕಟ್ಟುನಿಟ್ಟಿನ ನಿಯಮ ಅನುಸರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಳಿಸಿದರು.

ನವೆಂಬರ್ 10–11ರ ಸುಮಾರಿಗೆ ಹೆಚ್.ಎಲ್.ಸಿ/ಎಲ್.ಎಲ್.ಸಿ ಕಾಲುವೆಗಳ ನೀರು ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ನೀರಾವರಿ ಸಲಹಾ ಸಮಿತಿ ಸಭೆಯ ಮೂಲಕ ನವೆಂಬರ್ ಅಂತ್ಯದವರೆಗೆ ನೀರು ಹರಿಸಲು ಆನ್-ಅಂಡ್-ಆಫ್ ಮಾದರಿಯ ನಿರ್ವಹಣೆಗೆ ಪ್ರಯತ್ನಿಸಲಾಗುತ್ತಿದೆ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಬಳ್ಳಾರಿ ನಗರ ಪ್ರದೇಶಗಳ ಕುಡಿಯುವ ನೀರಿನ ಸಂಗ್ರಹಣಾಗಾರಗಳಲ್ಲಿ (ಇಂಪೌ0ಡಿ0ಗ್ ರಿಸರ್ವಾಯರ್) 12,000 ಎಂ.ಎಲ್ ಒಟ್ಟು ಸಾಮರ್ಥ್ಯವಿದ್ದು, ಈಗಾಗಲೇ 8,500 ಎಂ.ಎಲ್ ನೀರು ಸಂಗ್ರಹವಾಗಿದೆ. ನವೆಂಬರ್ 11ರ ವೇಳೆಗೆ ಇದು 11,000 ಎಂ.ಎಲ್.ಡಿ ತಲುಪಲಿದ್ದು, ಕನಿಷ್ಠ 100 ದಿನಗಳ ಬೇಡಿಕೆಗೆ ಸಾಕಾಗಲಿದೆ. ಮುಂದಿನ ವರ್ಷದ ಮಾರ್ಚ್ ಮತ್ತು ಮೇ ತಿಂಗಳಲ್ಲಿ ಹೆಚ್ಚುವರಿ ನೀರು ಪಡೆಯುವ ಮೂಲಕ ಜೂನ್ ಅಂತ್ಯದವರೆಗೂ ಸುಲಭವಾಗಿ ನಿರ್ವಹಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಇಂಜಿನಿಯರ್ ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಎನ್., ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಡಿಯುಡಿಸಿ ಪಿಡಿ ಅಬ್ದುಲ್ ರೆಹಮಾನ್, ಜಂಟಿ ಕೃಷಿ ನಿರ್ದೇಶಕ ಕೆ.ಸೋಮಸುಂದರ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಶಶಿಕಾಂತ್ ಕೋಟಿಮನಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಐದು ತಾಲೂಕುಗಳ ತಹಶೀಲ್ದಾರರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande