ಕೋಗಿಲು ವಲಸಿಗರಿಗೆ ವಸತಿ ನೀಡುವುದು ಅಕ್ರಮ : ಆರ್. ಅಶೋಕ್‌
ಬೆಂಗಳೂರು, 03 ಜನವರಿ (ಹಿ.ಸ.) : ಆ್ಯಂಕರ್ : ಬೆಂಗಳೂರಿನ ಕೋಗಿಲು ಪ್ರಕರಣಕ್ಕೆ ಸಂಬಂಧಿಸಿದ ವಲಸಿಗರಿಗೆ ವಸತಿ ನೀಡುವ ಸರ್ಕಾರದ ಕ್ರಮ ಕಾನೂನು ಪ್ರಕಾರ ತಪ್ಪಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್‌ ಕಿಡಿಕಾರಿದ್ದಾರೆ. ಸರ್ಕಾರಿ ಆದೇಶದನ್ವಯ ಮಾತ್ರ ವಸತಿ ನೀಡಬೇಕು ಅದನ್ನು ಮೀರಿ ಕ್ರಮ ಕೈಗೊಳ್ಳುವು
ಕೋಗಿಲು ವಲಸಿಗರಿಗೆ ವಸತಿ ನೀಡುವುದು ಅಕ್ರಮ : ಆರ್. ಅಶೋಕ್‌


ಬೆಂಗಳೂರು, 03 ಜನವರಿ (ಹಿ.ಸ.) :

ಆ್ಯಂಕರ್ : ಬೆಂಗಳೂರಿನ ಕೋಗಿಲು ಪ್ರಕರಣಕ್ಕೆ ಸಂಬಂಧಿಸಿದ ವಲಸಿಗರಿಗೆ ವಸತಿ ನೀಡುವ ಸರ್ಕಾರದ ಕ್ರಮ ಕಾನೂನು ಪ್ರಕಾರ ತಪ್ಪಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್‌ ಕಿಡಿಕಾರಿದ್ದಾರೆ. ಸರ್ಕಾರಿ ಆದೇಶದನ್ವಯ ಮಾತ್ರ ವಸತಿ ನೀಡಬೇಕು ಅದನ್ನು ಮೀರಿ ಕ್ರಮ ಕೈಗೊಳ್ಳುವುದು ಅಕ್ರಮ ಎಂದರು.

ಸಂತ್ರಸ್ಥರಂತೆ ವರ್ತಿಸುತ್ತಿರುವವರಲ್ಲಿ ಹಲವರು ಬಾಂಗ್ಲಾದೇಶದಿಂದ ನುಸುಳಿರುವ ಅಕ್ರಮ ವಲಸಿಗರು ಎಂಬ ಗಂಭೀರ ಆರೋಪವನ್ನು ಅವರು ಮಾಡಿದರು. “ಇಂತಹವರಿಗೆ ಮನೆ ಜಾಗ ನೀಡಲು ಅವರೇನು ಕಾಂಗ್ರೆಸ್ಸಿಗರ ನೆಂಟರೇ?” ಎಂದು ಪ್ರಶ್ನಿಸಿದ ಅಶೋಕ್‌, ಸರ್ಕಾರ ಮಾನವೀಯತೆಯ ಹೆಸರಿನಲ್ಲಿ ಕಾನೂನನ್ನು ಮರೆಮಾಚುತ್ತಿದೆ ಎಂದು ಆರೋಪಿಸಿದರು.

ಕಾನೂನು ಸುವ್ಯವಸ್ಥೆ ಮತ್ತು ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿಲುವು ತಾಳಬೇಕು. ಅಕ್ರಮ ವಲಸಿಗರಿಗೆ ಯಾವುದೇ ರೀತಿಯ ಸೌಲಭ್ಯ ನೀಡುವುದರಿಂದ ತಪ್ಪು ಸಂದೇಶ ಹೋಗುತ್ತದೆ. ಈ ಕುರಿತು ಸರ್ಕಾರ ತಕ್ಷಣ ಸ್ಪಷ್ಟನೆ ನೀಡಬೇಕು ಹಾಗೂ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande