ಗವಿಸಿದ್ಧೇಶ್ವರ ಜಾತ್ರೆ : ಸೋಮವಾರ ಗವಿಮಠದ ಕಾರ್ಯಕ್ರಮಗಳು
ಕೊಪ್ಪಳ, 03 ಜನವರಿ (ಹಿ.ಸ.) : ಆ್ಯಂಕರ್ : ಜನವರಿ-5 ಸೋಮವಾರ ಬೆಳಿಗ್ಗೆ 04.00 ಮಹಾಮಹಿಮ ಶ್ರೀ ಗವಿಸಿದ್ಧೇಶ್ವರ ಕತೃ ಗದ್ದುಗೆಗೆ ರುದ್ರಾಭಿಷೇಕ, 10.30 ಗಂಟೆಗೆ ಗವಿಮಠದ ಆವರಣದಲ್ಲಿ ಪೋಲಿಸ್ ಇಲಾಖೆಯಿಂದ ಶ್ವಾನದಳ, ಕರಾಟೆ, ದಾಲಪಟ ಪ್ರದರ್ಶನ ನಡೆಯಲಿದೆ. ಸಾಯಂಕಾಲ 5:30 ಗಂಟೆಗೆ ಮಹಾಮಹಿಮ ಶ್ರ
ಗವಿಸಿದ್ಧೇಶ್ವರ ಜಾತ್ರೆ : ಸೋಮವಾರ ಗವಿಮಠದ ಕಾರ್ಯಕ್ರಮಗಳು


ಕೊಪ್ಪಳ, 03 ಜನವರಿ (ಹಿ.ಸ.) :

ಆ್ಯಂಕರ್ : ಜನವರಿ-5 ಸೋಮವಾರ ಬೆಳಿಗ್ಗೆ 04.00 ಮಹಾಮಹಿಮ ಶ್ರೀ ಗವಿಸಿದ್ಧೇಶ್ವರ ಕತೃ ಗದ್ದುಗೆಗೆ ರುದ್ರಾಭಿಷೇಕ, 10.30 ಗಂಟೆಗೆ ಗವಿಮಠದ ಆವರಣದಲ್ಲಿ ಪೋಲಿಸ್ ಇಲಾಖೆಯಿಂದ ಶ್ವಾನದಳ, ಕರಾಟೆ, ದಾಲಪಟ ಪ್ರದರ್ಶನ ನಡೆಯಲಿದೆ.

ಸಾಯಂಕಾಲ 5:30 ಗಂಟೆಗೆ ಮಹಾಮಹಿಮ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ನಡೆಯಲಿದೆ.

ನಡೆಯಲಿದ್ದು ಮಹಾರಥೋತ್ಸವಕ್ಕೆ ಮೇಘಾಲಯ ರಾಜ್ಯದ ರಾಜ್ಯಪಾಲರಾದ ಸಿ.ಎಚ್. ವಿಜಯಶಂಕರ್ ಅವರು ಚಾಲನೆ ನೀಡಲಿದ್ದಾರೆ.

ಮಹಾರಥೋತ್ಸವ ನಂತರ ಶ್ರೀಮಠದ ಕೈಲಾಸ ಮಂಟಪದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದ ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರುಸಾವಿರ ಮಹಾಸಂಸ್ಥಾನ ಮಠದ ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಡಾ.. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಶ್ರೀ ಕ್ಷೇತ್ರ ಕಾಗಿನೆಲೆಯ ಮಹಾಸಂಸ್ಥಾನ ಕನಕ ಗುರುಪೀಠದ ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ.

ಕಾಖಂಡಕಿ ಗುರುದೇವಾಶ್ರಮದ ಪರಮಪೂಜ್ಯ ಶ್ರೀಯೋಗಿಶ್ವರ ಮಹಾಸ್ವಾಮಿಗಳು ಉಪದೇಶಾಮೃತವನ್ನು ನೀಡಲಿದ್ದಾರೆ. ಶಿವಮೊಗ್ಗದ ಹಿಂದುಸ್ತಾನಿ ಗಾಯಕರಾದ ವಿದ್ವಾನ್ ನೌಶಾದ್ ಹಾಗೂ ವಿದ್ವಾನ್ ನಿಶಾದ್ ಹರ್ಲಾಪುರ್ ಇವರಿಂದ ಸ್ವರಸಂಧ್ಯಾ ಜುಗಲ್ಬಂದಿ ಸಂಗೀತ ಕಾರ್ಯಕ್ರಮ ಹಾಗೂ ಗಂಗಾವತಿಯ ನರಸಿಂಹ ಜೋಶಿ ಇವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ.

ಜಾತ್ರಾ ಮಹೋತ್ಸವದಲ್ಲಿ ಪಾಲ್ಗೋಳ್ಳುವ ಇತರ ಪರಮಪೂಜ್ಯರು: ಜಾತ್ರಾ ಮಹೋತ್ಸವದಲ್ಲಿ ಹಿರೇಸಿಂದೋಗಿ ಕಪ್ಪತ್ತೇಶ್ವರಮಠದ ಶ್ರೀಮನಿಪ್ರ ಚಿದಾನಂದ ಮಹಾಸ್ವಾಮಿಗಳು, ಮೈನಳ್ಳಿ-ಬಿಕನಹಳ್ಳಿ ಹಿರೇಮಠದ ಶ್ರೀ ಷ.ಬ್ರ.ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ನಿಡಗುಂದಿಕೊಪ್ಪ ಶಾಖಾಶಿವಯೋಗ ಮಂದಿರದ ಶ್ರೀಮನಿಪ್ರ ಶಿವಬಸವಮಹಾಸ್ವಾಮಿಗಳು, ಬಿಜಕಲ್ ಶ್ರೀಮನಿಪ್ರ ಶಿವಲಿಂಗ ಮಹಾಸ್ವಾಮಿಗಳು, ಭಾಗ್ಯನಗರದ ಶ್ರೀ ಶಂಕರಮಠದ ಶ್ರೀ ಸದ್ಗುರು ಶಿವರಾಮ ಕೃಷ್ಣನಂದ ಸ್ವಾಮಿಗಳು, ಹೂವಿನಹಡಗಲಿ ಶಾಖಾ ಗವಿಮಠದ ಪೂಜ್ಯರಾದ ಶ್ರೀಮನಿಪ್ರ ಡಾ.ಹಿರಿಶಾಂತವೀರ ಮಹಾಸ್ವಾಮಿಗಳು, ಸಂತೆಕಲ್ಲೂರು ಮಹಾಂತೇಶ್ವರಮಠದ ಶ್ರೀ ಷಬ್ರ ಮಹಾಂತಲಿಂಗ ಶಿವಾಚಾರ್ಯಮಹಾಸ್ವಾಮಿಗಳು, ಅಮಲಝರಿ-ಮೆಳ್ಳಿಗೇರಿಯ ಪರಮಪೂಜ್ಯ ಶ್ರೀ ಜ್ಞಾನಮಯಾನಂದ ಮಹಾಸ್ವಾಮಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅನ್ವೇಷಣೆ (ಜಿಜ್ಞಾಸುಗಳ ಪಯಣ) ಎಂಬ ಆಧ್ಯಾತ್ಮಿಕ ಕಾರ್ಯಕ್ರಮ: ಈ ಕಾರ್ಯಕ್ರಮದ ಜೊತೆಗೆ ಮೂರುದಿನಗಳ ಕಾಲ ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 01.30 ರವರೆಗೆ ಶ್ರೀ ಗವಿಮಠದ ಯಾತ್ರಿ ನಿವಾಸದ ಆವರಣದಲ್ಲಿರುವ ಶಾಂತವನದಲ್ಲಿ ಕಜ್ಜಿಡೋಣಿಯ ಪರಮ ಪೂಜ್ಯ ಶ್ರೀ ಕೃμÁ್ಣನಂದ ಶಾಸ್ತ್ರಿಗಳು ಹಾಗೂ ಬೆನಕನಹಳ್ಳಿ ಪರಮಪೂಜ್ಯ ಶ್ರೀ ದೇವಾನಂದ ಶರಣರು ಇವರುಗಳಿಂದ ಅನ್ವೇಷಣೆ (ಜಿಜ್ಞಾಸುಗಳ ಪಯಣ) ಎಂಬ ಆಧ್ಯಾತ್ಮಿಕ ಕಾರ್ಯಕ್ರಮ ನಡೆಯಲಿದೆ.

ಶ್ರೀ ಗವಿಸಿದ್ದೇಶ್ವರ ಮಹಾತ್ಮೆ ನಾಟಕ ಪ್ರದರ್ಶನ: ಜನವರಿ-5 ಮತ್ತು 6 ಎರಡು ದಿನಗಳ ಕಾಲ ಹಿರೇಬಗನಾಳ ಗ್ರಾಮದ ಶ್ರೀ ಗವಿಸಿದ್ದೇಶ್ವರ ಸೇವಾ ನಾಟ್ಯ ಸಂಘ ಇವರಿಂದ ರಾತ್ರಿ 10;30ಕ್ಕೆ ಮಠದ ಆವರಣದಲ್ಲಿರುವ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದ ಹತ್ತಿರವಿರುವ ಪಾದಗಟ್ಟಿಯ ಹತ್ತಿರ ಶ್ರೀ ಗವಿಸಿದ್ದೇಶ್ವರ ಮಹಾತ್ಮೆ ನಾಟಕ ಪ್ರದರ್ಶನಗೊಳ್ಳಲಿದೆ.

ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆ ವತಿಯಿಂದ ದಿನಾಂಕ: 05-01-2026 ರಿಂದ 14-01-2026 ರ ವರಗೆ 10 ದಿನಗಳ ಕಾಲ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಜಿಲ್ಲಾ ಮಟ್ಟದ ಫಲ ಪುಷ್ಪ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗವಿಮಠ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande