
ಕೊಪ್ಪಳ, 03 ಜನವರಿ (ಹಿ.ಸ.) :
ಆ್ಯಂಕರ್ : ನಾಳೆ ಸಂಜೆ 5;30 ಕ್ಕೆ ಉಚ್ಛಾಯಿ (ಲಘು ರಥೋತ್ಸವ) ಶ್ರೀ ಗವಿಮಠದ ಆವರಣದಲ್ಲಿ ನಡೆಯಲಿದೆ.
ಗವಿಮಠದ ಜಾತ್ರೆಯ ಅಂಗವಾಗಿ ನಡೆಯುವ ಮಹಾರಥೋತ್ಸವದ ಹಿಂದಿನ ದಿನ ಲಘು ರಥವನ್ನು ಎಳೆಯುವದು ಒಂದು ಸತ್ ಸಂಪ್ರದಾಯ. ಇದಕ್ಕೆ ‘ಉಚ್ಛಾಯ’ ಎಂತಲೂ ಕರೆಯುತ್ತಾರೆ.
ಅಂದು ಸಾಯಂಕಾಲ ಲಘು ರಥೋತ್ಸವಕ್ಕೆ ಪೂಜೆ ಸಲ್ಲಿಸಿದ ನಂತರ ವಿಜೃಂಭಣೆಯಿಂದಭಕ್ತಿ-ಭಾವಗಳೊಂದಿಗೆ ಲಘು ರಥೋತ್ಸವ ನಡೆಯುವು ಪರಂಪರೆಯಾಗಿದೆ.
ಆಕರ್ಷಕ ನಂದಿಕೋಲು, ಪಂಜು, ಇಲಾಲುಗಳು, ವಾದ್ಯಗಳು, ಲಘು ರಥೋತ್ಸವಕ್ಕೆ ಮೆರಗು ತಂದು ಕೊಡುತ್ತವೆ. ಮಹಾರಥೋತ್ಸವು ಸಾಂಗತ್ಯವಾಗಿ, ನಿರ್ವಿಘ್ನವಾಗಿ, ಧಾರ್ಮಿಕ ಸದಾಶಯಗಳಂತೆ ಯಶಸ್ವಿಯಾಗಿ ನೆರವೇರಲಿ ಎಂಬುದೇ ಈ ಲಘು ರಥೊತ್ಸವದ ಉದ್ದೇಶ, ಮಹಾರಥೋತ್ಸವಕ್ಕೆ ಮುನ್ನುಡಿ ಮತ್ತು ಉದ್ದೇಶವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಮೋಬೈಲ್ 8123932545 ಸಂಖ್ಯೆಗೆ ಸಂಪರ್ಕಿಸಲು ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್