
ಕೊಪ್ಪಳ, 03 ಜನವರಿ (ಹಿ.ಸ.) :
ಆ್ಯಂಕರ್ : ನಾಳೆ ಸಂಜೆ ಗವಿಮಠದ ಕೈಲಾಸ ಮಂಟಪದಲ್ಲಿ ಶ್ರೀ ಗವಿಸಿದ್ದೇಶ್ವರ ಸಂಗೀತ ವಿದ್ಯಾಪೀಠದ ವತಿಯಿಂದ ಸಾಯಂಕಾಲ 6:00ಗಂಟೆಗೆ ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಇತರ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.
ಭಾಗ್ಯನಗರದ ಶ್ರೀನಿಧಿ ಡಿ.ಎಸ್, ಮಲ್ಲಾಪುರ್ ರಮ್ಯಾ ದೇವರಾಜ್, ಹೊಸಪೇಟೆಯ ಖುಷಿ,ತನ್ಮಯಿ ಕೆಎಂ, ಕೊಪ್ಪಳ ಭಾಗ್ಯನಗರದ ಸಂಜನಾ ಹಿರೇಮಠ ಮತ್ತು ಮೋಹಿತ್ ಕೆ, ಕೊಪ್ಪಳದ ಸಂಧ್ಯಾಶ್ರೀ ಮತ್ತು ಕಾವ್ಯಶ್ರೀ, ಗಂಗಾವತಿಯ ಪ್ರತಿಕ್ಷಾ ಮತ್ತು ಪ್ರಕೃತಿ, ಬಳ್ಳಾರಿಯ ಕುಮಾರಿ ಹಿಮಬಿಂದು ಅವರಿಂದ ಭಾರತ ನಾಟ್ಯಂ ನಡೆಯಲಿದೆ.
ಶ್ರೀ ಗವಿಸಿಧ್ಧೇಶ್ವರ ಸಂಗೀತ ವಿದ್ಯಾಪೀಠದ ಕಲಾವಿದರಾದ ಅನನ್ಯ, ರೇಗನ್ ರಾಜ್, ಮಾನಸಾ, ಶರತ್ ಇವರಿಂದ ವಚನ ಗಾಯನ. ಖುಷಿ, ಆರಾಧ್ಯ, ಭಾನುಪ್ರೀಯ ಇವರಿಂದ ದಾಸವಾಣಿ, ಸಾಯಿಸಮರ್ಥ, ಆದರ್ಶರಡ್ಡಿ, ವೇದಾವತಿ ಅವರಿಂದ ತತ್ವಪದ, ಸಮರ್ಥ ಎಂ, ಸನ್ನಿಧಿ ಎಂ ಅವರಿಂದ ಹಾರ್ಮೊನಿಯಂ ಸೋಲೋ. ನೇತ್ರಾವತಿ, ನಯನತಾರಾ, ಸಾನ್ವಿ, ಶ್ರೀನಿಧಿ ಅವರಿಂದ ಪರಿಸರ ಗೀತೆ, ಶ್ರೀ ಗೌರಿ, ಸನ್ನಿಧಿ ಅವರಿಂದ ಭಾವಗೀತೆ. ವೈಷ್ಣವಿ ಕೆ, ತನ್ಮಯಿ ಜೋಶಿ ಅವರಿಂದ ಜನಪದ ಗೀತೆಗಳಿಂದ ಸಂಗೀತ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸೃಜನ್ ರಡ್ಡಿ, ಸಹನಾ ಹಿರೇಮಠ, ಅಗಸ್ತ್ಯ ಹೆಸರೂರ್ ಪ್ರಾರ್ಥಿಸಲಿದ್ದಾರೆ.
ಶ್ರೀನಿವಾಸ್ ಜೋಶಿ, ಮಹಮ್ಮದ್ ರಿಜ್ವಾನ್ ಗಂಗಾವತಿ ತಬಲಾ ಸಾತ್, ಭಾಗ್ಯನಗರದ ಮುತ್ತಣ್ಣ ಬಡಿಗೇರ್ ತಾಳ ಸಾತ್ ನೀಡಲಿದ್ದಾರೆ. ಕಲಾವಿದರಾದ ವಿರೇಶ ಹಿಟ್ನಾಳ್ ನಿರ್ದೇಶಿಸಲಿದ್ದಾರೆ. ಕೊಪ್ಪಳ ತಾಲೂಕಿನ ಕಿನ್ನಾಳದ ಕುವೆಂಪು ಶತಮಾನೋತ್ಸವ ಶಾಲೆಯ ಕೃತಿಕಾ ಗುಳೆದಗುಡ್ಡ ಅವರಿಂದ ಯೋಗ ಪ್ರದರ್ಶನಗೊಳ್ಳಲಿದೆ ಎಂದು ಶ್ರೀ ಗವಿಮಠದ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್