ಬಳ್ಳಾರಿ : ಅ.27 ರಂದು ನಿಧಿ ಆಪ್ಕೆ ನಿಕಟ್
ಬಳ್ಳಾರಿ, 15 ಅಕ್ಟೋಬರ್ (ಹಿ.ಸ.) ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಬಳ್ಳಾರಿ ಪ್ರಾದೇಶಿಕ ಕಚೇರಿಯ ವತಿಯಿಂದ ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಅಕ್ಟೋಬರ್ 27 ರಂದು ‘ನಿಧಿ ಆಪ್ಕೆ ನಿಕಟ್'' (ಭವಿಷ್ಯ ನಿಧಿ ನಿಮ್ಮ ಹತ್ತಿರಕ್ಕೆ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬಳ್ಳಾರಿ : ಅ.27 ರಂದು ನಿಧಿ ಆಪ್ಕೆ ನಿಕಟ್


ಬಳ್ಳಾರಿ, 15 ಅಕ್ಟೋಬರ್ (ಹಿ.ಸ.)

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಬಳ್ಳಾರಿ ಪ್ರಾದೇಶಿಕ ಕಚೇರಿಯ ವತಿಯಿಂದ ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಅಕ್ಟೋಬರ್ 27 ರಂದು ‘ನಿಧಿ ಆಪ್ಕೆ ನಿಕಟ್' (ಭವಿಷ್ಯ ನಿಧಿ ನಿಮ್ಮ ಹತ್ತಿರಕ್ಕೆ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಈ ಕೆಳಕಂಡ ನಿಗದಿತ ಸ್ಥಳಗಳಲ್ಲಿ ಕಾರ್ಯಕ್ರಮ ಜರುಗಲಿದೆ.

ಬಳ್ಳಾರಿ ಜಿಲ್ಲೆ: ಮೂಟರ್ಸ ಸೇಲ್ಸ್ ಪ್ರೆವೇಟ್ ಲಿಮಿಟೆಡ್, ಬಳ್ಳಾರಿ.

ವಿಜಯನಗರ ಜಿಲ್ಲೆ: ಆರೇಂಜ್ ಕೌಂಟಿ ರೆಸಾರ್ಟ್ ಆಂಡ್ ಹೊಟೇಲ್ಸ್ ಲಿಮಿಟೆಡ್, ವಿಜಯನಗರ.

ಕೊಪ್ಪಳ ಜಿಲ್ಲೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಕೊಪ್ಪಳ.

ಚಿತ್ರದುರ್ಗ ಜಿಲ್ಲೆ: ಎಸ್.ಜೆ.ಎಂ. ದಂತ ವೈದ್ಯಕೀಯ ಮಹಾವಿದ್ಯಾಲಯ, ಚಿತ್ರದುರ್ಗ.

ಈ ಕಾರ್ಯಕ್ರಮವು ಕಾರ್ಮಿಕರು, ಪಿಂಚಣಿದಾರರು ಹಾಗೂ ಉದ್ಯೋಗದಾತರ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ನೇರ ಮಾಹಿತಿ ವಿನಿಮಯಕ್ಕೆ ಸೂಕ್ತ ವೇದಿಕೆಯಾಗಿದೆ. ಇದರ ಜೊತೆಗೆ ಉದ್ಯೋಗದಾತರ ಕರ್ತವ್ಯ-ಜವಾಬ್ದಾರಿಗಳ ಅರಿವು, ಲಭ್ಯವಿರುವ ಆನ್ಲೈನ್ ಸೇವೆಗಳು ಹಾಗೂ ನೂತನ ಸುಧಾರಣೆಗಳ ಕುರಿತು ಮಾಹಿತಿ ಒದಗಿಸಲಾಗುತ್ತದೆ.

ಸಂಬ0ಧಪಟ್ಟ ಎಲ್ಲಾ ಕಾರ್ಮಿಕರು, ಪಿಂಚಣಿದಾರರು ಮತ್ತು ಉದ್ಯೋಗದಾತರು ತಮ್ಮ ಸಮೀಪದ ಕೇಂದ್ರಕ್ಕೆ ಹಾಜರಾಗಿ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಾದ ಕೆ. ವಿ. ಪ್ರವೀಣ್ ಕೋರಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande