
ವಿಜಯಪುರ, 03 ಜನವರಿ (ಹಿ.ಸ.) :
ಆ್ಯಂಕರ್ : ಸಾರ್ವಜನಿಕರಲ್ಲಿ ದೇಹದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಹೆಚ್ಚಾಗುತ್ತಿದ್ದು, ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯ ನಿವಾಸಿ ಟಿ. ಶಂಕ್ರಮ್ಮಾ(83) ಅವರ ಮೃತದೇಹವನ್ನು ಕುಟುಂಬ ಸದಸ್ಯರು ನಗರದ ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾನ ನೀಡಿದ್ದಾರೆ.
ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ದಿ. ಗದ್ದಿಕೇರಿ ಸಿದ್ದಣ್ಣ ಅವರ ಪತ್ನಿ ಮತ್ತು ಡಾ. ಬಸವರೆಡ್ಡಿ ಅವರ ತಾಯಿ ಶಂಕ್ರಮ್ಮಾ ಜನೇವರಿ 1 ರಂದು ಗುರುವಾರ ನಿಧನರಾಗಿದ್ದರು. ಡಾ. ಬಸವರೆಡ್ಡಿ ಅವರು ಬಿ.ಎಲ್.ಡಿ.ಇ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ವೈದ್ಯಕೀಯ ಪದವಿ ಪಡೆದಿದ್ದಾರೆ. ಶಂಕ್ರಮ್ಮಾ ಇಚ್ಛೆಯಂತೆ ಮೃತರ ಪಾರ್ಥಿವ ಶರೀರವನ್ನು ಕುಟುಂಬಸ್ಥರು ಶುಕ್ರವಾರ ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಸ್ಪತ್ರೆಯ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಆರ್. ಎಸ್. ಬುಲಗೌಡ ಅವರು ಪಾರ್ಥಿವ ಶರೀರವನ್ನು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande