ಅರಣ್ಯ ನಿಯಂತ್ರಣ ಕೇಂದ್ರಕ್ಕೆ ಸಚಿವ ಖಂಡ್ರೆ ಚಾಲನೆ
ಬೆಂಗಳೂರು, 03 ಜನವರಿ (ಹಿ.ಸ.) : ಆ್ಯಂಕರ್ : ಬೆಂಗಳೂರು ನಗರದ ಅರಣ್ಯ ಭವನದಲ್ಲಿ ಇಂದು ರಾಜ್ಯಮಟ್ಟದ ಸಮಗ್ರ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರ ಹಾಗೂ 7 ವಿಭಾಗೀಯ ಕೇಂದ್ರಗಳನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀ
Khandre


ಬೆಂಗಳೂರು, 03 ಜನವರಿ (ಹಿ.ಸ.) :

ಆ್ಯಂಕರ್ : ಬೆಂಗಳೂರು ನಗರದ ಅರಣ್ಯ ಭವನದಲ್ಲಿ ಇಂದು ರಾಜ್ಯಮಟ್ಟದ ಸಮಗ್ರ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರ ಹಾಗೂ 7 ವಿಭಾಗೀಯ ಕೇಂದ್ರಗಳನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷವನ್ನು ನಿಯಂತ್ರಿಸಲು ತಂತ್ರಜ್ಞಾನ ಆಧಾರಿತ ಪರಿಹಾರ ನೀಡುವಲ್ಲಿ ಈ ಕಮಾಂಡ್ ಸೆಂಟರ್ ಪ್ರಮುಖ ಪಾತ್ರ ವಹಿಸಲಿದೆ. ಕಾಡಿನಂಚಿನ ಜನರು ಹಾಗೂ ಸಾರ್ವಜನಿಕರು ವನ್ಯಜೀವಿಗಳ ಸಂಚಾರ ಅಥವಾ ಅರಣ್ಯ ಅಪರಾಧಗಳ ಕುರಿತು ಇಲಾಖೆಯ ಸಹಾಯವಾಣಿ ಸಂಖ್ಯೆ 1926ಕ್ಕೆ ಕರೆ ಮಾಡಿದರೆ, ಮಾಹಿತಿ ತಕ್ಷಣವೇ ಸಂಬಂಧಿತ ವಿಭಾಗಕ್ಕೆ ರವಾನೆಯಾಗಲಿದೆ. ದೂರು ಸಂಪೂರ್ಣವಾಗಿ ಇತ್ಯರ್ಥವಾಗುವವರೆಗೆ ಹಿರಿಯ ಅಧಿಕಾರಿಗಳು ನೇರ ನಿಗಾ ವಹಿಸಲಿದ್ದಾರೆ ಎಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande