ಮಕ್ಕಳ ದಿನಾಚರಣೆಗೆ 61.84 ಲಕ್ಷ ವಿದ್ಯಾರ್ಥಿಗಳಿಗೆ ಕೇಕ್ ವಿತರಿಸಲು ತಮಿಳುನಾಡು ಸರಕಾರ ನಿರ್ಧಾರ
₹9.27 ಕೋಟಿ ವೆಚ್ಚದಲ್ಲಿ 61.84 ಲಕ್ಷ ಕೇಕ್ ತುಂಡುಗಳ ಖರೀದಿಗೆ ಟೆಂಡರ್; ನವೆಂಬರ್ 14ರಂದು ವಿತರಿಸಲು ಯೋಜನೆ
TN-Schools-Cake-Distribution


ಚೆನ್ನೈ, 11 ಅಕ್ಟೋಬರ್ (ಹಿ.ಸ.):

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮದಿನವಾದ ನವೆಂಬರ್ 14ರಂದು ಆಚರಿಸುವ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿಸಲು ತಮಿಳುನಾಡು ಸರ್ಕಾರ ಮಹತ್ವದ ಯೋಜನೆ ಘೋಷಿಸಿದೆ.

ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರವು ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 61,84,566 ವಿದ್ಯಾರ್ಥಿಗಳಿಗೆ ಕೇಕ್ ವಿತರಿಸಲು ನಿರ್ಧರಿಸಿದೆ.

9.27 ಕೋಟಿ ರೂ. ಅನುದಾನ:ರಾಜ್ಯದಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಅಂಗವಾಗಿ ಸ್ಪಾಂಜ್ ಕೇಕ್ ವಿತರಿಸಲಾಗುತ್ತದೆ.

ಈ ಯೋಜನೆಗಾಗಿ ಸರ್ಕಾರ ಸುಮಾರು 9.27 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಒಟ್ಟು 61,84,566 ವಿದ್ಯಾರ್ಥಿಗಳಿಗೆ ಕೇಕ್ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

ಕೇಕ್ನ ತೂಕ, ಗುಣಮಟ್ಟಕ್ಕೆ ಆದ್ಯತೆವಿದ್ಯಾರ್ಥಿಗಳಿಗೆ ವಿತರಿಸುವ ಕೇಕ್ಗಳ ತೂಕ ಮತ್ತು ಗುಣಮಟ್ಟ ಕಾಪಾಡಲು ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಿದೆ. ಪ್ರತಿ ವಿದ್ಯಾರ್ಥಿಗೆ ನೀಡುವ ಕೇಕ್ ತುಂಡು 45 ಗ್ರಾಂ ತೂಕ ಹೊಂದಿರಬೇಕು ಎಂದು ಸೂಚಿಸಲಾಗಿದೆ.

ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇಕ್ಗಳ ಅವಧಿ ಮುಕ್ತಾಯದ ದಿನಾಂಕದ ಬಗ್ಗೆಯೂ ಕಟ್ಟುನಿಟ್ಟಿನ ನಿಯಮ ರೂಪಿಸಲಾಗಿದೆ. ಗೋದಾಮುಗಳಿಂದ ಕೇಕ್ಗಳನ್ನು ಸ್ವೀಕರಿಸುವ ಸಂದರ್ಭದಲ್ಲಿ ಅವುಗಳ ಬಳಕೆಯ ಅವಧಿ ಕನಿಷ್ಠ 30 ದಿನಗಳು ಬಾಕಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಸರ್ಕಾರದ ನಿರ್ಧಾರಕ್ಕೆ ಮೆಚ್ಚುಗೆ:ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ತಮಿಳುನಾಡು ಸರ್ಕಾರ ಈ ಕ್ರಮ ಕೈಗೊಂಡಿದೆ.

ವಿದ್ಯಾರ್ಥಿಗಳ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಈ ನಿರ್ಧಾರಕ್ಕೆ ಪೋಷಕರು ಮತ್ತು ಶಿಕ್ಷಣ ತಜ್ಞರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮಕ್ಕಳಲ್ಲಿ ಉತ್ಸಾಹ ಮೂಡಿಸುವುದರ ಜತೆಗೆ ಮಕ್ಕಳ ದಿನಾಚರಣೆಯ ಸಂಭ್ರಮವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande