
ಬೆಂಗಳೂರು, 03 ಜನವರಿ (ಹಿ.ಸ.) :
ಆ್ಯಂಕರ್ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಬದಲಿಗೆ ʼ ವಿಕಸಿತ ಭಾರತ್ -ಗ್ಯಾರಂಟಿ ಫಾರ್ ರೋಜ್ ಗಾರ್ ಅಂಡ್ ಅಜೀವಿಕ ಮಿಷನ್ ಯೋಜನೆ (ಜಿ ರಾಮ್ ಜಿ) ಜಾರಿ ಮಾಡಿರುವುದು ಕೇಂದ್ರ ಸರ್ಕಾರ ಉದ್ಯಮಿಗಳಿಗೆ ಮತ್ತು ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನರೇಗಾ ಬದಲಿಗೆ ಜಿ ರಾಮ್ ಜಿ ಜಾರಿ ಮಾಡಿ ದೇಶದ ಹಳ್ಳಿಯ ಬಡಜನರಿಗೆ ತೊಂದರೆ ಮಾಡಿದೆ. ಅವರಿಗೆ ಅನಾನುಕೂಲ ಮಾಡಿದೆ. ದೊಡ್ಡ ಉದ್ದಿಮೆದಾರರಿಗೆ
ಕಾಂಟ್ರಾಕ್ಡರ್‌ಗಳಿಗೆ ಅನುಕೂಲ ಮಾಡಿಕೊಡಲು ಮಾಡಿರುವ ಪ್ಲಾನ್ ಆಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಪಿಡಿಒ ಗಳು ಮಾಡುವ ಕೆಲಸವನ್ನು ಎಐ ಬಳಸಿ ಕೇಂದ್ರ ಸರ್ಕಾರ ಮಾಡುವುದೆಂದರೆ ಗ್ರಾಮ ಪಂಚಾಯಿತಿ ಅಧಿಕಾರ ಕಸಿದಂತೆ. ಸೆಟಲೈಟ್ ಬಳಸಿ ರಸ್ತೆ ಮಾಡ್ತೀವಿ ಅನ್ನೋದು ಹಾಸ್ಯಸ್ಪದ. ತರಾತುರಿಯಲ್ಲಿ ಯೋಜನೆ ಹೆಸರು ಬದಲಾಯಿಸಿದರು. ಗಾಂಧಿ ಅವರ ಹೆಸರು ಬದಲಾಯಿಸಿ ಪಿಚ್ಚರ್ ಓಡಿಸುತ್ತಾ ಇದ್ದಾರೆ ಎಂದರು.
ಮನರೇಗಾ ಬದಲಾಯಿಸಿರುವುದನ್ನು ದೇಶದಾದ್ಯಂತ ಪಕ್ಷಾತೀತವಾಗಿ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಜಾಬ್ ಕಾರ್ಡ್ ದಾರರು ವಿರೋಧಿಸಿ ಆಕ್ರೋಶವ್ಯಕ್ತಪಡಿಸಬೇಕು. ಪ್ರತಿಭಟನೆ ನಡೆಸಬೇಕು ಎಂದು ಆಗ್ರಹಿಸಿದರು.
ಗಾಂಧಿ ಕುರಿತು ಬಿಜೆಪಿಯವರಿಗೆ ಗೌರವ ಮತ್ತು ಪ್ರೀತಿ ಇಲ್ಲ. ಕಾಟಾಚಾರಕ್ಕೆ ಮೊಸಳೆ ಕಣ್ಣೀರು ಹಾಕುತ್ತಾರೆ. ಬಾಪು ಹಾಗೂ ಚರಕದ ಫೋಟೊ ಹಿಡಿದು ಪೋಸ್ ಕೊಡೊದು ಆರ್‌ಎಸ್‌ಎಸ್ ಅಜೆಂಡಾ. ದೇಶದ ಜಾತ್ಯತೀತತೆ ಕುರಿತು ಅವರು ನಂಬುವುದಿಲ್ಲ ಎಂದರು.
ಮನರೇಗಾ ಬದಲಾಯಿಸಿರುವುದರಿಂದ ದೇಶದ ೨೬ ಕೋಟಿಗೂ ಹೆಚ್ಚು ನರೇಗಾ ಕಾರ್ಮಿಕರಿಗೆ ದೊಡ್ಡ ಪ್ರಮಾಣದಲ್ಲಿ ಅನಾನುಕೂಲ ಆಗಲಿದೆ. ಇದರಲ್ಲಿ ಕನಿಷ್ಠ ವೇತನದ ಬಗ್ಗೆ ಮಾಹಿತಿ ಇಲ್ಲ. ಎಲ್ಲವನ್ನೂ ಗೊಂದಲ ಮಾಡಲಾಗಿದೆ. ಮನರೇಗಾ ಯೋಜನೆ ಉಳಿಸಲು ಸರ್ಕಾರ ಚಿಂತನೆ ಮಾಡ್ತ ಇದೆ. ಜಿ ರಾಮ್ ಜಿ ಬಗ್ಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೂ ಸ್ಪಷ್ಟತೆ ಇಲ್ಲ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa