
ವಿಜಯಪುರ, 12 ಅಕ್ಟೋಬರ್ (ಹಿ.ಸ.):
ಅಘೋರಿಗಳ ನೃತ್ಯಕ್ಕೆ ಜನರ ಮೆಚ್ಚುಗೆಉತ್ಸವದ ಅಂಗವಾಗಿ ಮುಂಬೈನ ಮಹಾಕಾಲಿ ಇವೆಂಟ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಅಘೋರಿ ಕಾರ್ಯಕ್ರಮ ಜನರ ಗಮನ ಸೆಳೆಯಿತು.
ಅಘೋರಿಗಳ ನೃತ್ಯವನ್ನು ನೆರೆದಿದ್ದ ಜನರು ಕುತೂಹಲದಿಂದ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಉತ್ಸವದ ಮೆರುಗು ಹೆಚ್ಚಿಸಿದವು.
5 ಸಾವಿರ ಸುಮಂಗಲಿಯರಿಂದ ಕುಂಭ ಮೆರವಣಿಗೆಕಾರ್ಯಕ್ರಮದ ಬಳಿಕ ಸುಮಾರು ಐದು ಸಾವಿರ ಸುಮಂಗಲಿಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡರು. ಸಾಂಪ್ರದಾಯಿಕ ಆಚರಣೆಗಳೊಂದಿಗೆ ನಡೆದ ಈ ಮೆರವಣಿಗೆ ಉತ್ಸವಕ್ಕೆ ವಿಶೇಷ ಕಳೆ ತಂದಿತು.
ಕಾರ್ಯಕ್ರಮದಲ್ಲಿ ಬಿಗ್ಬಾಸ್ ವಿಜೇತ ಹನುಮಂತ ಲಮಾಣಿ, ಮಾಜಿ ಶಾಸಕ ರಮೇಶ ಭೂಸನೂರ, ಅಭಿನವ ದೇವಾನಂದ ಚವ್ಹಾಣ, ಪ್ರೀತಮ್ ಚವ್ಹಾಣ, ಡಾ. ಪ್ರಭುಗೌಡ ಪಾಟೀಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ತಾಂಬಾ ಗ್ರಾಮದಲ್ಲಿ ಹತ್ತು ದಿನಗಳ ಕಾಲ ನಡೆಯಲಿರುವ ನಾಡದೇವಿ ನವರಾತ್ರಿ ಉತ್ಸವವು ಧಾರ್ಮಿಕ ಶ್ರದ್ಧೆ, ಸಾಂಸ್ಕೃತಿಕ ಸಂಭ್ರಮ ಹಾಗೂ ಜನರ ಪಾಲ್ಗೊಳ್ಳುವಿಕೆಯೊಂದಿಗೆ ಉತ್ತರ ಕರ್ನಾಟಕದ ದಸರಾ ಆಚರಣೆಗೆ ವಿಶೇಷ ಮೆರಗು ನೀಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R