ಕೊಳಗಲ್ಲು ವ್ಯಕ್ತಿ ಕಾಣೆ: ಪತ್ತೆಗೆ ಮನವಿ
ಬಳ್ಳಾರಿ, 15 ಅಕ್ಟೋಬರ್ (ಹಿ.ಸ.) ಕೊಳಗಲ್ಲು ಗ್ರಾಮದ 4 ನೇ ವಾರ್ಡ್ ನ ನಿವಾಸಿಯಾದ ನಾಗರಾಜ ಎಂಬ 33 ವರ್ಷದ ವ್ಯಕ್ತಿ ಅ.06 ರಂದು ಮನೆಯಿಂದ ಕಾಣೆಯಾಗಿರುವ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿಮಾಡಿದ್ದಾರೆ. ವ್
ಕೊಳಗಲ್ಲು ವ್ಯಕ್ತಿ ಕಾಣೆ: ಪತ್ತೆಗೆ ಮನವಿ


ಬಳ್ಳಾರಿ, 15 ಅಕ್ಟೋಬರ್ (ಹಿ.ಸ.)

ಕೊಳಗಲ್ಲು ಗ್ರಾಮದ 4 ನೇ ವಾರ್ಡ್ ನ ನಿವಾಸಿಯಾದ ನಾಗರಾಜ ಎಂಬ 33 ವರ್ಷದ ವ್ಯಕ್ತಿ ಅ.06 ರಂದು ಮನೆಯಿಂದ ಕಾಣೆಯಾಗಿರುವ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿಮಾಡಿದ್ದಾರೆ.

ವ್ಯಕ್ತಿಯ ಚಹರೆ ಗುರುತು:- ಎತ್ತರ 5.4 ಅಡಿ, ದುಂಡು ಮುಖ, ಕಪ್ಪು ಮೈಬಣ್ಣ, ದೃಢವಾದ ಮೈಕಟ್ಟು ಹೊಂದಿದ್ದು, ಬಲಗೈ ಮೇಲೆ ಚೇಳು ಮತ್ತು ವೃತ್ತದ ಅಚ್ಚೆ ಹಾಕಿಸಿಕೊಂಡಿರುತ್ತಾನೆ. ಮನೆಯಿಂದ ಹೊರಡುವ ಸಂರ್ಧಭದಲ್ಲಿ ಕಪ್ಪು ಬಣ್ಣದ ಆಫ್ ಟೀ ಶರ್ಟ್ ಹಾಗೂ ಬಿಳಿ ಬಣ್ಣದ ಲುಂಗಿ ಧರಿಸಿರುತ್ತಾನೆ. ಕನ್ನಡ ಹಾಗೂ ತೆಲುಗು ಭಾಷೆ ಮಾತನಾಡುತ್ತಾನೆ.

ಮೇಲ್ಕಂಡ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ದೂ.08392-276461, ಮೊ.9480803049, ಅಥವಾ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande