ಬಳ್ಳಾರಿ : 2 ವರ್ಷದ ಬಾಲಕನ ಪೋಷಕರ ಪತ್ತೆಗಾಗಿ ಮನವಿ
ಬಳ್ಳಾರಿ, 01 ಅಕ್ಟೋಬರ್ (ಹಿ.ಸ.) ಬಳ್ಳಾರಿ ತಾಲೂಕಿನ ಚಾನಾಳ್ ಗ್ರಾಮದಲ್ಲಿ ಸಾರ್ವಜನಿಕರಿಗೆ ದೊರೆತ ಸುಮಾರು 2 ವರ್ಷದ ಅನಾಮಧೇಯ ಗಂಡು ಮಗುವಿನ ರಕ್ಷಣೆ ಹಾಗೂ ಪೋಷಣೆಗಾಗಿ, ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಬಳ್ಳಾರಿ ಸರ್ಕಾರಿ ಅಮೂಲ್ಯ (ಜಿ) ವಿಶೇಷ ದತ್ತು ಸಂಸ್ಥೆಗೆ ದಾಖಲಿಸಲಾಗಿದ್ದು, ಸಾರ್ವಜನಿಕರು
ಬಳ್ಳಾರಿ : 2 ವರ್ಷದ ಬಾಲಕನ ಪೋಷಕರ ಪತ್ತೆಗಾಗಿ ಮನವಿ


ಬಳ್ಳಾರಿ, 01 ಅಕ್ಟೋಬರ್ (ಹಿ.ಸ.)

ಬಳ್ಳಾರಿ ತಾಲೂಕಿನ ಚಾನಾಳ್ ಗ್ರಾಮದಲ್ಲಿ ಸಾರ್ವಜನಿಕರಿಗೆ ದೊರೆತ ಸುಮಾರು 2 ವರ್ಷದ ಅನಾಮಧೇಯ ಗಂಡು ಮಗುವಿನ ರಕ್ಷಣೆ ಹಾಗೂ ಪೋಷಣೆಗಾಗಿ, ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಬಳ್ಳಾರಿ ಸರ್ಕಾರಿ ಅಮೂಲ್ಯ (ಜಿ) ವಿಶೇಷ ದತ್ತು ಸಂಸ್ಥೆಗೆ ದಾಖಲಿಸಲಾಗಿದ್ದು, ಸಾರ್ವಜನಿಕರು ಪೋಷಕರ ಪತ್ತೆಗೆ ಸಹಕರಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಕೋರಿದ್ದಾರೆ.

ಮಗುವಿನ ತಾಯಿ ಸೋಮಲಿಂಗಮ್ಮ (ಅಂದಾಜು 40 ವರ್ಷ, ವಿಚ್ಛೇದಿತೆ) ಎಂಬುವವರು ಪ್ರಸ್ತುತ ಗ್ರಾಮದಲ್ಲಿ ವಾಸವಾಗಿಲ್ಲ ಎಂಬ ಮಾಹಿತಿ ಸಾರ್ವಜನಿಕರಿಂದ ತಿಳಿದುಬಂದಿದೆ.

ಬಾಲಕನಿಗೆ ಕೇವಲ 2 ವರ್ಷವಾಗಿದ್ದು, ಇನ್ನೂ ಮಾತನಾಡಲು ಬರುವುದಿಲ್ಲ. ಮಗುವಿನ ಗುರುತಿಗಾಗಿ ಈ ಹಿಂದೆ ಆಧಾರ್ ನೋಂದಣಿ ಪರಿಶೀಲಿಸಿದಾಗ ಯಾವುದೇ ಆಧಾರ್ ನೋಂದಣಿ ಆಗದಿರುವುದು ಕಂಡುಬ0ದಿದೆ.

*ಬಾಲಕನ ಚಹರೆ ಮತ್ತು ವಿವರ:*

72 ಸೆಂ.ಮೀ ಎತ್ತರ, ತೂಕ 6.3 ಕೆ.ಜಿ ಇದ್ದು, ಸಾಧಾರಣ ಮೈಕಟ್ಟು, ಉದ್ದ ಮುಖ, ಗೋಧಿ ಮೈಬಣ್ಣ ಹೊಂದಿರುತ್ತಾನೆ.

ಬಾಲಕನ ವಿಳಾಸ ಅಥವಾ ಪೋಷಕರ ಬಗ್ಗೆ ಯಾವುದೇ ಸುಳಿವು/ಮಾಹಿತಿ ದೊರೆತಲ್ಲಿ ಅಧೀಕ್ಷಕರು, ಸರ್ಕಾರಿ ಅಮೂಲ್ಯ (ಜಿ) ವಿಶೇಷ ದತ್ತು ಸಂಸ್ಥೆ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಾಂತಿಧಾಮ ಆವರಣ, ಕಂಟೋನ್ಮೆ0ಟ್, ಬಳ್ಳಾರಿ. ದೂ:08392-242065, ಅಧೀಕ್ಷಕರ ಮೊ: 9986315615, ಸಮಾಲೋಚಕರ ಮೊ: 9742019519 ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande