ಬಿಜೆಪಿಯಿಂದ ಆದಿವಾಸಿಗಳ ಕಡೆಗಣನೆ : ಎಐಸಿಸಿ ಮುಖಂಡ ಶೋಭನ್ ಬಾಬು ಆರೋಪ
ಬಿಜೆಪಿಯಿಂದ ಆದಿವಾಸಿಗಳ ಕಡೆಗಣನೆ ಎಐಸಿಸಿ ಮುಖಂಡ ಶೋಭನ್ ಬಾಬು ಆರೋಪ
ಚಿತ್ರ - ಕೋಲಾರ ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಶನಿವಾರ ಕಾಂಗ್ರೆಸ್ ಎಸ್ಟಿ ಘಟಕದ ಸಂಘಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಎಐಸಿಸಿ ಆದಿವಾಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಶೋಭನ್ ಬಾಬು.


ಬಿಜೆಪಿಯಿಂದ ಆದಿವಾಸಿಗಳ ಕಡೆಗಣನೆ ಎಐಸಿಸಿ ಮುಖಂಡ ಶೋಭನ್ ಬಾಬು ಆರೋಪ

ಕೋಲಾರ, ೦೩ ಡಿಸೆಂಬರ್ (ಹಿ.ಸ) :

ಆ್ಯಂಕರ್ : ದೇಶದಲ್ಲಿ ಆದಿವಾಸಿಗಳ ಅಭಿವೃದ್ಧಿ ಬಿಜೆಪಿ ಮತ್ತು ಅದರ ಪೋಷಕ ಸಂಘಟನೆ ಆರ್.ಎಸ್.ಎಸ್ ನಿಂದ ಸಾಧ್ಯವಿಲ್ಲ ಚುನಾವಣೆಯ ಸಂದರ್ಭದಲ್ಲಿ ಮಾತ್ರವೇ ಆದಿವಾಸಿಗಳು ನೆನಪಿಗೆ ಬರತ್ತಾರೆ ಹೊರತು ಅಧಿಕಾರದಲ್ಲಿ ಇದ್ದಾಗ ಬರಲ್ಲ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು ಎಂಬುದು ದೇಶದ ಜನತೆಗೆ ಗೊತ್ತಿದೆ ಎಂದು ಎಐಸಿಸಿ ಆದಿವಾಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಶೋಭನ್ ಬಾಬು ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಶನಿವಾರ ಕಾಂಗ್ರೆಸ್ ಎಸ್ಟಿ ಘಟಕದ ಸಂಘಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದಲ್ಲಿ ನರೇಂದ್ರಮೋದಿ ಪ್ರಧಾನಿಯಾಗಿನಿಂದ ದಲಿತರ, ಬಡವರ, ಹಿಂದುಳಿದ ವರ್ಗಗಳ ಅಭಿವೃದ್ಧಿ ಕುಂಟಿತಗೊಳ್ಳುತ್ತಿದೆ ಬಿಜೆಪಿ ಅಭಿವೃದ್ಧಿಯ ನಾಟಕವಾಡುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿ ಸೇರಿದಂತೆ ಮಂತ್ರಿಗಳು ಭ್ರಷ್ಟಾಚಾರದಲ್ಲಿ ತೊಡಗಿ ಜೈಲು ಕಂಡಿದ್ದಾರೆ. ಇಂತಹ ಪಕ್ಷದಿಂದ ದೇಶದ ಮತ್ತು ಆದಿವಾಸಿಗಳ ಅಭಿವೃದ್ಧಿ ಹೇಗೆ ಸಾಧ್ಯ ಎಂದರು.

ಎಐಸಿಸಿ ಮಾರ್ಗದರ್ಶನದಲ್ಲಿ ಆದಿವಾಸಿಗಳ ಮಧ್ಯೆ ನಾಯಕತ್ವವನ್ನು ಬೆಳೆಸಬೇಕು ಅದಕ್ಕಾಗಿ ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದ ತನಕ ನಾಯಕರನ್ನು ಗುರುತಿಸಬೇಕು ವಿಶೇಷವಾಗಿ ಮಹಿಳೆಯರು ಯುವಕರಿಗೆ ಹೆಚ್ಚಿನ ಜವಾಬ್ದಾರಿ ಕೊಡಬೇಕಾಗಿದೆ ನಾಯಕರು ಮತ್ತು ಕಾರ್ಯಕರ್ತರು ಮಧ್ಯೆ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಏನು ಸಮಸ್ಯೆ ಇದ್ದರೂ ಗಮನಕ್ಕೆ ತನ್ನಿ ಎಂದ ಅವರು ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಈ ಭಾಗದ ಮತದಾರರು ತಕ್ಕ ಪಾಠ ಕಲಿಸಬೇಕು ದೇಶಕ್ಕೆ ರಾಹುಲ್ ಗಾಂಧಿಯಂತಹ ಯುವ ಪ್ರಧಾನಿಯ ಅವಶ್ಯಕತೆ ಇದೆ. ಮತದಾರರು ಆಸೆ, ಆಮಿಷಗಳಿಗೆ ಬಲಿಯಾಗದೇ ಉತ್ತಮ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಎಸ್ಟಿ ಘಟಕದ ಜಿಲ್ಲಾ ಅಧ್ಯಕ್ಷ ಎನ್.ಅಂಬರೀಷ್ ಮಾತನಾಡಿ ದೇಶದಲ್ಲಿ ಬಿಜೆಪಿ ಪಕ್ಷವು ಆರ್.ಎಸ್.ಎಸ್ ಸಂಘದ ಮಾರ್ಗದರ್ಶನದಲ್ಲಿ ದೇಶವನ್ನು ಹಾಳು ಮಾಡಲು ಹೊರಟಿದೆ ರಾಮಾಯಣವನ್ನು ವಾಲ್ಮೀಕಿ ಬರೆದಿಲ್ಲ ಎಂದು ಹಸಿ ಸುಳ್ಳು ಜನರ ಮಧ್ಯೆ ಬಿತ್ತಲು ಹೊರಟಿದೆ ಇದನ್ನು ವಿರೋಧ ಮಾಡಿಲ್ಲ ಎಂದರೆ ಮುಂದೆ ಅಂಬೇಡ್ಕರ್ ಸಂವಿಧಾನ ಬರೆದಿಲ್ಲ ಅನ್ನುವ ಕಾಲ ದೂರವಿಲ್ಲ ನಾವು ಎಲ್ಲರೂ ಹಿಂದೂಗಳಾಗಿದ್ದರೂ ಎಸ್ಟಿ ಸಮಾಜದ ೭% ಮೀಸಲಾತಿ ಜಾರಿ ಮಾಡಲಿಲ್ಲ ಆದರೆ ೨% ಜನಸಂಖ್ಯೆಗೆ ೧೦% ಮೀಸಲಾತಿ ಕೊಟ್ಟು ಬಿಜೆಪಿಯ ದ್ವಿಮುಖ ನೀತಿಯಾಗಿದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಡವರಿಗೆ ಗ್ಯಾರಂಟಿ ಕೊಡಲಾಗಿದೆ ಎಲ್ಲರಿಗೂ ಅವಕಾಶ ಕೊಟ್ಟಿದೆ ಬೇರೆ ರಾಜ್ಯದಲ್ಲಿ ಬಿಜೆಪಿ ಭರವಸೆ ಕೊಟ್ಟು ಜಾರಿ ಮಾಡಿಲ್ಲ ಎಂದರು.

ಸಭೆಯಲ್ಲಿ ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯ ಅಧ್ಯಕ್ಷ ವಿಜಯ ನಾಯಕ್, ಪ್ರಧಾನ ಕಾರ್ಯದರ್ಶಿ ದಿನೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ಸೈಯದ್ ಅಫ್ಸರ್, ಮುಖಂಡರಾದ ಕಠಾರಿಪಾಳ್ಯ ನರೇಂದ್ರ ಬಾಬು ಗಂಗಣ್ಣ, ಮಾಲೂರು ವೆಂಕಟರಾಮ್, ಕುಡುವನಹಳ್ಳಿ ಆನಂದ್, ಕೋಟೆ ಶ್ರೀನಿವಾಸ್, ಅಡ್ಡಗಲ್ ನರೇಶ್, ಕರಡುಗುರ್ಕಿ ಗೋವಿಂದ, ಬೈರಂಡಹಳ್ಳಿ ನಾಗೇಶ್, ವೆಲಗಲಬುರೆ ವಿಜಿ, ಬೈರಕೂರು ರಾಮಾಂಜಿ, ಗಡ್ಡರೂ ಪ್ತಕಾಶ್, ವಕ್ಕಲೇರಿ ರಾಜು, ವಾಸು, ಹರಟಿ ಸಂಪತ್, ಪಿಳ್ಳಪ್ಪ, ಬೆಳ್ಳೂರು ಮುರಳಿ, ಶಾಂತ ಮುಂತಾದವರು ಇದ್ದರು.

ಚಿತ್ರ - ಕೋಲಾರ ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಶನಿವಾರ ಕಾಂಗ್ರೆಸ್ ಎಸ್ಟಿ ಘಟಕದ ಸಂಘಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಎಐಸಿಸಿ ಆದಿವಾಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಶೋಭನ್ ಬಾಬು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande